spot_img
Monday, May 4, 2026
spot_img

ಮೊಬೈಲ್ ಇಲ್ಲದೇ ಬದುಕಿಲ್ಲ ಎಂಬಂತಾಗಿರುವ ಕಾಲಘಟ್ಟದಲ್ಲಿ ಇಂತಹ ಶಿಬಿರಗಳು ಅತ್ಯಗತ್ಯ: ಕೃಷಿಕ ರವೀಂದ್ರ ಐತಾಳ್

ತೆಕ್ಕಟ್ಟೆ: ಏಪ್ರಿಲ್, 27: ಕಲೆಯು ಸಂತೋಷದಿಂದಿರುವಂತೆ ಮಾಡುತ್ತದೆ. ಕಲೆಯು ಮಕ್ಕಳ ಮೂಲಕ ಅರಳಿದರೆ ಸಾಂಸ್ಕೃತಿಕ ಜಗತ್ತಿಗೆ ಕಂಪನ್ನು ಈಯುತ್ತದೆ. 18 ದಿನಗಳ ಕಾಲ ಮೊಬೈಲ್ ಬಳಸದೇ ಮಕ್ಕಳನ್ನು ಆಟ ಪಾಠಗಳಿಂದ ರಂಜಿಸುವ ಕಾರ್ಯ ಶ್ರೇಷ್ಠವಾಗಿದೆ. ಮೊಬೈಲ್ ಇಲ್ಲದೇ ಬದುಕಿಲ್ಲ ಎಂಬಂತಾಗಿರುವ ಕಾಲಘಟ್ಟದಲ್ಲಿ ಇಂತಹ ಶಿಬಿರಗಳು ಅತ್ಯಗತ್ಯ ಎಂದು ರಜಾರಂಗು ಸಮಾರೋಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧಕ ಕೃಷಿಕ ರವೀಂದ್ರ ಐತಾಳ್ ಮಾತನ್ನಾಡಿದರು.
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ಶ್ರೀಪರ್ಣ ಯಕ್ಷಬಳಗ ತೆಕ್ಕಟ್ಟೆ, ಯಶಸ್ವೀ ಮಹಿಳಾ ಬಳಗ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ ನಡೆದ ರಜಾರಂಗು ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಏಪ್ರಿಲ್ 27ರಂದು ರವೀಂದ್ರ ಐತಾಳ್ ಮಾತನ್ನಾಡಿದರು.
ಉದ್ಯಮಿ ಸುಬ್ರಾಯ ಆಚಾರ್ಯ ಮಾತನ್ನಾಡಿ, ಶಿಬಿರವನ್ನು ದಶಮಾನೋತ್ಸವ ಮಾಡಿ ನಿಲ್ಲಿಸಬೇಡಿ. ಒಂದಷ್ಟು ಮಕ್ಕಳು ಇದರಿಂದ ಪ್ರಯೋಜನ ಪಡೆಯುವಲ್ಲಿ ವಂಚಿತರಾಗಬಹುದು ಎಂದರು. ಉದ್ಯಮಿ ವೆಂಕಟೇಶ ಪ್ರಭು ಮಾತನ್ನಾಡಿ ಉಚಿತ ಶಿಬಿರ ನಡೆಸುವಾಗ ಸಾಂಸ್ಕೃತಿಕ ಚಿಂತಕರು, ದಾನಿಗಳು ನೆರವನ್ನು ನೀಡಿ ಸಹಕರಿಸಬೇಕು ಎಂದರು. ಶಿಬಿರದ ನಿರ್ದೇಶಕ ರೋಹಿತ್ ತೀರ್ಥಹಳ್ಳಿ ಇವರನ್ನು ಅಭಿನಂದಿಸಲಾಯಿತು. ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಸುಧಾಕರ ಶೆಟ್ಟಿ, ಯಶಸ್ವಿ ಮಹಿಳಾ ಬಳಗದ ಅಧ್ಯಕ್ಷೆ ಶಾರದಾ ಹೊಳ್ಳ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರೋಹಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಶಿಬಿರಾರ್ಥಿಗಳಿಂದ “ವಜ್ರ ದುಂಬಿ” ದೊಂದಿ ಬೆಳಕಿನ ಯಕ್ಷಗಾನ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!