spot_img
Saturday, May 2, 2026
spot_img

ಮದರ್ ತೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಶಂಕರನಾರಾಯಣ: PRE-KG ಯಿಂದ PUC ಪ್ರವೇಶಾತಿಗೆ ಆಹ್ವಾನ.

ಶಂಕರನಾರಾಯಣ: ಮದರ್ ತೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಶಂಕರನಾರಾಯಣ. ಇಲ್ಲಿ PRE-KG ಇಂದ PUC ವರೆಗೂ ಆರಂಭ ದಿಂದ ಸಾಧನೆಯವರೆಗೂ ಸುಮಾರು 1200 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಳೆದ 28 ವರ್ಷಗಳಿಂದ ನೀಡುತ್ತಿದ್ದು, ಈ ವರ್ಷ SSLC ಯಲ್ಲಿ ತೊಂಬಟ್ಟು ಗ್ರಾಮದ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ Rank ಗಳಿಸಿರುವುದಲ್ಲದೆ 50 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆ 100% ಫಲಿತಾಂಶ ದಾಖಲಿಸಿದೆ.

PUC ವಿಭಾಗದಲ್ಲಿ ಸಿದ್ದಾಪುರ, ಅಮಾಸೆಬೈಲು, ಶಂಕರನಾರಾಯಣ, ಕಾರೆಬೈಲು ಗ್ರಾಮೀಣ ಪ್ರದೇಶದ 7 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ Rank ಪಡೆಯುದರೊಂದಿಗೆ 92 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 83 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ 100% ಫಲಿತಾಂಶದೊಂದಿಗೆ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ನ ಗಮನಾರ್ಹ ಸಾಧನೆಯಾಗಿದೆ.

ಮದರ್ ತೆರೇಸಾ ಪದವಿಪೂರ್ವ ಕಾಲೇಜುದಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿದ್ದು, ಅತಿ ಕಡಿಮೆ ವೆಚ್ಚದಲ್ಲಿ ಅತ್ಯುತ್ಕಷ್ಟ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಯುಗದ ಅಗತ್ಯಗಳಿಗೆ ತಕ್ಕಂತೆ ರೂಪಿಸುತ್ತಾ ಬರಲಾಗುತ್ತಿದ್ದು, ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಲಕ್ಷ್ಯಾಧಾರಿತ ಅಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ.

PCMBಹಾಗೂ PCMCs ಸಂಯೋಜನೆಗಳ ಮೂಲಕ ಪಿಯು ಬೋರ್ಡ್ ಪಠ್ಯಕ್ರಮದ ಜೊತೆಗೆ JEE MAINS, NEET ಹಾಗೂ KCET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮನ್ವಯಿತ ತರಬೇತಿ ನೀಡಲಾಗುತ್ತಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿಯೂ ಹಾಗೂ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿರುವ ಜೈಸನ್ ಬಿ. ಲೂಯಿಸ್ ಅವರ ದಕ್ಷ ನೇತೃತ್ವದಲ್ಲಿ ವಿಜ್ಞಾನ ವಿಭಾಗದಲ್ಲಿ ಹಲವು ಶೈಕ್ಷಣಿಕ ಸುಧಾರಣೆಗಳನ್ನು ಅಳವಡಿಸಲಾಗಿದ್ದು, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಬೋಧನಾ ವ್ಯವಸ್ಥೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಮತ್ತಷ್ಟು ಬಲಪಡಿಸಲಾಗಿದೆ. ಅಧ್ಯಾಯವಾರು ಅಭ್ಯಾಸ, ನಿಯಮಿತ MOCK TEST ಗಳು ಹಾಗೂ ತೀವ್ರ ತರಬೇತಿ ಮೂಲಕ ವಿದ್ಯಾರ್ಥಿಗಳ ಸಿದ್ಧತೆಯನ್ನು ಬಲಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ ನೀಡದೆ, ಸ್ವಾಭಾವಿಕವಾಗಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಉತ್ತಮ ಫಲಿತಾಂಶ ಸಾಧನೆಗೆ ಶ್ರಮಿಸಲಾಗುತ್ತಿದೆ. ಜೊತೆಗೆ ಪಿಯು ಬೋರ್ಡ್ ಪರೀಕ್ಷೆಗೂ ಸಮಾನ ಮಹತ್ವ ನೀಡಲಾಗುತ್ತಿದ್ದು, ಪಠ್ಯಕ್ರಮದ ಅವಿಭಾಜ್ಯ ಭಾಗವಾದ ಪ್ರಯೋಗಾಲಯ ತರಗತಿಗಳನ್ನು ಯಾವುದೇ ತಾತ್ಕಾಲಿಕ ಕ್ರಮಕ್ಕೆ ಸೀಮಿತಗೊಳಿಸದೆ, ವರ್ಷಪೂರ್ತಿ ನಿಯಮಿತವಾಗಿ ಹಾಗೂ ಕ್ರಮಬದ್ಧವಾಗಿ ನಡೆಸಲಾಗುತ್ತಿದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮತೋಲಿತ ಸಾಧನೆಗೆ ಒತ್ತು ನೀಡಲಾಗುತ್ತಿದೆ.

ಇದರ ಜೊತೆಗೆ ಈ ಶೈಕ್ಷಣಿಕ ವರ್ಷದಿಂದ ಭಾರತದ ಪ್ರಸಿದ್ಧ ಶಿಕ್ಷಣ ಸಂಸ್ಥೆ VEDANTU. BANGALORE ಇದರ ಸಹಯೋಗವನ್ನು ಸ್ಥಾಪಿಸಲಾಗಿದ್ದು, ಪೂರಕ ಅಧ್ಯಯನ ವೇದಿಕೆ, ದಿನದ 24 ಗಂಟೆಗಳ ಸಂಶಯ ನಿವಾರಣಾ ವ್ಯವಸ್ಥೆ, ನಿಯಮಿತ ಪರೀಕ್ಷಾ ಸರಣಿಗಳು ಹಾಗೂ NATIONAL LEVEL ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ತರಗತಿಗಳ ಜೊತೆಗೆ ಹೆಚ್ಚುವರಿ ಶೈಕ್ಷಣಿಕ ಬೆಂಬಲ ಒದಗಿಸಲಾಗುತ್ತಿದೆ.

ಈ ಕಾಲೇಜಿನ ವಾಣಿಜ್ಯ ವಿಭಾಗವು ಅತ್ತುತ್ತಮ ನುರಿತ ಬೋಧಕ ವೃಂದದೊಂದಿಗೆ ವಿದ್ಯಾರ್ಥಿಗಳಲ್ಲಿ ಪ್ರೌಢಿಮೆಯನ್ನು ಬೆಳೆಸಿ, ಅವರೊಳಗೆ ಅಡಗಿರುವ ಸಾಮರ್ಥ್ಯವನ್ನು ಹೊರತೆಗೆಯುವ ಮೂಲಕ ಉನ್ನತ ಗುರಿಗಳತ್ತ ಪ್ರೇರೇಪಿಸುತ್ತಾ ಬರುತ್ತಿದೆ. ಕಾಲೇಜಿಗೆ ಸೇರುವಾಗ ಎಲ್ಲ ವಿದ್ಯಾರ್ಥಿಗಳಿಗೂ ಉನ್ನತ ಅಂಕಗಳ ಗುರಿಯಿರದೇ ಇರಬಹುದು; ಆದರೆ ಸೂಕ್ತ ಮಾರ್ಗದರ್ಶನದ ಮೂಲಕ ಅವರನ್ನು ರಾಜ್ಯಮಟ್ಟದ ಸಾಧನೆಗಳತ್ತ ಕೊಂಡೊಯ್ಯುತ್ತಿರುವುದು ಇಲ್ಲಿನ ವಿಶೇಷತೆ.

ಇಲ್ಲಿನ ಬೋಧನಾ ವಿಧಾನವೇ ಇಲ್ಲಿನ ಪ್ರಮುಖ ಶಕ್ತಿಯಾಗಿದ್ದು, ಇಲಾಖಾ ಪಠ್ಯಕ್ರಮದ ಜೊತೆಗೆ CA/ CS ಹಾಗೂ CMA ತರಬೇತಿಯನ್ನು ಸಹ ಸಮಾನವಾಗಿ ನೀಡಲಾಗುತ್ತಿದೆ. ಸೂಕ್ತ ಯೋಜನೆ, ನಿಯಮಿತ ಅಭ್ಯಾಸ ಮತ್ತು ವೈಯಕ್ತಿಕ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ದೃಢತೆ ಬೆಳೆಸಲಾಗುತ್ತಿದೆ. ಕಳೆದ ವರ್ಷ CA FOUNDATION ಪರೀಕ್ಷೆಯಲ್ಲಿ ಸಂಸ್ಥೆಯ 9 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಉತ್ತಮ ಫಲಿತಾಂಶ ಸಾಧಿಸಿರುವುದು ಇದರ ಸ್ಪಷ್ಟ ನಿದರ್ಶನವಾಗಿದೆ.

ಈ ವರ್ಷದ ವಾರ್ಷಿಕ ಪರೀಕ್ಷೆಗೆ ವಿಜ್ಞಾನ ವಿಭಾಗದ 110 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು 37 ವಿದ್ಯಾರ್ಥಿಗಳು, 80-90% ಅಂಕಗಳನ್ನು 41 ವಿದ್ಯಾರ್ಥಿಗಳು ಹಾಗೂ ಉಳಿದವರು 70-80% ಅಂಕಗಳನ್ನು ಪಡೆದಿದ್ದಾರೆ. ಒಟ್ಟು 56 ಮಂದಿ ಡಿಸ್ಟಿಂಕ್ಷನ್ ಹಾಗೂ 54 ಮಂದಿ ಉನ್ನತ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗದ 65 ವಿದ್ಯಾರ್ಥಿಗಳಲ್ಲಿ 64 ಮಂದಿ ತಮ್ಮ ಎಸ್‍ಎಸ್‍ಎಲ್ಸಿ ಅಂಕಗಳನ್ನು ಮೀರಿಸಿರುವುದು ಗಮನಾರ್ಹವಾದ ವಿಷಯ.ಒಟ್ಟು 14 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು, 14 ವಿದ್ಯಾರ್ಥಿಗಳು 90-95%, 21 ವಿದ್ಯಾರ್ಥಿಗಳು 80–90% ಹಾಗೂ ಉಳಿದ 16 ವಿದ್ಯಾರ್ಥಿಗಳು 70-80% ಅಂಕಗಳನ್ನು ಪಡೆದಿದ್ದಾರೆ. ಒಟ್ಟು 36 ಮಂದಿ ಡಿಸ್ಟಿಂಕ್ಷನ್ (85% ಕ್ಕಿಂತ ಹೆಚ್ಚು) ಪಡೆದಿದ್ದು, ಉಳಿದ ಎಲ್ಲಾ ವಿದ್ಯಾರ್ಥಿಗಳು 70% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಗಳು ವಿದ್ಯಾರ್ಥಿಗಳ ಯಶಸ್ಸಿನ ಜೊತೆಗೆ ಸಂಸ್ಥೆಯ ದೃಢ ಸಂಕಲ್ಪವನ್ನೂ ಪ್ರತಿಬಿಂಬಿಸುತ್ತಿವೆ.

ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣವು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಅಂಕಗಳ ಸಾಧನೆಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ. ಸಂಸ್ಥೆ ಪ್ರಾರಂಭವಾದ ಸಮಯದಿಂದಲೂ ಪಠ್ಯಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡಲಾಗುತ್ತಿದೆ. ಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಹಪಾಠ್ಯ ಚಟುವಟಿಕೆಗಳಿಗೂ ಸಮಾನ ಅವಕಾಶ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲಾಗುತ್ತಿದೆ. ಪ್ರಾಮಾಣಿಕತೆ ಮತ್ತು ಗುಣಮಟ್ಟವನ್ನು ಆಧಾರವಾಗಿರಿಸಿಕೊಂಡು ತನ್ನದೇ ಹಿಂದಿನ ವರ್ಷದ ಸಾಧನೆಗಳನ್ನು ಮೀರಿಸುವ ಗುರಿ ಈ ಸಂಸ್ಥೆಯದ್ದಾಗಿದ್ದು, ಅದೇ ಹಾದಿಯಲ್ಲಿ ಸಂಸ್ಥೆ ಮುಂದುವರೆಯುತ್ತಿದೆ.

ಪ್ರವೇಶಾತಿ ಪ್ರಕ್ರಿಯೆಯಲ್ಲಿ ಅಂಕಗಳ ಆಧಾರದ ಮೇಲೆ ಯಾವುದೇ ನಿರ್ಬಂಧವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಕಡಿಮೆ ಅಂಕಗಳೊಂದಿಗೆ ಸೇರಿದ ವಿದ್ಯಾರ್ಥಿಗಳೂ ಇಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿದ್ದಾರೆ.ಇಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡವಿಲ್ಲ; ಸಮಯೋಚಿತ ಪ್ರೇರಣೆ ಮಾತ್ರ ಇದೆ. ಬಲವಂತದ ಬೋಧನೆಗಿಂತ, ಅವರೊಳಗಿನ ಕನಸುಗಳನ್ನು ಜಾಗೃತಗೊಳಿಸುವುದರ ಮೂಲಕ ಕಲಿಕಾ ಪ್ರಕ್ರಿಯೆಯನ್ನು ಉತ್ತೇಜಿಸಲಾಗುತ್ತದೆ. ಈ ವಿಭಾಗದಲ್ಲಿ ಎಸ್‍ಎಸ್‍ಎಲ್ಸಿಯಲ್ಲಿ 46.66% ಪಡೆದ ವಿದ್ಯಾರ್ಥಿಯೂ ಪಿಯುಸಿಯಲ್ಲಿ 76.6% ಗಳಿಸಿರುವುದು ಇದಕ್ಕೊಂದು ಸ್ಪಷ್ಟ ಉದಾಹರಣೆ. ಇದು ಒಬ್ಬ ವಿದ್ಯಾರ್ಥಿಯ ಸಾಧನೆಯಷ್ಟೇ ಅಲ್ಲ, ಸಂಪೂರ್ಣ ಬ್ಯಾಚ್ನ ಪರಿವರ್ತನೆಯ ಕಥೆಯಾಗಿದೆ.

ಕುಂದಾಪುರ ತಾಲೂಕಿನಲ್ಲಿ ಮಿತವಾದ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಈ ಕಾಲೇಜು ಪೋಷಕರಲ್ಲಿ ವಿಶ್ವಾಸ ಗಳಿಸಿದೆ. ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಥೆಯ ಬೋಧನಾ ವಿಧಾನ ಮತ್ತು ಮಾರ್ಗದರ್ಶನ ಪರಿಣಾಮಕಾರಿಯಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕುರಿತು ಪೋಷಕರಲ್ಲಿ ವಿಶ್ವಾಸ ಹಾಗೂ ಆಸಕ್ತಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಪಠ್ಯಕ್ರಮದ ಸಮತೋಲಿತ ನಿರ್ವಹಣೆ, ಸ್ಪರ್ಧಾತ್ಮಕ ತರಬೇತಿ ಮತ್ತು ಫಲಿತಾಂಶಗಳ ಸ್ಥಿರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶದ ಬಗ್ಗೆ ಪೋಷಕರ ಸಕಾರಾತ್ಮಕ ಪ್ರತಿಕ್ರಿಯೆ ಹೆಚ್ಚುತ್ತಿದೆ.

ಕಿಂಡರ್ ಗಾರ್ಟನ್ ಮಕ್ಕಳಿಗಾಗಿ ಪ್ರತ್ಯೇಕ ಕಟ್ಟಡ, activity-oriented teaching ವಿಧಾನ, ಅನುಭವಸಂಪನ್ನ ಶಿಕ್ಷಕಿಯರು ಹಾಗೂ ಕಾಳಜಿ ವಹಿಸುವ ಸಹಾಯಕಿಯರೊಂದಿಗೆ ಮಕ್ಕಳಿಗೆ ಆಕರ್ಷಕ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಎಡುಸ್ಪೋರ್ಟ್ಸ್ ಬೆಂಗಳೂರು ಕಾರ್ಯಕ್ರಮಗಳ ಮೂಲಕ ದೈಹಿಕ ಚಟುವಟಿಕೆಗೂ ಉತ್ತೇಜನ ನೀಡಲಾಗುತ್ತಿದೆ.

ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಕರಾಟೆ, ಹೆಜ್ಜೆ ತರಗತಿಗಳು, ಅಬಾಕಸ್ ವೇದಿಕ್ ಮಾಥ್ಸ್ ಮುಂತಾದ ಮೌಲ್ಯವರ್ಧಕ ತರಗತಿಗಳು, 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕ್ಲಬ್ ಚಟುವಟಿಕೆಗಳು ವೇದಿಕ್ ಮಾಥ್ಸ್ ಹಾಗೂ ಒಂದನೇ ತರಗತಿಯಿಂದ ಒಲಿಂಪಿಯಾಡ್ ನಲ್ಲಿ ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳ ಮೂಲಕ ನಿರಂತರ ತರಗತಿಗಳಿಂದ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗುತ್ತದೆ .

ಭಾಷಾ ಸಂವಹನ ಕೌಶಲ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಇಂಗ್ಲಿಷ್ ಬರ್ಲಿಂಗ್ಟನ್ ಸಂಸ್ಥೆಯೊಂದಿಗೆ ಸಹಭಾಗಿತ್ವದ ಮೂಲಕ ಆಧುನಿಕ ವಿಧಾನಗಳಲ್ಲಿ ಭಾಷಾಭಿವೃದ್ಧಿ ತರಗತಿಗಳನ್ನು ನಡೆಸಲಾಗುತ್ತಿದೆ. ಹ್ಯಾಪಿ ಅವರ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಮಾತನಾಡುವ ಮತ್ತು ಬರೆಯುವ ಕೌಶಲ್ಯಗಳನ್ನು ಇನ್ನಷ್ಟು ವೃದ್ಧಿಸಲಾಗುತ್ತಿದೆ.9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಡಿಪಾಯ ಹಾಕುವ ತರಬೇತಿ ನೀಡಲಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿದ್ದರೂ ರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಒದಗಿಸುವ ಧ್ಯೇಯದೊಂದಿಗೆ ಈ ಸಂಸ್ಥೆ ನಿರಂತರವಾಗಿ ಪ್ರಗತಿಪಥದಲ್ಲಿ ಸಾಗುತ್ತಿದೆ. ಕಡಿಮೆ ಪ್ರವೇಶ ಶುಲ್ಕದಲ್ಲಿಯೇ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಪಾಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ವೆವಸ್ಥೆಯನ್ನು ಉತ್ತಮ ಪಡಿಸಲು ಈಗಾಗಲೇ ಇರುವ 15ವಾಹನದ ಜೊತೆಗೆ ಮತ್ತೆ 3 ಶಾಲಾವಾಹನವನ್ನು ಪ್ರತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೆವಸ್ಥಿತವಾಗಿ ರೂಪಿಸಲಾಗಿದೆ.

ಇದೀಗ 2026-27ನೇ ಸಾಲಿನ ಪ್ರವೇಶ ಪ್ರಾರಂಭವಾಗಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಿತ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಆಸಕ್ತಿ ಹೊಂದಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ಪ್ರವೇಶಾತಿ ಪಡೆಯಲು ಆಹ್ವಾನಿಸಲಾಗಿದೆ.

ಸಂಸ್ಥೆಯ ಶಾಲಾವಾಹನ ಸಂಚಾರ ಮಾರ್ಗಗಳು:
ಎಡಮೊಗೆ, ಬಾಗಿಮನೆ, ಹೊಸಂಗಡಿ, ಕೆರೆಕಟ್ಟೆ, ಹೆನ್ನಾಬೈಲು, ಚೆನ್ನಾಬೈಲು, ಸಿದ್ದಾಪುರ, ಕೆಳಪೇಟೆ, ಶಂಕರನಾರಾಯಣ.
ಚಕ್ರ ಮೈದಾನ, ಹಳ್ಳಿಹೊಳೆ, ಬರೆಗುಂಡೆ, ಕಮಲಶಿಲೆ, ಕರಿಮನೆ, ಸಿದ್ದಾಪುರ, ಐರಬೈಲ್, ಕಾರೇಬೈಲು, ಶಂಕರನಾರಾಯಣ.
ತೆಂಕಬೈಲು, ಕುದ್ರೇಬೇರು ಕಟ್ಟೆ , ಬಾಂಡ್ಯಾ, ಕೊಡ್ಲಾಡಿ, ಮೇಡ್ರಿ, ಗೊರಟೆ, ಮೂಡುಬಗೆ, ಬಾಳ್ಕಟ್ಟು, ಶಾನ್ಕಟ್ ಬ್ರಿಡ್ಜ್, ಕೊಂಡಳ್ಳಿ, ಶಂಕರನಾರಾಯಣ.
ತೊಂಬಟ್ಟು, ಕಳ್ಳಿನಜೆಡ್ಡು, ಮಚ್ಚಟ್ಟು, ಚಿಟ್ಟೆ, ಉಳ್ಳೂರು74, ಕುಂಬಾರ್ಜೆಡ್ಡು, ಕಾರೇಬೈಲು, ಶಂಕರನಾರಾಯಣ.
ಹೊಳೆಶಂಕರನಾರಾಯಣ, ಜಾಂಬೂರು, ಹೆಗ್ಗೋಡ್ಲು, ಕಡ್ರಿ, ಸಿದ್ದಾಪುರ, ಐರಬೈಲ್, ಕೊಡ್ಗಿ, ಚಾರ್ನಳ್ಳಿ, ಚಿತ್ತೇರಿ, ಕುಪ್ಪಾರು, ಹೆಬ್ಬಾಡಿ, ಸೌಡ, ಶಂಕರನಾರಾಯಣ.
ಹೆಬ್ಬಾರ್ನಡಿ, ಕೊರಬೈಲು, ಅಸೋಡಿ, ನೇರಳಕಟ್ಟೆ, ವಾಲ್ತೂರು, ಬೈಲೂರು, ಹದ್ದೂರು, ಶಂಕರನಾರಾಯಣ.
ಕೆಲ, ಜಡ್ಡಿನ ಗದ್ದೆ, ಮಾಂಡವಿ ಶಂಕರನಾರಾಯಣ, ನೀಲ್ಸಕಲ್ ಕ್ರಾಸ್, ಅಮಾಸೆಬೈಲು, ಹೆಮ್ಮಣ್ಣು, ಅಂಗನವಾಡಿ ಹೊಸಬಾಳು, ಮಂಗನಾಡಿ, ಮಾಂಜೂರು, ನಂದಿಕೋಣ, ಹಾಲಾಡಿ, ಶಂಕರನಾರಾಯಣ.
ಕಕ್ಕುಂಜೆ, ಕಕ್ಕುಂಜೆ ಕರ್ನಾಟಕ ಬ್ಯಾಂಕ್, ಹಾಲಾಡಿ ಪ್ರೈಮರಿ ಸ್ಕೂಲ್, tvs ಶೋ ರೂಮ್, ಮಹಾಲಕ್ಷ್ಮಿ ಲೇಔಟ್, ಕಕ್ಕುಂಜೆ ಕ್ರಾಸ್, ಕಕ್ಕುಂಜೆ ಕ್ರಾಸ್,ಶೇರ್ಡಿ ಹಕ್ಲಾಡಿ ಕಕ್ಕುಂಜೆ ಕ್ರಾಸ್, ಕಕ್ಕುಂಜೆ ಮೈನ್ ರೋಡ್, ಶಂಕರನಾರಾಯಣ.
ತಾರೀಕಟ್ಟೆ, ನಂಚಾರು, ಗೋಳಿಯಂಗಡಿ, ಹೈಕಾಡಿ, ಹಾಲಾಡಿ, ಶಂಕರನಾರಾಯಣ.
ಬಿಲ್ಲಾಡಿ,ಚೋರಾಡಿ, ಚೇಕ್ರಿ,ಮುದುರಿ, ವಂಡಾರ್,ಹಾಲಾಡಿ, ಕೆಇಬಿ, ಕಟ್ಟೆಮಕ್ಕಿ ಶಂಕರನಾರಾಯಣ.
ಐರಬೈಲ್ ಕ್ರಾಸ್, ಉಳ್ಳೂರು ಕ್ರಾಸ್, ಬಂಟಕೋಡು, ಹೊಸಬಾಳು, ಕುಂಬಾರಮಕ್ಕಿ, ಶಂಕರನಾರಾಯಣ.
ಗುಮ್ಮಹೊಲ, ಅಲ್ಬಾಡಿ, ಯಳಂತೂರು, ಬೆಳ್ವೆ, ತಾರೇಕೋಡ್ಲು, ಗೋಳಿಯಂಗಡಿ, ಶಂಕರನಾರಾಯಣ.
ಗುಲ್ವಾಡಿ, ಕಂಡ್ಲೂರು, ಬಳ್ಕೂರು, ಕಾವ್ರಾಡಿ, ದೂಪದಕಟ್ಟೆ, ಹಳ್ನಾಡು, ನೆಲ್ಲಿಕಟ್ಟೆ, ಅಂಪಾರು, ನುಕ್ಯಾಡಿ, ನೀರಕೋಡ್ಲು, ಕಲ್ಗದ್ದೇ, ಹೆರಾವಳ್ಳಿ.
ದುರ್ಗಾ ಸ್ಟೋರ್, ಎಸ್‍ಎಸ್ ಲೇಔಟ್, ರಥ ಬೀದಿ, ಸುರ್ಜನ್ ಕೊಡ್ಲು, ಶ್ಯಾಮಲಾ ಪ್ಯಾಲೇಸ್, ಜನ್ಸಾಲೆ, ಬಡಬಾಳು, ಚಿತ್ತೇರಿ, ಶಂಕರನಾರಾಯಣ.
ಕೂಡಲ್ ಗಾವಳಿ, ಬಿದ್ಕಲಕಟ್ಟೆ ಗಾವಳಿ, ಕೊಳಂಕಲ್, ಬಿದ್ಕಲ್ ಕಟ್ಟೆ, ಜನ್ನಾಡಿ, ಜನ್ನಾಡಿ ಮುರ್ಕೆ ಮಣಿಗೇರಿ, ಸೌಡ, ಶಂಕನಾರಾಯಣ.
ಹೆರಿಬೈಲು,ಯಡಮೊಗ್ಗೆ,ಮಠಹಕ್ಲು, ಕಾರೂರು, ಕರೆಕಟ್ಟೆ, ಶಂಕರನಾರಾಯಣ ದೇವಸ್ಥಾನ ರಸ್ತೆ
ಬೇಳೂರು, ನೂಜಿ, ಕೆದೂರು, ಶೇರ್ಡಿ, ಕೊರ್ಗಿ, ಹುಣ್ಸೆಮಕ್ಕಿ, ಬೈಲೂರು ಕ್ರಾಸ್, ಮಾಸ್ತಿಕಟ್ಟೆ, ಮೊಳಹಳ್ಳಿ ಪಂಚಾಯತ್ ರೋಡ್, ಮರತ್ತೂರು, ಕೋಣೆಹರ, ಸೌಡ, ಶಂಕರನಾರಾಯಣ.
ತೊಂಬತ್ತು, ಹೆಂಗಾವಳ್ಳಿ ಕ್ರಾಸ್, ಹೆಂಗವಳ್ಳಿ ಸ್ಕೂಲ್, ರಟ್ಟಾಡಿ, ಹೇಗೋಡ್ಲು, ಮಂಗನಹಾಡಿ ಬಸ್ ಸ್ಟಾಫ್, ಮಾವಿನಕೋಡ್ಲು, ಹಾಲಾಡಿ, ಶಂಕರನಾರಾಯಣ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!