spot_img
Thursday, April 9, 2026
spot_img

ಸಮ್ಮರ್ ಕ್ಯಾಂಪ್ – ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ ನಾಲ್ಕರ ಚಾಲನೆ

ಕುಂದಾಪುರ: ಇಂದಿನ ಮಕ್ಕಳಿಗೆ ಹಳ್ಳಿ ಜೀವನದ ಪರಿಚಯವಿಲ್ಲ. ಆದರೆ ಈ ರೀತಿಯ ಮಕ್ಕಳ ಶಿಬಿರವನ್ನು ಶಾಲೆಗಳಲ್ಲಿ ಆಯೋಜಿಸುವುದರಿಂದ ಮಕ್ಕಳಿಗೆ ಹಳ್ಳಿ ಸೊಗಡಿನ ಸಂಪ್ರದಾಯಗಳ ಪರಿಚಯವಾಗಿ ಉತ್ತಮ ನಾಗರಿಕರಾಗುವ ದಾರಿಯಲ್ಲಿ ಮುನ್ನಡೆಯಲು ಸಹಾಯವಾಗುತ್ತದೆ ಎಂದು ಹುಣ್ಸೆಮಕ್ಕಿಯ ಮಹಿಳಾ ಉದ್ಯಮಿ ಹಾಗೂ ಕೃಷಿಕರಾದ ಶ್ರೀಮತಿ ವಸಂತಿ ಎಮ್. ಶೆಟ್ಟಿಯವರು ಹೇಳಿದರು.
ಇವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್ .ಎಮ್. ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳು ಆಯೋಜಿಸಿರುವ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 4’ ಕಾರ್ಯಕ್ರಮವನ್ನು ಹಳ್ಳಿಯ ಸಂಪ್ರದಾಯ ಬಿಂಬಿಸುವ ಹೊಲಿರಾಶಿಯನ್ನು ಪೂಜಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತ್ತಾಯರು ಇಂದಿನ ಕಾಲದಲ್ಲಿ ಕಣ್ಮರೆಯಾಗುತ್ತಿರುವ ಹಳ್ಳಿಯ
ಆಚಾರ-ವಿಚಾರಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.
ಸಂಸ್ಥೆಯ ಉಪ ಪ್ರಾಂಶುಪಾಲೆ ಶ್ರೀಮತಿ ಶುಭಾ ಕೆ.ಎನ್ ರವರು ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕಿ ರಂಜನಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ‘ಹೆಜ್ಜೆ-ಗೆಜ್ಜೆ’ ನೃತ್ಯ ತರಬೇತಿ ನೀಡಲಾಯಿತು.
ಜೊತೆಗೆ ಕುಂಬಾರಿಕೆಯ ಬಗ್ಗೆ ಆಲೂರು ರಘು ಕುಲಾಲ್ ಮಾಹಿತಿ ನೀಡಿ, ವಿವಿಧ ಬಗೆಯ ಮಣ್ಣಿನ ಮಡಿಕೆಗಳ ಆಕೃತಿಗಳನ್ನು ಮಕ್ಕಳಿಂದ ತಯಾರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!