spot_img
Thursday, July 9, 2026
spot_img

ನೆಂಪು: ಅಂಗನವಾಡಿಯೊಳಗೆ ಸಹಾಯಕಿ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಂಪು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ (29ವ) ಅವರು ಬುಧವಾರ ಸಂಜೆ ಅಂಗನವಾಡಿ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಂದೂರು ತಾಲೂಕು ನಾಗೂರಿನವರಾದ ಅಶ್ವಿನಿ ಪ್ರತಿನಿತ್ಯ ಬೆಳಿಗ್ಗೆ ಅಂಗನವಾಡಿಗೆ ಬಂದು ಸಂಜೆ ಮನೆಗೆ ಹೋಗುತ್ತಿದ್ದರು ಎಂದಿನಂತೆ ಜು.8-2026 ರಂದು ಬೆಳಿಗ್ಗೆ ಅಂಗನವಾಡಿ ಕೆಲಸಕ್ಕೆ ಬಂದಿದ್ದರು. ಅಂಗನವಾಡಿಯಲ್ಲಿ ಸರೋಜಾ ಎಂಬವರು ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು ಮದ್ಯಾಹ್ನ 3:50 ಗಂಟೆಗೆ ಅವರು ಅಶ್ವಿನಿ ಬಳಿ ಅಂಗನವಾಡಿಗೆ ಬೀಗ ಹಾಕಿ ಮನೆಗೆ ಹೋಗುವಂತೆ ತಿಳಿಸಿ ಮನೆಗೆ ಹೋಗಿದ್ದು ಅಂಗನವಾಡಿಯಲ್ಲಿ ಅಶ್ವಿನಿ ಒಬ್ಬರೇ ಇದ್ದರು, ಅಂಗನವಾಡಿ ಕಾರ್ಯಕರ್ತೆ ಅವರ ಮಗುವಿನ ಆಟಿಕೆ ಸಾಮಾನು ಅಂಗನವಾಡಿಯಲ್ಲಿ ಬಿಟ್ಟು ಹೋಗಿದ್ದು ಅದನ್ನು ತೆಗೆದುಕೊಂಡು ಹೋಗಲು ಪುನ: ಸಂಜೆ 5:30 ಗಂಟೆಗೆ ಅವರ ಬಳಿ ಇದ್ದ ಬೀಗದ ಕೀ ಹಿಡಿದುಕೊಂಡು ಅಂಗನವಾಡಿಗೆ ಬಂದು ನೋಡುವಾಗ ಅಂಗನವಾಡಿಯ ಬಾಗಿಲಿನ ಒಳ ಚೀಲಕ ಹಾಕಿಕೊಂಡಿದ್ದು ಕರೆದರೂ ಮಾತನಾಡದೇ ಇದ್ದು ಅಶ್ವಿನಿ ಅವರ ಮೊಬೈಲ್ ಕೂಡಾ ಸ್ವೀಚ್ಚ್ ಆಫ್ ಇದ್ದು ನಂತರ ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿ ಅಂಗನವಾಡಿಯ ಹಿಂಬದಿಯಲ್ಲಿ ಕಿಟಕಿಯಿಂದ ನೋಡಿದಾಗ ಅಶ್ವಿನಿ ಅಂಗನವಾಡಿ ಅಡುಗೆ ಕೋಣೆಯಲ್ಲಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಬಂದಿದೆ.

ಅಶ್ವಿನಿ ಅವರು ಯಾವುದೋ ವೈಯಕ್ತಿಕ ಕಾರಣಗಳಿಂದ ಅಥವಾ ಇನ್ನಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

(ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ: ದುಡುಕಿನ ನಿರ್ಧಾರ ಬೇಡ, ತಾಳ್ಮೆಯಿಂದ ಯೋಚಿಸಿ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!