spot_img
Tuesday, April 7, 2026
spot_img

ವರ್ಲ್ಡ್ ಮಲೆಯಾಳಿ ಕೌನ್ಸಿಲ್ ಉಡುಪಿ ಶಾಖೆ ಉದ್ಘಾಟನೆ

ಉಡುಪಿ : ಕೇರಳದ ಮಣ್ಣಿನಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಚದುರಿ ಹೋಗಿರುವ ಮಲೆಯಾಳಿಗಳನ್ನು ಭ್ರಾತೃತ್ವದ ಬೆಸುಗೆಯಿಂದ ಒಂದುಗೂಡಿಸುವ ಪ್ರಯತ್ನವನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಾಗತಿಕ ಮಲೆಯಾಳಿ ಮಹಾಮಂಡಲ (ವರ್ಲ್ಡ್ ಮಲೆಯಾಳಿ ಕೌನ್ಸಿಲ್)ದ ಕಾರ್ಯವು ಅತ್ಯಂತ ಸ್ತುತ್ಯರ್ಹವಾದುದು’ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಹೇಳಿದರು.

ನಗರದ ಕಿದಿಯೂರು ಹೋಟೆಲಿನ ಶೇಷಶಯನ ಹಾಲ್ ನಲ್ಲಿ ನಡೆದ ವರ್ಲ್ಡ್ ಮಲೆಯಾಳಿ ಕೌನ್ಸಿಲಿನ ಉಡುಪಿ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರ್ಲ್ಡ್ ಮಲೆಯಾಳಿ ಸಂಘಟನೆಯ ಇಂಡಿಯಾ ರೀಜನ್ ಅಧ್ಯಕ್ಷರಾದ ಪಿ.ಪದ್ಮಕುಮಾರ್ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳಲ್ಲಿ ೬೦೦ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಸಂಘಟನೆಯು ನಿರಂತರವಾಗಿ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಗಳನ್ನಿತ್ತರು. ಇಂಡಿಯಾ ರೀಜನ್ ಒಳಗೆ ಕೇರಳದ ಹೊರಗೆ ಆರಂಭವಾಗುತ್ತಿರುವ ಉಡುಪಿ ಶಾಖೆಯಿಂದ ಮಲೆಯಾಳಿಗರ ಮತ್ತು ಕನ್ನಡಿಗರ ನಡುವಣ ಸಾಂಸ್ಕೃತಿಕ ಸಂಬಂಧ ಗಟ್ಟಿಯಾಗಲು ಸಾಧ್ಯವೆಂದು ಅವರು ಹೇಳಿದರು.

ಸಂಘಟನೆಯ ಗ್ಲೋಬಲ್ ಕಾರ್ಯದರ್ಶಿ ವಿಜಯಚಂದ್ರನ್ ಮಾತನಾಡಿ ವರ್ಲ್ಡ್ ಮಲೆಯಾಳಿ ಆರಂಭಿಸಿದ ಸ್ನೇಹಯಾತ್ರೆ ಉಡುಪಿ ಶಾಖೆಯ ಮೂಲಕ ಮುಂದುವರೆಯಲಿ ಎಂದರು. ಇಂಡಿಯಾ ರಿಜನ್ನಿನ ಉಪಾಧ್ಯಕ್ಷರಾದ ರಾಮಚಂದ್ರನ್ ಪೆರಾಂಬ್ರ ಮತ್ತು ಗ್ಲೋಬಲ್ ಮಟ್ಟದ ಇಂಡಿಯಾ ರೀಜನ್ನಿನ ಉಪಾಧ್ಯಕ್ಷ ಸುರೇಂದ್ರ ಕನ್ನಾತ್ತ್ ಶಾಖೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಡಾ.ವಿನೋದ್ ಥಾಮಸ್ ವರ್ಲ್ಡ್ ಮಲೆಯಾಳಿ ಸಂಘದ ಆಶ್ರಯದಲ್ಲಿ ಉಡುಪಿ ಶಾಖೆ ರೂಪುಗೊಂಡಿದ್ದರ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು.

ಉಡುಪಿ ಪ್ರಾವಿನ್ಸ್ ನ ಪದಾಧಿಕಾರಿಗಳಾಗಿ ಆಯ್ಕೆಯಾದ ಷಿನೋದ್ ಟಿ.ಆರ್ (ಚೇರ್ಮನ್) ಬಿನೇಶ್ ವಿ.ಸಿ.(ಅಧ್ಯಕ್ಷ), ಬಿನಿಲ್ ವಿ.(ಕಾರ್ಯದರ್ಶಿ), ಡಯಾಸ್ ಚೆರಿಯನ್ (ಖಜಾಂಚಿ), ಸುಗುಣಕುಮಾರ್ ಮತ್ತು ಕೆ.ಪಿ.ಶ್ರೀಶನ್ (ಉಪಾಧ್ಯಕ್ಷರು), ಪಾರ್ವತಿ ಜಿ.ಐತಾಳ್ ( ಸಲಹೆಗಾರರು) ಸಂತೋಷ ಕುಮಾರ್ ಮತ್ತು ರಾಹಿಮೋನ್ ( ಜತೆ ಕಾರ್ಯದರ್ಶಿಗಳು), ಸುನೀಲ್ ಕುಮಾರ್ ಪಿ.ಮತ್ತು ಸುಧೀಷಚಂದ್ರನ್ ಕೆ.ಸಿ.(ಸಹ ಖಜಾಂಚಿಗಳು) ರಾಜನ್ ಫಿಲಿಪ್, ಗಣೇಶ ವಕೇರಿ, ವರ್ಕಿ ಎಂ.ಬರ್ನಾರ್ಡೋಸ್ ಮತ್ತು ಷಾಜಿ ವಿ.ಕರುಣ್ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಸುರೇಂದ್ರ ಕನ್ನಾತ್ತ್ ಅವರ ಕೈಯಿಂದ ಪ್ರತಿಜ್ಣಾ ವಿಧಿಯನ್ನು ಸ್ವೀಕರಿಸಿದರು. ಗ್ಲೋಬಲ್ ಸಮಿತಿಯ ಮತ್ತು ಇಂಡಿಯಾ ರಿಜನ್ನಿನ ಪದಾಧಿಕಾರಿಗಳು ಉಡುಪಿ ಶಾಖೆಯ ಅಸ್ತಿತ್ವವನ್ನು ಒಪ್ಪಿಕೊಂಡು ಅವರನ್ನು ಸನ್ಮಾನಿಸಿದರು.

ಮನೀತಾ ಕಾರ್ಯಕ್ರಮ ನಿರ್ವಹಿಸಿದರು. ಮಧುಕರ್ ಪ್ರಾರ್ಥನಾ ಗೀತೆ ಹಾಡಿದರು. ರಾಜಿ ಮೋನ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!