spot_img
Saturday, May 23, 2026
spot_img

ಯಕ್ಷಾಭಿಮಾನಿ ಬಳಗ ಕಳ್ಳಿಗುಡ್ಡೆ : ರಜತ ಸಂಭ್ರಮ ಸನ್ಮಾನ

kundapura: ಬಳ್ಕೂರು ಯಕ್ಷಾಭಿಮಾನಿ ಬಳಗ ಕಳ್ಳಿ ಗುಡ್ಡೆ ಇದರ ರಜತ ಸಂಭ್ರಮದ ಪ್ರಯುಕ್ತವಾಗಿ ಶ್ರೀ ಕ್ಷೇತ್ರ ಅಮೃತೇಶ್ವರಿ ಕೋಟ ಹಾಗೂ ಶ್ರೀ ಕ್ಷೇತ್ರ ಸೌಕೂರು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಿಂದ ಕೂಡಾಟ ಪ್ರದರ್ಶನ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆ ವಹಿಸಿ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಪ್ರಸಿದ್ಧ ಕಲಾವಿದರನ್ನು ಗುರುತಿಸುವುದು ಕಲೆಗೆ ನೀಡುವ ಗೌರವವನ್ನು ಇಮ್ಮಡಿಗೊಳಿಸುತ್ತದೆ ಎಂಬ ಅಭಿಪ್ರಾಯ ಪಟ್ಟರು ಮುಖ್ಯ ಅತಿಥಿಯಾಗಿ ಅಮೃತೇಶ್ವರಿ ದೇವಾಲಯದ ಧರ್ಮದರ್ಶಿಯಾದ ಆನಂದ್ ಸಿ ಕುಂದರ ವಿಷ್ಣುಮೂರ್ತಿ ದೇವಾಲಯದ ಧರ್ಮದರ್ಶಿ ಶ್ರೀಧರ್ ಉಡುಪ ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ಮಂಜುನಾಥ್ ಶೆಟ್ಟಿ ಮಹಾಮಾಯ ಇಂಡಸ್ಟ್ರಿ ಮಾಲೀಕರಾದ ಗುರುನಂದನ್ ಪೈ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಪ್ರಕಾಶ್ ಚಂದ್ರಸೇರ್ವೆಗಾರ ಯಕ್ಷ ಅಭಿಮಾನಿ ಬಳಗದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಹಾಡಿಮನೆ ಯಕ್ಷ ಸಂಘಟಕ ಬಾಬಣ್ಣ ಕಳ್ಳಿಗುಡ್ಡೆ ಉಪಸ್ಥಿತರಿದ್ದರು ಸಭೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಸೀತಾರಾಮ್ ಹೆಗಡೆ ಶಿರಗುಣಿ ಕೋಟ ಸುರೇಶ್ ಬಂಗೇರ್, ಹರೀಶ್ ಇಂಬಾಳಿ ಇವರನ್ನು ಸನ್ಮಾನಿಸಲಾಯಿತು.

ಹಾಡಿಮನೆ ರಾಜ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಉದಯ್ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕಳ್ಳಿಗುಡ್ಡೆ ಗುರುರಾಜ್ ಅಭಿನಾಶ್ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!