spot_img
Saturday, February 21, 2026
spot_img

ಉಳ್ಳೂರು-74 ಗ್ರಾಮದಲ್ಲಿ ಚಿರತೆ ಕಾಟ: ನಾಯಿಗಳ ಕಣ್ಮರೆ, ಗ್ರಾಮಸ್ಥರಲ್ಲಿ ಆತಂಕ

ಉಳ್ಳೂರು-74: ಉಳ್ಳೂರು-74 ಗ್ರಾಮದಲ್ಲಿ ಚಿರತೆ ಕಾಟ ವ್ಯಾಪಕವಾಗಿದ್ದು ದಿನಾಲೂ ಕೂಡಾ ಚಿರತೆಗಳಿಗೆ ಸಾಕು ನಾಯಿಗಳು ಬಲಿಯಾಗುತ್ತಿವೆ. ಸಂಪಿಗೆಡಿ ಯಡಹಕ್ಲು ನಿವಾಸಿ ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಶೇಖರ ಶೆಟ್ಟಿ ಇವರ ಸಾಕು ನಾಯಿಯನ್ನು ರಾತ್ರಿ ಚಿರತೆ ಅಂಗಳಕ್ಕೆ ಬಂದು ಚಾವಡಿಯಲ್ಲಿ ಮಲಗಿದ ನಾಯಿಯನ್ನು ಕಚ್ಚಿಕೊಂಡು ಹೋಗಿದೆ. ಎಚ್ಚರಗೊಂಡ ಶೇಖರ ಶೆಟ್ಟಿ ಅವರು ಹೊರಗೆ ಬಂದು ನೋಡುವಾಗ ಆಗಲೇ ನಾಯಿಯನ್ನು ಹೊತ್ತುಕೊಂಡು ಹೋಗಿದೆ. ಈ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

ಸಂಜೆ ಹೊತ್ತು ಇಲ್ಲಿನ ಗ್ರಾಮಸ್ಥರಿಗೆ ನಿತ್ಯವೂ ಚಿರತೆ ದರ್ಶನ ಆಗುತ್ತಿದ್ದು, ಹಲವು ಸಾಕು ನಾಯಿಗಳು ಕಣ್ಮರೆ ಆಗಿವೆ. ಶಂಕರನಾರಾಯಣ ಅರಣ್ಯ ಇಲಾಖಾ ಗಮನಕ್ಕೆ ತಂದಿದ್ದು, ಚಿರತೆಯನ್ನು ಬೋನ್ ಇಟ್ಟು ಹಿಡಿಯಲಾಗುವುದೆಂದು ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿರುವ ಚಿರತೆಯನ್ನು ಶೀಘ್ರ ಹಿಡಿಯಬೇಕೆಂದು ಉಳ್ಳೂರು ಗ್ರಾಮ ಅರಣ್ಯ ಸಮಿತಿ ಕಾರ್ಯನಿರ್ವಾಹಕ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ಇಲಾಖೆಗೆ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!