spot_img
Monday, July 13, 2026
spot_img

ತೆಕ್ಕಟ್ಟೆ: ವಿದ್ಯಾರ್ಥಿಗಳಿಗೆ ನಿರಂತರ ವೇದಿಕೆ ಕಲ್ಪಿಸಿಕೊಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ

ತೆಕ್ಕಟ್ಟೆ: ಜುಲೈ,12: ಕೈಲಾಸ ಕಲಾಕ್ಷೇತ್ರ ಸೂರಿನಡಿ ಅನೇಕ ಕಲಾವಿದರು ಬೆಳೆದು ಬೆಳಗಿದ್ದಾರೆ. ಕಲಿತ ವಿದ್ಯೆಗೆ ಹೆಚ್ಚು ಹೆಚ್ಚು ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಂಗ ಪ್ರಯೋಗಗಳು ನಿರಂತರ ನಡೆಸುವ ಸಂಸ್ಥೆಯ ಬದ್ಧತೆ ಶ್ಲಾಘನೀಯ. ವೇದಿಕೆಯನ್ನು ಒದಗಿಸಿಕೊಡುವ ಸಂಸ್ಥೆಗಳು ತೀರಾ ವಿರಳ. ಆದರೆ ಈ ಸಂಸ್ಥೆಯ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು ಎಂದು ಪ್ರಸಿದ್ಧ ಯಕ್ಷ ಸಂಘಟಕ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಇದರ ಸಹಕಾರದೊಂದಿಗೆ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇದರ ತಾಳಮದ್ದಳೆ ಮಾಲಿಕಾ- 1 ಭಾಗವಾಗಿ, “ಮಹಾಭಾರತ” ಸರಣಿ ತಾಳಮದ್ದಳೆ “ಭೀಷ್ಮ
ಪ್ರತಿಜ್ಞೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಜಗದೀಶ್ ಮಾತನ್ನಾಡಿದರು.
ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು, ಶ್ರೀನಾಥ ಉರಾಳ ಕೋಟ, ಪ್ರಶಾಂತ್ ಪಡುಕೆರೆ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಸುಧಾ ಮಣೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಭೀಷ್ಮ ಪ್ರತಿಜ್ಞೆ’
ತಾಳಮದ್ದಳೆ ಕಾರ್ಯಕ್ರಮ ಜರುಗಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!