spot_img
Saturday, July 11, 2026
spot_img

ಕೃಷಿಕರು ಲಾಭವನ್ನಷ್ಟೇ ಪ್ರತೀಕ್ಷಿಸಬಾರದು-ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು | ಹೂವಿನಕೆರೆಯಲ್ಲಿ ‘ಶುದ್ಧ ನೈವೇದ್ಯ ಸಮರ್ಪಣಂ’

ಕುಂದಾಪುರ: ಕೃಷಿಕರು ಲಾಭವನ್ನಷ್ಟೇ ಪ್ರತೀಕ್ಷಿಸಬಾರದು. ಸಮಾಜಕ್ಕೆ ಆರೋಗ್ಯಕರ ಪಸಲನ್ನು ಬೆಳೆಯುವ ನಿಟ್ಟಿನಲ್ಲಿ ಶ್ರಮಿಸಬೇಕು. ಆರೋಗ್ಯಕರವಾದ ಅನೇಕ ಬತ್ತದ ತಳಿಗಳು ಪ್ರಸ್ತುತ ಕಾಲಘಟ್ಟದಲ್ಲಿ ಮಾಯವಾಗಿದೆ. ಇದನ್ನು ಸಂರಕ್ಷಿಸುವ ಕಾರ್ಯ ಆಗಬೇಕಾಗಿದೆ. ಲಕ್ಷಕ್ಕೂ ಅಧಿಕ ತಳಿಗಳು ಈವರೆಗೆ ಭುವಿಯಲ್ಲಿ ಆಗಿ ಹೋಗಿವೆ. ಸದ್ಯಕ್ಕೆ ಪ್ರಪಂಚದಲ್ಲಿ ಇಪ್ಪತ್ತು ಸಾವಿರದಷ್ಟು ಭತ್ತದ ತಳಿಗಳು ಮಾತ್ರ ಕಾಣಸಿಗುತ್ತವೆ. ಇವನ್ನಾದರೂ ಸಂರಕ್ಷಿಸುವ ಕೆಲಸ ನಡೆಯಬೇಕು. ರೈತರು ಮನಸ್ಸು ಮಾಡಿದರೆ ಇಂತಹ ತಳಿಗಳನ್ನು ಬೆಳೆದು ಪಸಲನ್ನು ತಮ್ಮ ಪರಿಸರದವರೇ ಬಳಸುವಂತೆ ಮಾಡಬೇಕು. ಹಾಗಾಗಿ ಸಾಂಕೇತಿಕವಾಗಿ ಹೂವಿನಕೆರೆಯ ಗೌರಿ ಗದ್ದೆಯಲ್ಲಿ ಸಣ್ಣಕ್ಕಿ ತಳಿ ಹಾಗೂ ಇನ್ನಿತರ ತಳಿಗಳನ್ನು ನಾಟಿ ಮಾಡಿ ಬೆಳೆದ ಭತ್ತವನ್ನು ಉಡುಪಿಯ ಪರ್ಯಾಯದಲ್ಲಿ ಶ್ರೀ ಕೃಷ್ಣನಿಗೆ ಮೊದಲ ನೈವೇದ್ಯದ ಮೂಲಕ ಬಳಸಲಾಗುತ್ತದೆ. ಶ್ರೀ ವಾದಿರಾಜರ ಜನ್ಮ ಭೂಮಿಯಲ್ಲಿ ಬೆಳೆದ ಪಸಲನ್ನು ಶುದ್ಧ ನೈವೇದ್ಯ ಸಮರ್ಪಣಂ ಶ್ರೀ ಕೃಷ್ಣನ ನೈವೇದ್ಯಕ್ಕೆ ಬಳಸಲಾಗುತ್ತಿದೆ. ತನ್ಮೂಲಕ ಸಾರ್ವಜನಿಕರು ಉಣ ಬಡಿಸಿದ ಸಂತೃಪ್ತಿ ನಮಗೆ ಎಂದು ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಅವರು ಕೋಟೇಶ್ವರದ ಹೂವಿನಕೆರೆಯಲ್ಲಿ ಶ್ರೀ ವಾದಿರಾಜರ ಜನ್ಮ ಭೂಮಿ ಗೌರಿ ಗದ್ದೆಯಲ್ಲಿ ಜುಲೈ 11ರಂದು ಸೋದೆ ಶ್ರೀ ವಾದಿರಾಜ ಮಠ ಹೂವಿನಕೆರೆ ಹಾಗೂ ಕೃಷಿ ಪ್ರಯೋಗ ಪರಿವಾರ (ರಿ.) ಜಂಟಿ ಸಹಯೋಗದೊಂದಿಗೆ ಶುದ್ಧ ನೈವೇದ್ಯ ಸಮರ್ಪಣಂ ಪಾರಂಪರಿಕ ಭತ್ತದ ತಳಿಗಳ ಸಂರಕ್ಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಭತ್ತದ ಸಸಿ ನೆಡುವ ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶವಲ್ಲಭತೀರ್ಥ ಶ್ರೀಪಾದರು ಆಶೀರ್ವಚಿಸಿದರು.

ಹಾದಿಗಲ್ಲು ಶ್ರೀ ಲಕ್ಷ್ಮೀನಾರಾಯಣ, ರಾಮಚಂದ್ರ ವರ್ಣ ಹಂಗಳೂರು, ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರದ ಶ್ರೀವತ್ಸ, ಕೃಷ್ಣದೇವ ಕಾರಂತರು ಹಾಗೂ ಪರಿಸರದ ರೈತಾಪಿ ವರ್ಗದವರನೇಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!