spot_img
Sunday, August 9, 2026
spot_img

ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡುವ ‘ಅರ್ಥಾಂಕುರ’ ಸರಣಿ ತಾಳಮದ್ದಳೆ ಶ್ಲಾಘನೀಯ-ಕೆ. ತಾರಾನಾಥ ಹೊಳ್ಳ

ಸಾಲಿಗ್ರಾಮ: ಅರ್ಥಾಂಕುರ ಕಾರ್ಯಕ್ರಮವು ದಿನೇ ದಿನೇ ಪ್ರೇಕ್ಷಕರ ಮನ ಗೆದ್ದು ನೋಡುಗರ ಸಂಖ್ಯೆಯನ್ನು ಹೆಚ್ಚಿಸುತ್ತಾ ಕಳೆಗಟ್ಟಿದೆ. ಪುರಾಣ ಕಥೆಗಳನ್ನು ಮನನ ಮಾಡಿಕೊಳ್ಳುವ ಈ ಕಾರ್ಯಕ್ರಮ ದೇಗುಲಗಳಲ್ಲಿ ಹೆಚ್ಚು ಅಗತ್ಯ. ಕಾರ್ಯಕ್ರಮವೊಂದನ್ನು ಆಯೋಜಿಸುವುದೇ ಕಷ್ಟದ ಪರಿಸ್ಥಿತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡುವ ಉಭಯ ಸಂಸ್ಥೆಗಳ ಕಾಯಕ ನಿಜವಾಗಿಯೂ ಸಾಧನೆಯೇ ಸರಿ ಎಂದು ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ ಹೇಳಿದರು.

ಅವರು ಜು.11ರಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಂಸ್ಥೆಗಳ ಸಹಯೋಗದೊಂದಿಗೆ ಅರ್ಥಾಂಕುರ-೨೪ ಸರಣಿ ತಾಳಮದ್ದಳೆ-೩ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.

ಪ್ರಸಿದ್ಧ ಹಿರಿಯ ಕಲಾವಿದ ಜಬ್ಬಾರ್ ಸಮೋ, ಕುಂದಾಪ್ರ ಕನ್ನಡ ರಾಯಭಾರಿ ಮನು ಹಂದಾಡಿ, ಯಕ್ಷ ಗುರು ಲಂಬೋದರ ಹೆಗಡೆ ನಿಟ್ಟೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಳಿಕ ಗಣೇಶ ಕೊಲೆಕಾಡಿ ವಿರಚಿತ ಸಮರ ಸೌಗಂಧಿಕಾ ತಾಳಮದ್ದಳೆ ಪ್ರಸ್ತುತಗೊಂಡಿತು. ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು: ಪಂಚಮಿ ವೈದ್ಯ, ಅರಬಿ ಹೆಗಡೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ವಾಗ್ವಿಲಾಸ್ ಭಟ್ ಸಾಥ್ ನೀಡಿದರು. ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ಸುಜಯೀಂದ್ರ ಹಂದೆ ಕೋಟ, ಮನು ಹಂದಾಡಿ, ಶ್ರೀಮತಿ ಸುಶೀಲ ಹೊಳ್ಳ, ಅನಂತಕೃಷ್ಣ ನಾವುಡ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!