spot_img
Saturday, April 11, 2026
spot_img

ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ಕ್ಷಣಗಣನೆ

ಹೆಬ್ರಿ: ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಇಂದು (ಪೆ.21) ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ವಾಸುದೇವ ಭಟ್ ಅವರ ಸಹಯೋಗದಲ್ಲಿ ಆಶ್ಲೇಷಾಬಲಿ, ಪಂಚವಿಂಶತಿ ದ್ರವ್ಯಮೀಳಿತ ಕಲಶ, ಪ್ರಧಾನ ಯಾಗ, ಸರ್ಪತ್ರಯ ಮಂತ್ರಯಾಗ, ಪವಮಾನಸೂಕ್ತಯಾಗ, ತಿಲ ಯಾಗ, ಬ್ರಹ್ಮಚಾರಿ ಆರಾಧನಾ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಅನ್ನಾರಾಧನೆ ನಡೆಯಿತು.
ಮಧ್ಯಾಹ್ನ ಶ್ರೀಭವಾನಿ ಭೋಜನಾಲಯದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಿತು. ಇದು ಏಕಪವಿತ್ರ ಶ್ರೀಮನ್ನಾಗಮಂಡಲ ಮುಗಿಯುವ ತನಕವೂ ನಿರಂತರವಾಗಿರುತ್ತದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಂಜೀವಿನಿ ಗೋಧಾಮಕ್ಕೆ ಹರಿದು ಬರುತ್ತಿದ್ದಾರೆ. ಪಾರಂಪರಿಕ ಸಂಪ್ರದಾಯದಂತೆ, ಗೋಧಾಮದಲ್ಲಿ ದೊಂದಿ ಬೆಳಕಿನಲ್ಲಿ ಭಕ್ತಿಭಾಪೂರ್ಣತೆಯೊಂದಿಗೆ ನಡೆಯಲಿರುವ ಶ್ರೀಮನ್ನಾಗಮಂಡಲ ಕಣ್ತುಂಬಿಸಿಕೊಳ್ಳಲು, ಅಪರೂಪದ ಈ ವಿದ್ಯಮಾನ ನೋಡಲು ಬೇರೆ ಬೇರೆ ಭಾಗದಿಂದ ಭಕ್ತರು ಹರಿದು ಬರುತ್ತಿದ್ದಾರೆ.

ಸಂಜೀವಿನಿ ಗೋಧಾಮದ ಪ್ರವರ್ತಕರಾದ ಮೂಡಬಿದರೆ ಎಸ್‌ಕೆ‌ಎಫ್ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ| ಜಿ.ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್, ಅನುಷಾ ಆಚಾರ್, ಪ್ರಜ್ವಲ್ ಆಚಾರ್, ಪೂಜಾ ಆಚಾರ್, ತೇಜಸ್ ಆಚಾರ್, ರಕ್ಷತ್ ಆಚಾರ್, ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಆಗಮಿಸುತ್ತಿರುವ ಭಕ್ತರನ್ನು, ಗಣ್ಯಮಾನ್ಯರನ್ನು ಸ್ವಾಗತಿಸಿ, ಬರಮಾಡಿಕೊಂಡರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!