spot_img
Thursday, February 19, 2026
spot_img

ಸಹಕಾರ ಕ್ಷೇತ್ರದ ಆಶಯಗಳನ್ನು ಸೌಹಾರ್ದ ಸಹಕಾರಿ ಸಂಘಗಳು ಈಡೇರಿಸುತ್ತಿವೆ: ಜಿ. ನಂಜನ ಗೌಡ | ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಮೈಸೂರು ಪ್ರಾಂತದ ಸಹಕಾರ ಸಂಘಗಳಿಗೆ ಉನ್ನತ ಕಾರ್ಯಕ್ಷಮತೆ ತರಬೇತಿ ಉದ್ಘಾಟನೆ

ಕುಂದಾಪುರ: ಸೌಹಾರ್ದ ಸಹಕಾರಿಗಳು ಉತ್ತಮ ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸುತ್ತಿವೆ. ಕೇವಲ ಒಂದು ಶೇಕಡಾ ವ್ಯಕ್ತಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಆದರೆ ಸಹಕಾರ ಕ್ಷೇತ್ರದ ಆಶಯಗಳನ್ನು ಸೌಹಾರ್ದ ಸಹಕಾರಿ ಸಂಘಗಳು ಮಾಡುತ್ತಿವೆ. ಸಹಕಾರ ಕ್ಷೇತ್ರ ಬೃಹದಾಕಾರವಾಗಿ ಬೆಳೆಯಲು ಸೇವಾ ಮನೋಭಾವ ಕಾರಣವಾಗಿವೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ. ನಂಜನಗೌಡ ಹೇಳಿದರು.

ಅವರು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ಇದರ ವತಿಯಿಂದ ಮೈಸೂರು ಪ್ರಾಂತದ ಸಹಕಾರ ಸಂಘಗಳಿಗೆ ಉನ್ನತ ಕಾರ್ಯಕ್ಷಮತೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳೆಯುತ್ತಿರುವ ಸೌಹಾರ್ದ ಸಹಕಾರ ಸಂಘಗಳಿಗೆ ತರಬೇತಿ ಬಹಳ ಮುಖ್ಯ. ಬೇರೆಯವರ ಠೇವಣಿ ತಗೆದುಕೊಂಡ ನಂತರ ನಮ್ಮ ದೊಡ್ಡ ಜವಬ್ದಾರಿ ಇದೆ. ಸಂಘದಲ್ಲಿ ಯಾವುದೇ ಹಗರಣವಾಗದ ಹಾಗೆ ನೋಡಿಕೊಳ್ಳಬೇಕು. ಸಾಲ ನೀಡುವಾಗ ಜಾಗೃತೆ ವಹಿಸಬೇಕು. ರಾಜ್ಯದಲ್ಲಿರುವ 6500 ಸಂಘಗಳು ಇನ್ನಷ್ಟು ಬಲಗೊಳ್ಳಬೇಕು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಮಂಜುನಾಥ ಎಸ್.ಕೆ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಾ ಇದೆ. ಅದಕ್ಕೆ ನಾವು ಪೂರಕವಾಗಿರಬೇಕು, ಸದಸ್ಯರ ಸಹಕಾರವನ್ನು ಪಡೆದುಕೊಳ್ಳಬೇಕು, ಸಹಕಾರ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ಮುನ್ನೆಡೆಯಬೇಕು, ದೇಶದ ಆರ್ಥಿಕತೆ ಮುನ್ನೆಡೆ ಇದೆ. ನಾವು ಕೂಡಾ ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಎ.ಆರ್.ಪ್ರಸನ್ನ, ಒಕ್ಕೂಟದ ನಿರ್ದೇಶಕರಾದ ಭಾರತಿ ಜಿ.ಭಟ್, ಒಕ್ಕೂಟದ ವೃತ್ತಿಪರ ನಿರ್ದೇಶಕರಾದ ಮಾದುಸ್ವಾಮಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಅಂಪಾರು ಜಗನ್ನಾಥ ಶೆಟ್ಟಿ, ಮುಂತಾದವರು ಉಪರ್ಸತಿತರಿದ್ದರು.

ಮೈಸೂರು ಪ್ರಾಂತದಲ್ಲಿ ಬರುವ 8 ಜಿಲ್ಲೆಗಳಲ್ಲಿ 10ರಿಂದ 80 ಕೋಟಿಗಳಷ್ಟು ಠೇವಣಿ ಇರುವ 88 ಸೌಹಾರ್ದ ಸಹಕಾರಿ ಸಂಘಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಡಿಟರ್ ಆಗಿರುವ ಸಿ.ಎ ಮಧುಕರ ಹೆಗ್ಡೆ, ರಘುನಂದನ್ ಭಾಗವಹಿಸಿದ್ದರು. ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಸ್ವಾಗತಿಸಿ, ಪ್ರಸ್ತಾವಿಕ ಭಾಷಣ ಮಾಡಿದರು. ಸಹಕರ ಅಭಿವ್ರದ್ದಿ ಅಧಿಕಾರಿ ವಿಜಯ ಬಿ.ಎಸ್.ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

 

 

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!