spot_img
Thursday, March 5, 2026
spot_img

ಉಳ್ಳೂರು-೭೪: ಉಪ ಶಾಖಾ ಅಂಚೆಪಾಲಕ ರತ್ನಾಕರ ನಾಯಕ್ ಸೇವಾ ನಿವೃತ್ತಿ: ಬೀಳ್ಕೋಡುಗೆ

ಕುಂದಾಪುರ : ಕುಂದಾಪುರ ತಾಲೂಕು ಉಳ್ಳೂರು-74ಗ್ರಾಮದ ಶಾಖಾ ಅಂಚೆ ಕಛೇರಿಯಲ್ಲಿ ಸುಮಾರು ೪೩ ವರ್ಷಗಳ ಕಾಲ ಉಪ ಶಾಖಾ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿದ ರತ್ನಾಕರ ನಾಯಕ್ ಅವರು ಸೇವಾ ನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಉಳ್ಳೂರು ಶ್ರೀ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಜ.21-2026ರಂದು ಜರುಗಿತು.

ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಸಂಜೀವ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರತ್ನಾಕರ ನಾಯಕ್ ಅವರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿಯಾಗಿ ಕುಂದಾಪುರ ಉತ್ತರ ವಲಯ ಅಂಚೆ ಉಪ ಅಧೀಕ್ಷಕರಾದ ಮಹೇಶ ಅವರು ನಿವೃತ್ತಿ ಹೊಂದಿದ ರತ್ನಾಕರ ನಾಯಕ್ ಅವರು ಸ್ಥಳೀಯವಾಗಿ ಸುದೀರ್ಘ ೪೩ ವರ್ಷಗಳ ಕಾಲ ಉಳ್ಳೂರು-74ನೇ ಗ್ರಾಮದಲ್ಲಿ ಅಂಚೆ ಸೇವೆ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಅವರಿಗೆ ಅಂಚೆ ಇಲಾಖೆಯಿಂದ ಸ್ಮರಣಿಕೆ ನೀಡಿ ಗೌರವಿಸಿದರು.

ಸ್ಥಳೀಯ ಉದ್ಯಮಿಗಳಾದ ಚಂದ್ರಶೇಖರ ಶೆಟ್ಟಿ, ಉಮೇಶ ರಾವ್, ಸಿದ್ಧಾಪುರ ಉಪ ಅಂಚೆ ಕಛೇರಿಯ ಅಂಚೆ ಪಾಲಕರಾದ ಭಾಗ್ಯಲಕ್ಷ್ಮೀ, ಸ್ಥಳೀಯ ಪ್ರಮುಖರಾದ ಗಣೇಶ ಭಟ್ಟ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ರತ್ನಾಕರ ನಾಯಕ್ ಅವರು ಮತ್ತು ಅವರ ತಂದೆ ದಿ.ವಾಮನ ನಾಯಕ್ ಅವರು ಅಂಚೆ ಇಲಾಖೆಯಲ್ಲಿ ನೌಕರರಾಗಿ, ಇಬ್ಬರು ಸುಮಾರು 75 ವರ್ಷದ ಸುದೀರ್ಘ ಕಾಲ ನಿರಂತರವಾಗಿ ಉಳ್ಳೂರು-೭೪ನೇ ಗ್ರಾಮಕ್ಕೆ ಅಂಚೆ ಸೇವೆ ಒದಗಿಸಿದ ನಾಯಕ್ ಕುಟುಂಬವಾಗಿದೆ ಎಂದು ಸೇವೆಯನ್ನು ಶ್ಲಾಘಿಸಿದರು.

ಸಿದ್ಧಾಪುರ ಅಂಚೆ ಕಛೇರಿ ವ್ಯಾಪ್ತಿಗೆ ಒಳಪಡುವ ಜನಸಾಲೆ, ಕಮಲಶಿಲೆ, ಹಳ್ಳಿಹೊಳೆ ಶಾಖಾ ಅಂಚೆ ಕಛೇರಿಯ ಶಾಖಾ ಅಂಚೆ ಪಾಲಕರು ಗ್ರಾಮೀಣ ಅಂಚೆ ಸೇವಕರು ಮತ್ತು ಉಳ್ಳೂರು-74ನೇ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಕಮಲಶಿಲೆ ಶಾಖಾ ಅಂಚೆ ಪಾಲಕರಾದ ನರಸಿಂಹ ಭಟ್ಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!