spot_img
Sunday, March 22, 2026
spot_img

ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಗ್ರಾಚುವಿಟಿ ಸೌಲಭ್ಯ ಒದಗಿಸಲು ಶಾಸಕ ಗಂಟಿಹೊಳೆ ಸದನದಲ್ಲಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಶಿಕ್ಷಕರಾಗಿ ಹಾಗೂ ಸಹಾಯಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗಾಗಲೇ ನಿವೃತ್ತರಾದವರು ತಮ್ಮ ಸೇವಾವಧಿಯಲ್ಲಿ ಅತೀ ಕಡಿಮೆ ಗೌರವ ಧನದಲ್ಲಿ ಸೇವೆ ಸಲ್ಲಿಸಿ, ಯಾವುದೇ ಇತರೆ ಸೌಲಭ್ಯಗಳಿಲ್ಲದೇ ಈಗಾಗಲೇ ನಿವೃತ್ತಿಗೊಂಡಿರುವುದರಿಂದ ಅಂತವರಿಗೆ ಸೂಕ್ತ ಗ್ರಾಚುವಿಟಿ ಸೌಲಭ್ಯ ಒದಗಿಸುವ ಬಗ್ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು, ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಆಗ್ರಹಿಸಿದರು.

ಶಾಸಕರ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಫೆ.4-2023ರ ಸರ್ಕಾರದ ಆದೇಶದಂತೆ 2023-24ನೇ ಸಾಲಿನಿಂದ ನಿವೃತ್ತಿಯಾದ 2358 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ 2097 ಅಂಗನವಾಡಿ ಸಹಾಯಕರಿಗೆ ಗ್ರಾಚುವಿಟಿ ಮೊತ್ತ ಮಂಜೂರು ಮಾಡಲಾಗಿದೆ. 2011ನೇ ಸಾಲಿನಿಂದ 2022-23ನೇ ಸಾಲಿನವರೆಗೂ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚುವಿಟಿ ಮೊತ್ತ ಪಾವತಿಸಲು ಆರ್ಥಿಕ ಇಲಾಖೆ ಅಭಿಪ್ರಾಯದ ಮೇರೆಗೆ ಕೇಂದ್ರ ಸರ್ಕಾರಕ್ಕೆ ಅನುದಾನ ಕೋರಿ ಡಿ.6-2025 ರಂದು ಪತ್ರಿಸಲಾಗಿದ್ದು ಅನುದಾನ ಬಿಡುಗಡೆಯಾದ ನಂತರ ಗ್ರಾಚುವಿಟಿ ಸೌಲಭ್ಯ ನೀಡಲು ಸರಕಾರದಿಂದ ಕ್ರಮ ವಹಿಸಲಾಗುವುದು ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!