spot_img
Wednesday, February 18, 2026
spot_img

ಗ್ರಾಮಗಳು ಸ್ವತಂತ್ರವಾಗಿ ಬೆಳೆಯಬೇಕು-‘ವಂಡ್ಸೆ ಗ್ರಾಮೋತ್ಸವ’ ಉದ್ಘಾಟಿಸಿ ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪುರ: ಸರಕಾರಿ ಇಲಾಖೆಗಳು ಜನರ ಹತ್ತಿರಕ್ಕೆ ಬರಬೇಕು, ಇಲಾಖಾ ಸೌಲಭ್ಯಗಳು ಜನಸಮಾನ್ಯರಿಗೆ ಪರಿಣಾಮಕಾರಿಯಾಗಿ ಗ್ರಾಮ ಮಟ್ಟದಲ್ಲಿ ತಲುಪುವಂತಾಗಬೇಕು ಎನ್ನುವ ನೆಲೆಯಲ್ಲಿ ಗ್ರಾಮೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಉತ್ತಮ ಯಶಸ್ಸು ಪಡೆದುಕೊಳ್ಳುತ್ತಿದೆ. ಪ್ರತಿಯೊಂದು ಗ್ರಾಮಗಳು ಸ್ವತಂತ್ರವಾಗಿ ಬೆಳೆಯಬೇಕು, ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು, ಉದ್ಯೋಗ ಸೃಷ್ಟಿ, ಜಾಗೃತಿ ಗ್ರಾಮಸ್ಥರಲ್ಲಿ ಮೂಡಬೇಕು ಎನ್ನುವುದು ಈ ಉತ್ಸವಗಳ ಉದ್ದೇಶ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಗ್ರಾಮ ಪಂಚಾಯತ್ ವಂಡ್ಸೆ ಹಾಗೂ ಬೃಂದಾವನ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ, ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಬೈಂದೂರು ಉತ್ಸವ-2026 ಇದರ ಅಂಗವಾಗಿ ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಹಾಗೂ ನಮ್ಮ ಭೂಮಿ ಸಂಸ್ಥೆ, ಆಯುಷ್ ಇಲಾಖೆ, ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ನಡೆದ ವಂಡ್ಸೆ ಗ್ರಾಮೋತ್ಸವ-2026 ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಮಹತ್ತರವಾದ ಕೆಲಸವಾಗುತ್ತಿದೆ. ವಿವಿಧ ತರಬೇತಿ ಪಡೆದು ಬೇರೆ ಬೇರೆ ವೃತ್ತಿಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ. ಸಂಜೀವಿನಿ ಸದಸ್ಯರಿಗೆ ತರಬೇತಿ ನೀಡಲು ರಾಜ್ಯದಲ್ಲಿ ನಾಲ್ಕು ತರಬೇತಿ ಸಂಸ್ಥೆಗಳಿದ್ದು ಅದರಲ್ಲಿ ಒಂದು ವಂಡ್ಸೆಯಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ. ಹಲವು ಪ್ರಥಮಗಳನ್ನು ಸ್ಥಾಪಿಸಿರುವ ವಂಡ್ಸೆಯಲ್ಲಿ ಸಂಜೀವಿನಿ ಯೋಜನೆಗಳು ಯಶಸ್ಸು ಸಾಧಿಸಲಿ ಎಂದು ಹೇಳಿದ ಅವರು, ವಂಡ್ಸೆ ಗ್ರಾಮೋತ್ಸವ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದರು.

ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಅಧ್ಯಕ್ಷತೆ ವಹಿಸಿದ್ದರು.

ನಿರಾಮಯ ಸೊಸೈಟಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ.ಅತುಲ್ ಕುಮಾರ್ ಶೆಟ್ಟಿ, ಸಮೃದ್ಧ ಬೈಂದೂರು ಉತ್ಸವದ ಸಂಚಾಲಕ ಶ್ರೀ ಗಣೇಶ ಗಾಣಿಗ,  ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕಲಾ ಎಸ್ ವಂಡ್ಸೆ, ಸುಬ್ಬು, ಸ್ಥಳೀಯ ಬಿಜೆಪಿ ಮುಖಂಡರಾದ ದೀಪಕಕುಮಾರ್ ಶೆಟ್ಟಿ, ಮಾರ್ಗದರ್ಶಿ ಅಧಿಕಾರಿ ರವೀಂದ್ರ,ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಜಿ ರಾಮ, ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ್, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ಶಂಕರ ಶೆಟ್ಟಿ, ಸುಲೋಚನ, ಬೃಂದವನ ಸಂಜೀವಿನಿ ಸಂಘದ ಅಧ್ಯಕ್ಷೆ ಸಲ್ಮಾ, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಂಡ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಶೇಟ್ ಸ್ವಾಗತಿಸಿದರು. ಸಂಜೀವಿನಿ ಸಂಘದ ಆಶಾ ವಂದಿಸಿದರು. ಶಿಕ್ಷಕ ಸೋಮರಾಯ ಜನ್ನು, ಶಿಕ್ಷಕಿ ವಾಣಿಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮೋತ್ಸವದಲ್ಲಿ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ, ಜಿಲ್ಲಾ ಆಯುಷ್ ಆಯುರ್ವೇದ ಇಲಾಖೆ ಉಡುಪಿ ವೈದ್ಯರಿಂದ ಆಯುರ್ವೇದ ಚಿಕಿತ್ಸೆ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ, ಸರ್ಕಾರಿ ಆಸ್ಪತ್ರೆ ಎನ್.ಸಿ.ಡಿ ವೈದ್ಯರಿಂದ ಹಿರಿಯ ನಾಗರಿಕರಿಗೆ ಹಾಗೂ ವಿಶೇಷಚೇತನರಿಗೆ ತಪಾಸಣೆ, ಆಪ್ತ ಸಮಾಲೋಚನೆ, ಔಷಧ ವಿತರಣೆ, ಕಾರ್ಮಿಕ ಇಲಾಖೆ ವೈದ್ಯರಿಂದ ನೋಂದಾಯಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ, ಎ.ಜೆ ಆಸ್ಪತ್ರೆ ಜನರಲ್ ಮೆಡಿಸಿನ್ ಹಾಗೂ ಶುಗರ್, ಹೃದಯ ಸಂಬಂಧಿಸಿದ ಚಿಕಿತ್ಸೆ, ಕೃಷಿ ಸಲಕರಣೆಗಳ ಪ್ರದರ್ಶನ, ಮಾಹಿತಿ, ಸಾಕು ನಾಯಿಗಳಿಗೆ, ಬೆಕ್ಕುಗಳಿಗೆ ರೇಬಿಸ್ ನಿರೋಧಕ ಲಸಿಕೆ, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯವರಿಂದ ಕಣ್ಣಿನ ತಪಾಸಣೆ, ತೋಟಗಾರಿಕೆ ಬಗ್ಗೆ ಮಾಹಿತಿ, ಆಯ್ದ ಫಲಾನುಭವಿಗಳಿಗೆ ತರಕಾರಿ ಬೀಜ ವಿತರಣೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಮಾಹಿತಿ, ಸಂಜೀವಿನಿ ಸದಸ್ಯರಿಂದ ಆಹಾರ ಮೇಳ, ಮಹಿಳಾ ಸಬಲೀಕರಣ ಬಗ್ಗೆ ತಜ್ಞರಿಂದ ಮಾಹಿತಿ, ಗ್ರಂಥಾಲಯದಿಂದ ಪುಸ್ತಕ ಮಳಿಗೆ ಮೊದಲಾದವುಗಳು ಇದ್ದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!