spot_img
Thursday, March 5, 2026
spot_img

ನಾಡಾ ಹಾಡಿಗರಡಿ ದೈವಸ್ಥಾನ ವಾರ್ಷಿಕ ಹಾಲುಹಬ್ಬ, ಗೆಂಡ ಸೇವೆ: ಧಾರ್ಮಿಕ ಸಭಾ ಕಾರ್ಯಕ್ರಮ

Kundapura: ನಾಡಾ ಹಾಡಿಗರಡಿ ದೈವಸ್ಥಾನವನ್ನು ೫೦೦ ಮಿಕ್ಕಿ ಕುಟುಂಬಗಳು ನಂಬಿಕೊಂಡು ಬಂದಿದ್ದಾರೆ. ಜನರ ನಂಬಿಕೆ ಮತ್ತು ಶೃದ್ಧೆಯಿಂದ ದೈವಸ್ಥಾನ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಇನ್ನಷ್ಟು ಅಭಿವೃದ್ಧಿ ಮಾಡುವ ಕನಸು ಕಂಡಿದ್ದೇವೆ. ದೈವಸ್ಥಾನದ ಮೇಲ್ಛಾವಣಿ ಸಹಿತ ಎಲ್ಲಾ ಕಾರ್ಯಗಳ ಮಾಡುವ ಪ್ರತಿಜ್ಞೆ ಮಾಡೋಣ. ನಂಬಿದ ನಾವೆಲ್ಲ ಸೇರಿ ಈ ಕಾರ್ಯ ಮಾಡೋಣ ಎಂದು ಮುಂಬೈ ಹೈಕೋರ್ಟ್ ವಕೀಲರು, ದೇವಸ್ಥಾನದ ಅಭಿವೃದ್ಧಿ ರೂವಾರಿ ಚಂದ್ರ ನಾಯ್ಕ ಬೆದ್ರಾಡಿ ಮನೆ ಹೇಳಿದರು.

ಅವರು ಜನವರಿ 14 ರಂದು ನಡೆದ ನಾಡಾ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಮತ್ತು ಗೆಂಡ ಸೇವೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಡಿಗರಡಿ ದೈವಸ್ಥಾನ ಸಮಿತಿ ಇದರ ಅಧ್ಯಕ್ಷರಾದ ನಾಗೇಶ್ ಪಿ. ಕಾಂಚನ್ ಮಾತನಾಡಿ ದೈವಸ್ಥಾನವನ್ನು ಕಾರ್ಯಕ್ರಮಗಳ ಮಾದರಿಯಾಗಿ ನಡೆಯುತ್ತಿದ್ದು ಭಕ್ತರು ಶೃದ್ದ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ದಾನಿಗಳು ಭಕ್ತರ ಬೇಡಿಕೆಗೆ ಸದಾ ಸ್ಪಂದಿಸುತ್ತಿದ್ದಾರೆ ಆ ನಿಟ್ಟಿನಲ್ಲಿ ದೈವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಎ.ಎಸ್.ಎಫ್ ಮುಂಬೈ ಇದರ ನಿವೃತ್ತ ಮೆನೇಜಿಂಗ್ ಡೈರೆಕ್ಟರ್ ಪ್ರದೀಪ ಚಂದನ್, ಉದ್ಯಮಿಗಳಾದ ಮಂಜುನಾಥ ಪೂಜಾರಿ, ಉದ್ಯಮಿ ಸತೀಶ ಮೊಗವೀರ ಉಳ್ಳೂರು-೭೪, ಸಂತ ಅಂಥೋನಿ ಚರ್ಚ್ ಪಡುಕೊಣೆ ಪಾಲನ ಮಂಡಳಿ ಉಪಾಧ್ಯಕ್ಷರಾದ ಪ್ರಭು ಕೆನಡಿ ಪಿರೇರಾ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅರುಣ ಕುಮಾರ್ ಶೆಟ್ಟಿ, ಮುಂಬೈನ ಉದ್ಯಮಿ ಭಾಸ್ಕರ ಕಾಂಚನ್, ನಾವುಂದ ಗ್ರಾಮ ಆಡಳಿತಾಧಿಕಾರಿ ಸಂದೀಪ ಭಂಡಾರ್ಕರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ| ವಿನಾಯಕ ಚಂದನ್ ಮುಂಬೈ, ಡಾ| ವಿಶ್ವಾಸ್ ಪಡುಕೋಣೆ ಇವರಿಗೆ ಗೌರವಾರ್ಪಣೆ ಸನ್ಮಾನಿಸಲಾಯಿತು.

ಚಂದ್ರಕಾಂತ ರತ್ನ ಫೌಂಡೇಶನ್ ಪ್ರವರ್ತಕರಾದ ಬಸವರಾಜ್ ಕುದ್ರಿಸಾಲು ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅನ್ನದಾನ ಸೇವಾಕರ್ತರಾದ ಶೇಖರ ಮೊಗವೀರ ಪಡುಮನೆ ಮತ್ತು ರವೀಂದ್ರ ಎಸ್. ಕಾಂಚನ್ ಕಣಿಪಟ್ಟೆಮನೆ ಬಟ್ಟೆಕುದ್ರು ಇವರುಗಳನ್ನು ಸನ್ಮಾನಿಸಲಾಯಿತು.

ದೈವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ ಸ್ವಾಗತಿಸಿ, ವಿಶ್ವಾಸ್ ಲೋಹಿತಾಶ್ವ ಆರ್.ಕುಂದರ್, ರಾಜೇಶ್ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ವಿಜಯ ಕುಮಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!