spot_img
Thursday, March 5, 2026
spot_img

ಜ.21: ಹಾಲಾಡಿ ಶ್ರೀಮರ್ಲುಚಿಕ್ಕು ದೇವಸ್ಥಾನದ ಹಾಲುಹಬ್ಬ ಮತ್ತು ಗೆಂಡೋತ್ಸವ

ಹಾಲಾಡಿ: ಕುಂದಾಪುರ ತಾಲೂಕಿನ ಕಾರಣಿಕ ದೈವಕ್ಷೇತ್ರಗಳಲ್ಲೊಂದಾದ ಹಾಲಾಡಿ ಶ್ರೀ ಮರ್ಲುಚಿಕ್ಕು ದೇವಸ್ಥಾನದಲ್ಲಿ ಜನವರಿ 20-2026 ಮತ್ತು22-2026 ರಂದು ಪ್ರತಿಷ್ಠಾ ವರ್ಧಂತಿ ಉತ್ಸವ, ಹಾಲು ಹಬ್ಬ ಮತ್ತು ಗೆಂಡೋತ್ಸವ ನಡೆಯಲಿದೆ.

ಹಾಲಾಡಿಯ ವಾರಾಹಿ ನದಿಯ ತಟಾಕದಲ್ಲಿರುವ ಈ ದೇವಸ್ಥಾನಕ್ಕೆ ಕರಾವಳಿ ಮತ್ತು ಮಲೆನಾಡ ಭಾಗದಲ್ಲೂ ಬಹುದೊಡ್ಡ ಸಂಖ್ಯೆಯ ಭಕ್ತರಿದ್ದು, ಕರಾವಳಿ ಕಡಲ ಭಾಗದ ಖಾರ್ವಿ ಕೊಂಕಣಿ ಸಮುದಾಯದ ಆರಾಧ್ಯ ಕ್ಷೇತ್ರವಾಗಿದೆ, ಮರ್ಲುಚಿಕ್ಕು ಪ್ರಧಾನ ದೇವಸ್ಥಾನಗಳಲ್ಲಿ ಹಾಲಾಡಿಯ ಆದಿ ಮರಳುಚಿಕ್ಕು ಮತ್ತು ಮರಳುಚಿಕ್ಕು ದೇವಸ್ಥಾನದ ಗೆಂಡಸೇವೆ ಮೊದಲು ನಡೆಯುತ್ತದೆ..

ಶ್ರೀ ಕ್ಷೇತ್ರದಲ್ಲಿ ಜನವರಿ 20 ರಂದು ಬೆಳಿಗ್ಗೆ 9.30 ರಿಂದ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಕಲಾಹೋಮ, ಕಲಾಭಿಷೇಕ ಮಧ್ಯಾಹ್ನ 1.00 ರಿಂದ ಅನ್ನಸಂತರ್ಪಣೆ, ಜನವರಿ 21 ರಂದು ಮಧ್ಯಾಹ್ನ ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ. ರಾತ್ರಿ ಗೆಂಡಸೇವೆ, ಮಹಾ ಅನ್ನ ಸಂತರ್ಪಣೆ, ಶ್ರೀ ಕ್ಷೇತ್ರ ಹಾಲಾಡಿ ಮೇಳದವರಿಂದ ಯಕ್ಷಗಾನ ಬಯಲಾಟ, ಜನವರಿ 22 ರಂದು ಸ್ವಾಮಿ ಸೇವೆ, ನಾಗ ದರ್ಶನ, ಢಮರು ಸೇವೆ, ತುಲಾಭಾರ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!