spot_img
Thursday, March 5, 2026
spot_img

ಜ.14: ಮಾರಣಕಟ್ಟೆ ಹಬ್ಬದಲ್ಲಿ ಪ್ರೇರಣೋತ್ಸವ

ಕುಂದಾಪುರ: ಪ್ರೇರಣ ಯುವ ವೇದಿಕೆ ನೈಕಂಬ್ಳಿ-ಚಿತ್ತೂರು ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ಆಗರಬತ್ತಿಗಳು ಅರ್ಪಿಸುವ ಮಾರಣಕಟ್ಟೆ ಹಬ್ಬದಲ್ಲಿ ಪ್ರೇರಣೋತ್ಸವ 2026 ಕಾರ್ಯಕ್ರಮ ಜನವರಿ 14 ಬುಧವಾರ ಸಂಜೆ 5 ಗಂಟೆಯಿಂದ ನೆಡೆಯಲಿದೆ.

ಪ್ರೇರಣೋತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಸದಾ ಹೊಸತನ್ನು ಕೊಡುವ ಪ್ರೇರಣ ತಂಡ ಈ ಬಾರಿ ಇನ್ನಷ್ಟು ಹೊಸತನ, ಪ್ರಯೋಗಶೀಲ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಾರಣಕಟ್ಟೆ ಹಬ್ಬಕ್ಕೆ ಬರುವವರಿಗೆ ಅದ್ದೂರಿಯ ಸಾಂಸ್ಕೃತಿಕ ಮನೋರಂಜನೆ ನೀಡಲು ಪ್ರೇರಣ ತಂಡ ಸನ್ನದ್ಧವಾಗಿದೆ.

ಸಭಾ ಕಾರ್ಯಕ್ರಮದಲ್ಲಿ ಹೈದರಬಾದ್ ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

ಮನು ಹಂದಾಡಿ ಮತ್ತು ತಂಡದವರಿಂದ ನಗೆ ನಾಟಕ, ಅಮೆಜಿಂಗ್ ಸ್ಟೆಪ್ಪರ್‍ಸ್ ತ್ರಾಸಿ ಇವರಿಂದ ಡಾನ್ಸ್ ಧಮಾಕ, ಸ್ವಸ್ತಿಕ್ ಅವರಿಂದ ಸ್ಥಳದಲ್ಲಿಯೇ ಕಾರ್ಟೂನ್ ಬಿಡಿಸಿಕೊಡುವ ವ್ಯವಸ್ಥೆ, ಸುಪ್ರೀತ್ ಸಫಲಿಗ ಮತ್ತು ತಂಡದಿಂದ ಸಂಗೀತ ಹಬ್ಬ, ಪ್ರತಿಭಾನ್ವಿತ ಯುವಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಗಾನ ವೈಭವ ನಡೆಯಲಿದ್ದು, ಭಾಗವತರಾದ ದಿನೇಶ ಶೆಟ್ಟಿ ಬೆಪ್ಡೆ, ಗಣೇಶ ಆಚಾರ್ಯ ಬಿಲ್ಲಾಡಿ, ಸುಧೀರ್ ಭಟ್ ಪೆರ್ಡೂರು, ವಿನಯ ಆರ್ ಶೆಟ್ಟಿ, ಮುಮ್ಮೇಳದಲ್ಲಿ ಶ್ರೀನಿವಾಸ ಪ್ರಭು, ಸುಜನ್ ಹಾಲಾಡಿ, ಅಕ್ಷಯ ಆಚಾರ್ಯ, ಲೋಹಿತ್ ಕೊಮೆ ಭಾಗವಹಿಸಲಿದ್ದಾರೆ. ಬಟ್ಟೆಕುದ್ರು ಶ್ರೀರಾಮ ಮಹಿಳಾ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ, ಆರಾಧ್ಯ ಆರ್.ಬಾಯರಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಣುತ್ ಗಾಣಿಗ ನಿರ್ವಹಿಸಲಿದ್ದಾರೆ ಎಂದು ಪ್ರೇರಣದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!