spot_img
Friday, March 6, 2026
spot_img

ವಂಡ್ಸೆ: ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ

ಕುಂದಾಪುರ: ನಾಲ್ಕು ವರ್ಷಗಳ ಹಿಂದೆ ಕೇವಲ ರೂ.7 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾದ ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಸಂಘ ತನ್ನ ಸೇವೆಯಿಂದ ಇವತ್ತು 7 ಕೋಟಿಗೂ ಅಧಿಕ ಠೇವಣಾತಿ ಸಂಗ್ರಹಿಸಿ ಮುನ್ನೆಡೆಯುತ್ತಿದೆ, ಉತ್ತಮ ಸೇವೆ ನೀಡುವುದರ ಮೂಲಕ ಸದಸ್ಯರ ವಿಶ್ವಾಸ ಗಳಿಸಿರುವ ಈ ಸಂಘ ಆರಂಭದ ಎರಡನೇ ವರ್ಷದಿಂದಲೇ ಲಾಭ ಗಳಿಸಲು ಆರಂಭಿಸಿರುವುದು ಸಂಘದ ಬೆಳವಣಿಗೆಯನ್ನು ಸೂಚಿಸುತ್ತದೆ. ಸಹಕಾರ ಕ್ಷೇತ್ರ ಇವತ್ತು ವಿಶಾಲವಾಗಿ ಬೆಳೆಯುತ್ತಿದ್ದು ಜನಸಾಮಾನ್ಯರ ಆಪ್ತಕ್ಷೇತ್ರವಾಗಿದೆ ಎಂದು ಸಂಘದ ಕಾನೂನು ಸಲಹೆಗಾರ, ನ್ಯಾಯವಾದಿ ಉಮೇಶ ಶೆಟ್ಟಿ ಶಾನ್ಕಟ್ಟು ಹೇಳಿದರು.

ಅವರು ಜ.11ರಂದು ಶ್ರೀ  ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಸಂಘ ನಿ., ವಂಡ್ಸೆ ನೇತೃತ್ವದಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷರಾದ ದೇವು ಮೆಂಡನ್ ರಾಯಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯಮಟ್ಟದ ಜ್ಞಾನಸಿಂಧು ಪ್ರಶಸ್ತಿ ಪುರಸ್ಕೃತರಾದ ಕೆ.ಪಿ.ಎಸ್ ವಂಡ್ಸೆ-ನೆಂಪು ಇಲ್ಲಿನ ಶಿಕ್ಷಕರಾದ ರವಿರಾಜ ಶೆಟ್ಟಿ, ನಾಗರಾಜ ಪೂಜಾರಿ ವಂಡ್ಸೆ, ಬೆಳಗಾವಿ ಚಳಿಗಾಲದ ಅಧಿವೇಶನದ ಸಾಂಸ್ಕೃತಿಕ ತಂಡದಲ್ಲಿ ಭಾಗವಹಿಸಿ ಬಾಲಪ್ರತಿಭೆ ಆಯುಷಿ ಅವರನ್ನು ಸನ್ಮಾನಿಸಲಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಅಭಿನಂದಿಸಿ, ಸಹಕಾರ ಸಂಘ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಶ್ಲಾಘನಾರ್ಹ ಕಾರ್ಯ ಮಾಡುತ್ತಿದೆ, ಇದು ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದರು.

ನೋಟರಿ ನ್ಯಾಯವಾದಿ ರಾಜ್‌ಕುಮಾರ್ ನೆಂಪು, ಕೆ.ಪಿ.ಎಸ್ ವಂಡ್ಸೆ-ನೆಂಪು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕಿ ಆಶಾ, ಸಂಘದ ಉಪಾಧ್ಯಕ್ಷ ವೆಂಕಟೇಶ ಸಿ. ಶೆಟ್ಟಿ ತೆಂಕೊಡಿಗೆ, ನಿರ್ದೇಶಕರಾದ ಶಿವರಾಮ ಶೆಟ್ಟಿ ವಂಡ್ಸೆ, ಉದಯ ಕೆ.ನಾಯ್ಕ ವಂಡ್ಸೆ, ರವೀಂದ್ರ ಎನ್.ಬಂಗೇರ ಕುಂದಾಪುರ, ಶಂಕರ ಗಾಣಿಗ ವಂಡ್ಸೆ, ಜಲಜ ಪೂಜಾರಿ ಮಾವಿನಕಟ್ಟೆ, ಶಶಿಕಲಾ ಎಸ್.ವಂಡ್ಸೆ, ಚಂದ್ರ ರಾಯಪ್ಪನಡಿ, ದಿವಾಕರ ಸುಜಿ ವಂಡ್ಸೆ, ಸತೀಶ ಮೆಂಡನ್ ರಾಯಪ್ಪಾಡಿ, ಹರೀಶ ನಾಯ್ಕ ವಂಡ್ಸೆ, ನಾಗರಾಜ ಪುತ್ರನ್ ಅಂಬ್ಲಾಡಿ ಉಪಸ್ಥಿತರಿದ್ದರು.

ಸನ್ಮಾನಕ್ಕೆ ಪ್ರತ್ಯುತ್ತರವಾಗಿ ಶಿಕ್ಷಕ ರವಿರಾಜ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ಜಯರಾಮ ಶೆಟ್ಟಿ ಬೆಳ್ವಾಣ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ಅಭಿಷೇಕ ಎಸ್. ವಂಡ್ಸೆ, ಪ್ರಾಧ್ಯಾಪಕ ಮಂಜುನಾಥ ಚಂದನ್ ನೆಂಪು ಸನ್ಮಾನ ಪತ್ರ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸಂತೋಷ ಸನ್ಮಾನ ಪತ್ರ ವಾಚಿಸಿ, ವಂದಿಸಿದರು. ಶಿಕ್ಷಕ ಸದಾಶಿವ ಕೆಂಚನೂರು ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಹಕ ಗುರುರಾಜ ಗಾಣಿಗ ಸಹಕರಿಸಿದರು.

(ಚಿತ್ರ ಕೃಪೆ: ಸುಜಿ ಸ್ಟುಡಿಯೋ ವಂಡ್ಸೆ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!