spot_img
Friday, March 6, 2026
spot_img

ಕೃಷಿ ಮಾರ್ಗದರ್ಶಕ ಕೆಂಚನೂರು ಕಿಶನ್ ಕುಮಾರ್ ಶೆಟ್ಟಿ ನಿಧನ

ಕುಂದಾಪುರ: ಪ್ರಯೋಗಶೀಲ ಕೃಷಿಕ, ಕೃಷಿ ಮಾರ್ಗದರ್ಶಕ, ಪರಿಸರ ಪ್ರೇಮಿ ಕೆಂಚನೂರು ಕೆಶನ್ ಕುಮಾರ್ ಶೆಟ್ಟಿ ಜ.12ರಂದು ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೫ ವರ್ಷ ವಯಸ್ಸಾಗಿತ್ತು.

ಕೃಷಿಯ ಬಗ್ಗೆ ವಿಶೇಷವಾದ ಒಲವು ಹೊಂದಿದ್ದ ಅವರು ಗೇರು ಕೃಷಿಯ ಬಗ್ಗೆ ಸಾಕಷ್ಟು ಪ್ರಯೋಗಳನ್ನು ಮಾಡಿದ್ದರು. ಸುಧಾರಿತ ಗೇರು ತಳಿಯನ್ನು ಪ್ರಾಯೋಗಾತ್ಮಕವಾಗಿ ಪರಿಚಯಿಸಿ ಅದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಿದ್ದರು. ಈ ಭಾಗದಲ್ಲಿ ಸುಧರಿತ ಗೇರು ತಳಿಗಳನ್ನು ರೈತರಿಗೆ ಮನಮುಟ್ಟುವಂತೆ ಮಾಹಿತಿ ನೀಡುತ್ತಿದ್ದ ಅವರು ಹಲವಾರು ಕಡೆ ಮಾಹಿತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಭತ್ತ ಬೇಸಾಯದಲ್ಲೂ ಕೂಡ ಸಾಕಷ್ಟು ಕೆಲಸ ಮಾಡಿದ್ದರು. ತಾನೋರ್ವ ಕೃಷಿಕನಾಗಿ, ಅದರ ಯಶಸ್ಸಿನ ಗುಟ್ಟನ್ನು ರೈತರಿಗೆ ಬಿಟ್ಟುಕೊಡುತ್ತಿದ್ದರು.

ಪರಿಸರದ ವಿಚಾರದಲ್ಲೂ ಕೂಡಾ ಆಸಕ್ತಿಯಿಂದ ಸಾಕಷ್ಟು ಕೆಲಸ ಮಾಡಿದ್ದರು. ಜೀವ ಪ್ರಬೇಧ, ಭೂಮಿಯ ನೈಸರ್ಗಿಕ ಗುಣಧರ್ಮ, ಅರಣ್ಯ ರಕ್ಷಣೆಯ ಬಗ್ಗೆ ಸಾಕಷ್ಟು ಆಳವಾದ ಮಾಹಿತಿ ಹೊಂದಿದ್ದರು. ಮಾಧವ್ ಗಾಡ್ಗಿಳ್ ವರದಿ, ಕಸ್ತೂರಿ ರಂಗನ್ ವರದಿಯ ವಿಚಾರದಲ್ಲೂ ಕೂಡಾ ಅಧ್ಯಯನ ಮಾಡಿದ್ದರು. ಈ ವಿಚಾರಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು.

ವಡ್ಡರ್ಸೆಯ ಪ್ರತಿಷ್ಟಿತ ಕುಟುಂಬದ ಲಕ್ಷ್ಮಣ ಶೆಟ್ಟಿ ಹಾಗೂ ಸಾದಮ್ಮ ಶೆಟ್ಟಿ ಯವರ ಪುತ್ರರಾಗಿ ಜನಿಸಿದ್ದ ಇವರು ಶಿಕ್ಷಣದ ದಿಸೆಯಲ್ಲಿಯೇ ಸಮಾಜಮುಖಿ ಚಟುವಟಿಕೆ, ಕೃಷಿ, ಪರಿಸರದ ಬಗ್ಗೆ ಒಲವು ಬೆಳೆಸಿಕೊಂಡವರು. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.

ಜ.11ರಂದು ಕುಂದಾಪುರದಲ್ಲಿ ನಡೆದ ಇನಿದನಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಆಸ್ವಾಧಿಸಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡಾ ಚಿಕಿತ್ಸೆ ಫಲಕಾರಿಯಾಗಿದೆ ಅವರು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ತಾಯಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!