spot_img
Monday, November 2, 2026
spot_img

ವಿ.ಎಂ.ಕೆ ಆತ್ರಾಡಿಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಇದರ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ವಿಜಯ ಮಕ್ಕಳ ಕೂಟ ಆಂಗ್ಲಮಾಧ್ಯಮ ಶಾಲೆ ಆತ್ರಾಡಿ, ವಂಡ್ಸೆ ಇವರ ಸಹಯೋಗದಲ್ಲಿ ನಡೆಯಿತು.

ವಿಜಯ ಮಕ್ಕಳ ಕೂಟ ಆಂಗ್ಲಮಾಧ್ಯಮ ಶಾಲೆ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣ ಉಪನಿರ್ದೇಶಕ ಚಂದ್ರಶೇಖರ ಶೆಟ್ಟಿ ಆಲೂರು ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಭಾರ ದೈಹಿಕ ಶಿಕ್ಷಣ ಅಧಿಕಾರಿ ರವಿಚಂದ್ರ ಕಾರಂತ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ನರೇಂದ್ರ ಕಾಮತ್, ಸಿ.ಆರ್.ಪಿ ಸತೀಶ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಇದರ ಅಧ್ಯಕ್ಷರಾದ ವಿಜಯ ಕುಮಾರ ಶೆಟ್ಟಿ, ಗ್ರೇಡ್ ೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೈಂದೂರು ಇದರ ಅಧ್ಯಕ್ಷರಾದ ಸತೀಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಇದರ ಉಪಾಧ್ಯಕ್ಷರಾದ ರವಿಶಂಕರ್ ಹೆಗ್ಡೆ, ರವಿ ಶೆಟ್ಟಿ, ಗ್ರೇಡ್ ೨ ಉಡುಪಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ರಾಜಾರಾಮ್, ಮುಖ್ಯೋಪಾಧ್ಯಾಯರ ಸಂಘ ಬೈಂದೂರು ಇದರ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಗ್ರೇಡ್-೧ ದೈ.ಶಿ.ಶಿಕ್ಷಕರ ಸಂಘ ಉಡುಪಿ ಇದರ ಅಧ್ಯಕ್ಷರಾದ ಕುಸುಮಾಕರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೈಂದೂರು ಇದರ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಗುರುರಾಜ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿ‌ಎಂಕೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನುಜ್ಞಾ, ತ್ರಿಷಾ, ಸಂಭ್ರಮ ಪ್ರಾರ್ಥಿಸಿದರು.ಮನಸ್ವಿ, ಪ್ರತೀಕ್ಷಾ, ಕಾರ್ಯಕ್ರಮ ನಿರ್ವಹಿಸಿ,ಸೌಖ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!