spot_img
Saturday, October 31, 2026
spot_img

ಬ್ಲಾಕ್ ಕಾಂಗ್ರೆಸ್ ಕುಂದಾಪುರ: ಇಂದಿರಾ ಗಾಂಧಿ ಪುಣ್ಯತಿಥಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ

ಕುಂದಾಪುರ: ಕೃಷಿ ಕ್ರಾಂತಿ, ಉಳುವವನೇ ಹೊಲದ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ ಅಂತಹ ಕ್ರಾಂತಿಕಾರಿ ಕಾರ್ಯಕ್ರಮಗಳಿಂದ ಇಂದು ದೇಶದ ಗ್ರಾಮೀಣ ಭಾಗದ ಜನರು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಾಯಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಭೂಮಿಯ ಹಕ್ಕು ಬಡ ಜನತೆಗೆ ಸಿಕ್ಕಿದ ಕಾರಣ ಜೀತ ಪದ್ಧತಿ ಅಂತ್ಯವಾಗಲು ಮುನ್ನುಡಿಯಾಯಿತು ಎಂದು ನಾಯಕರದ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆದೂರು ಸದಾನಂದ ಶೆಟ್ಟಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೆ, ಭಾರತ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಿದರು ಎಂದರು.

ಸಭೆಯಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ, ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಶನ್ ಶೆಟ್ಟಿ, ಹಿರಿಯರಾದ ಸುಭಾಷ್ ಪೂಜಾರಿ, ಮಾಜಿ ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಸದಾನಂದ ಖಾರ್ವಿ, ಶಶಿಧರ ಕೋಟೆ, ಮಾಜಿ ಪಂಚಾಯತ್ ಅಧ್ಯಕ್ಷರಾದ ಸವಿತಾ ಪೂಜಾರಿ, ಗಣಪತಿ ಶೇಟ್, ಮಾಜಿ ಪಂಚಾಯತ್ ಸದಸ್ಯರಾದ ಗೀತಾ ಆನಗಳ್ಳಿ, ಜಾನಕಿ ಬಿಲ್ಲವ, ಕುಮಾರ ಖಾರ್ವಿ, ಜ್ಯೋತಿ ನಾಯ್ಕ್, ಜೋಸೆಫ್ ರೆಬೆಲ್ಲೊ, ರಿಯಾಜ್ ಕೋಡಿ, ಕೆ ಎಸ್ ವಿಜಯ್, ನಿತಿನ್ ಡಿಸೋಜ, ರೇಣುಕಾ ಪೂಜಾರಿ, ಮೇಬಲ್ ಡಿಸೋಜಾ, ವೇಣು ಗೋಪಾಲ್, ವಿವೇಕ್ ಚರ್ಚ ರಸ್ತೆ, ಜಲಜಾಕ್ಷಿ ಪೂಜಾರಿ, ಪ್ರಭಾಕರ ಕಡ್ಗಿಮನೆ, ಸಾವಿತ್ರಿ, ಜೋಯ್ ರೆಬೆಲ್ಲೊ, ಚಂದ್ರಕಾಂತ್ ಖಾರ್ವಿ, ವೇಲಾ ಬ್ರಗಾಂಜ, ಸಾವಿತ್ರಿ ,ಎಡಾಲ್ಫ್ ಡಿ ಕೋಸ್ಟ ಇನ್ನಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಚಂದ್ರಶೇಖರ್ ಖಾರ್ವಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ನಿರೂಪಿಸಿ, ಅರುಣ ಪಟೇಲ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!