spot_img
Saturday, March 7, 2026
spot_img

ಮರವಂತೆ: ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ

ಮರವಂತೆ: ಸಹಕಾರಿ ಸಂಸ್ಥೆ ಎಂಬುವುದು ಖಾಸಗಿ ಸಂಸ್ಥೆಯಲ್ಲ, ಇದೊಂದು ಸರಕಾರಿ ಸ್ವಾಮ್ಯದ ಸಂಸ್ಥೆ, ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದರು.

ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ (ರಿ) ಮರವಂತೆ ಇದರ ೨೫ನೇ ವರ್ಷದ ಸವಿನೆನಪಿಗಾಗಿ ಬೆಳ್ಳಿ ಹಬ್ಬ ೨೦೨೬ ಸಾಂಸ್ಕೃತಿಕ, ಆರೋಗ್ಯ, ಸನ್ಮಾನ ಹಾಗೂ ಯಕ್ಷಗಾನ ಸಮ್ಮಿಲನ ಕಾರ್ಯಕ್ರಮ ರಜತ ಮಹೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದ ಮಹತ್ವವನ್ನು ಕೇಂದ್ರ ಹಾಗೂ ರಾಜ್ಯದ ಜನಪ್ರತಿನಿಧಿಗಳು ಅರಿತುಕೊಂಡಿದ್ದಾರೆ. ಜನರು ಸಹಕಾರಿ ಕ್ಷೇತ್ರದ ಮೇಲೆ ನಂಬಿಕೆ, ವಿಶ್ವಾಸವನ್ನು ಇಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ಎಲ್ಲ ಸಹಕಾರಿ ಸಂಘಗಳು ಮಾಡಬೇಕು” ಎಂದರು

ಮಂಗಳೂರು ಮೀನುಗಾರರ ಫೆಡರೇಷನ್ ಅಧ್ಯಕ್ಷರು, ಶಾಸಕರಾದ ಯಶಪಾಲ್ ಸುವರ್ಣ ಮಾತನಾಡಿ, “ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳೆಯರು ಸಮರ್ಪಣಾ ಮನೋಭಾವದಿಂದ ಆರೋಗ್ಯಪೂರ್ಣ ಕುಟುಂಬ, ಸಮಾಜ ಮತ್ತು ರಾಷ್ಟ್ರನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು” ಎಂದರು.

ಮರವಂತೆ ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಕಮಾಲಾಕ್ಷಿ ಖಾರ್ವಿ ಮರವಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸಂಘದ ಮಾಜಿ ಅಧ್ಯಕ್ಷರುಗಳನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು. ಆಶಿಕಾ ಸ್ಥಾಪನಾ ಅಧ್ಯಕ್ಷ ಶ್ರೀರಾಮ ಕಾರಂತ್, ಹಾಗೂ ಬೆಂಗಳೂರು ಸಾಂಸ್ಕೃತಿಕ ಹಿತ ಚಿಂತಕರಾದ ಕೆ.ಎಂ ಶೇಖರ, ಉಡುಪಿ ಮಲ್ಟಿ ಮೀನುಗಾರಿಕೆ ಜಂಟಿ ನಿರ್ದೇಶಕ ಕುಮಾರಸ್ವಾಮಿ ಬಿ.ವಿ. ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್. ಉಡುಪಿ ಸಹಕಾರ ಸಂಘಗಳ ಲೆಕ್ಕಪರಿಶೋಧನ ಉಪನಿರ್ದೇಶಕಿ ತೇಜೋಮೂರ್ತಿ, ಆರ್. ಮೀನುಗಾರಿಕಾ ಇಲಾಖೆಯ ಸವಿತಾ ಖಾದ್ರಿ ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಸುಧೀರ ಕುಮಾರ್ ಕುಂದಾಪುರ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಆಶಾ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪಟಗಾರ್, ಮರವಂತೆ ಮಹಿಳಾ ಸಂಘದ ಉಪಾಧ್ಯಕ್ಷೆ ವನಿತಾ ಖಾರ್ವಿ, ಸಂಘದ ನಿರ್ದೇಶಕರಾದ ಸವಿತಾ ಖಾರ್ವಿ, ನಾಗರತ್ನ ಖಾರ್ವಿ, ಸುಜಾತ ಪೂಜಾರಿ, ಪೂರ್ಣಿಮಾ ಮೊಗವೀರ, ನೇತ್ರಾವತಿ ಪೂಜಾರಿ, ವಿಜಯ ದಾಸ್, ಶೈಲಾ ಖಾರ್ವಿ, ಆಶಾ ಪೂಜಾರಿ, ನಬೀಸಾ ಅರೆಹೊಳೆ ಕ್ರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಮೀನುಗಾರರ ವಿವಿಧೋದ್ದೇಶ ಇದರ ಕಾರ್ಯನಿರ್ವಾಹಣಾಧಿಕಾರಿ ಕೆ. ಶ್ರೀನಿವಾಸ ಆಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಸಂಘವು ಕಷ್ಟದಿಂದ ಎತ್ತರಕ್ಕೆ ಬೆಳೆದು ಬಂದ ಹಾದಿಯನ್ನು ಹಾಗೂ ಸಂಘಕ್ಕಾಗಿ ಶ್ರಮಿಸಿದ ಎಲ್ಲರನ್ನು ನೆನೆದರು.

ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ರಮಣಿ ಉಪ್ಪುಂದ ಪ್ರಾರ್ಥಿಸಿ ಸಂಘದ ಲೆಕ್ಕಿಗೆ ರೇಖಾ ಜಿ. ಕೆ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಚೈತ್ರಾ ಆಚಾರ್ಯ, ಹರ್ಷ ಖಾರ್ವಿ ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ಕಬ್ಬೈಲು ಶ್ರೀನಿವಾಸ್ ಅಡಿಗ ವಿರಚಿತ ಪೆರ್ಡೂರು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಅವರಿಂದ ಸುಗುಣೆ ಚಂದ್ರಿಕೆ ಯಕ್ಷಗಾನ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ಸಪ್ತಸ್ವರ ಮ್ಯೂಸಿಕ್ ಗ್ರೂಪ್ ಇವರಿಂದ ಹಳೆ ಚಲನಚಿತ್ರ ಮತ್ತು ಜಾನಪದ ಗೀತೆಗಳು ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!