spot_img
Saturday, March 7, 2026
spot_img

ಶೆಟ್ರಕಟ್ಟೆ ರಸ್ತೆ ಅಪಘಾತ: ಗೊಂದಲ ಸೃಷ್ಟಿಸಿದ ಸಾಮಾಜಿಕ ಜಾಲತಾಣಗಳ ಕಪೋಲ ಕಲ್ಪಿತ ಸುದ್ಧಿ

ಕುಂದಾಪುರ: ಸೋಮವಾರ ಸಂಜೆ  ಕುಂದಾಪುರ ತಾಲೂಕು ಶೆಟ್ರಕಟ್ಟೆಯಲ್ಲಿ ಸಂಭವಿಸಿದ ಬಸ್ ಮತ್ತು ಟಿಪ್ಪರ್ ನಡುವಿನ ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳು ಸರಿಯಾದ ಮಾಹಿತಿ ಇಲ್ಲದೆ ಕಪೋಲ ಕಲ್ಪಿತ ಸುದ್ಧಿಗಳನ್ನು ಪ್ರಸಾರ ಮಾಡಿ ಸಾರ್ವಜನಿಕರು ಮತ್ತು ಗಾಯಾಳುಗಳ ಕುಟುಂಬಿಕರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದರು.

ಕೆಲವು ವೆಬ್ ಸೈಟ್‌ಗಳು ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಗೆ ಕಟ್ಟಿದಂತೆ ವದಂತಿಗಳನ್ನು ಹುಟ್ಟು ಹಾಕಿದರು. ಸತ್ಯ ವಿಚಾರವನ್ನು ತಿಳಿದುಕೊಳ್ಳದೆ ತಮ್ಮದೆ ಕೆಲವು ಅನಿಸಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ಹಂಚಿದರು. ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ತುಂಬಾ ಗೊಂದಲ ಸೃಷ್ಟಿಯಾಯಿತು. ಖಚಿತವಾದ ಮಾಹಿತಿಯನ್ನು ಮಾದ್ಯಮಗಳನ್ನು ನೀಡಿದರೂ ಕೂಡಾ ಸುಳ್ಳು ಸುದ್ದಿಗಳೇ ಜಾಸ್ತಿ ವೈರಲ್ ಆದವು.

ಸುಳ್ಳು ಸುದ್ಧಿಗಳಿಂದ ಗಾಯಾಳುಗಳ ಕುಟುಂಬಿಕರು ಗೋಳಾಡುತ್ತಿದ್ದ ದೃಶ್ಯಗಳು ಕಂಡು ಬಂತು. ಆಸ್ಪತ್ರೆಗಳ ಬಳಿ ಮೊಬೈಲ್‌ಗಳಲ್ಲಿ ಸುದ್ಧಿಗಳನ್ನು ನೋಡಿ ಗಾಯಾಳುಗಳ ಕುಟುಂಬದವರು ಆತಂಕ ವ್ಯಕ್ತ ಪಡಿಸುತ್ತಿರುವುದು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುವ ಕರುಳು ಹಿಂಡುವ ದೃಶ್ಯಗಳು ಕಂಡು ಬಂತು.

ಇಬ್ಬರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡು ಮಣಿಪಾಲದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳ ಕುಂದಾಪುರದ ಸರಕಾರಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಕುಟುಂಬದವರಿಗೆ ಧೈರ್ಯ ತುಂಬಬೇಕಾದ ಮಹತ್ತರವಾದ ಜವಬ್ದಾರಿ ನಿರ್ವಹಿಸಬೇಕಾದ ಅಂತರ್ಜಾಲ ಮಾಧ್ಯಮಗಳು ಹೆಚ್ಚು ವೀಕ್ಷಣೆ, ಲೈಕ್ ಆಸೆಯಿಂದ ಧಾವಂತದಿಂದ ಸುದ್ಧಿ ಪ್ರಸರಿಸಿ ಅವಂತರಕ್ಕೆ ಕಾರಣವಾದರು. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುಳ್ಳು ಸುದ್ಧಿ ಪ್ರಸಾರಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!