spot_img
Saturday, March 7, 2026
spot_img

ಕಂಡ್ಲೂರು: ಯಕ್ಷಗಾನ ಕಲಾವಿದ ಉಳ್ಳೂರು ಶಂಕರ ದೇವಾಡಿಗ ಅವರಿಗೆ ಸನ್ಮಾನ

kundapura: ಯಕ್ಷಾಭಿಮಾನಿ ಬಳಗ ಕಂಡ್ಲೂರು ಹಾಗೂ ಶ್ರೀ ಭಗವತಿ ಕಟ್ಟೆ ಫ್ರೆಂಡ್ಸ್ ಕಂಡ್ಲೂರು ಇವರ ಜಂಟಿ ಆಶ್ರಯದಲ್ಲಿ ಸೌಕೂರು ಮೇಳದ ರಂಗಸ್ಥಳದಲ್ಲಿ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯರ ಜನ್ಮ ಶತಮಾನೋತ್ಸವ ‘ಯಕ್ಷಲೋಕದ ಮಾಸದ ಬಣ್ಣ 100’ ಕಾರ್ಯಕ್ರಮದ ಸಂಸ್ಮರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸ್ತ್ರೀ ವೇಷಧಾರಿ ಉಳ್ಳೂರು ಶಂಕರ ದೇವಾಡಿಗ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜನ್ಮಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಸಕ್ಕಟ್ಟು ಮಂಜುನಾಥಯ್ಯ, ಕಾವ್ರಾಡಿ ಗ್ರಾಮ ಪಂಚಾಯತ ನಿಕಟಪೂರ್ವ ಅಧ್ಯಕ್ಷರಾದ ವಿಜಯ ಪುತ್ರನ್, ವಾಸುದೇವ ಕಾಮತ್ ಕಂಡ್ಲೂರು, ಮೊಗವೀರ ಯಕ್ಷ ಕಲಾ ವೇದಿಕೆ ಮುಂಬೈ ಸಂಚಾಲಕರಾದ ಕಂಡ್ಲೂರು ಚಂದ್ರ ಮೊಗವೀರ ಕಾವ್ರಾಡಿ ಚಂದ್ರ ಭಂಡಾರಿ, ಜಗದೀಶ್ ಶೇರಿಗಾರ್ ಕಲ್ಲಾರ್ ಬೈಲ್ ಹಾಗೂ ರಮೇಶ್ ಶೇಟ್ ಕಾವ್ರಾಡಿ ಉಪಸ್ಥಿತರಿದ್ದರು.

ತಿಲಕ್ ರಾಜ್ ಬಳ್ಕೂರ್ ಕಾರ್ಯಕ್ರಮ ನಿರೂಪಿಸಿ ಚಂದ್ರ ಕಂಡ್ಲೂರ್ ವಂದಿಸಿದರು. ತದನಂತರ ಸೌಕೂರು ಮೇಳದವರಿಂದ ಅಕ್ಷಯ ಶೆಟ್ಟಿ ಮುಂಬಾರು ವಿರಚಿತ ಹಾಗೂ ಪ್ರಸಾದ್ ಮೊಗವೀರ ಮೊಗೆಬೆಟ್ಟು ಪದ್ಯ ರಚನೆಯ “ವಿಷಮ ಸೌಂದರ್ಯ” ನೂತನ ಪ್ರಸಂಗ ಅದ್ದೂರಿಯಾಗಿ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!