spot_img
Saturday, March 7, 2026
spot_img

ಶೆಟ್ರಕಟ್ಟೆಯಲ್ಲಿ ಭೀಕರ ರಸ್ತೆ ಅಪಘಾತ: ಬಸ್‌ಗೆ ಟಿಪ್ಪರ್ ಡಿಕ್ಕಿ, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ಗಂಭೀರ

ಕುಂದಾಪುರ: ತಲ್ಲೂರು ನೇರಳಕಟ್ಟೆ ರಸ್ತೆಯ ಶೆಟ್ರಕಟ್ಟೆಯಲ್ಲಿ ಕೆ‌ಎಸ್.ಆರ್.ಟಿಸಿ ಬಸ್ಸಿಗೆ ಮಣ್ಣು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಹಲವಾರು ವಿದ್ಯಾರ್ಥಿಗಳು, ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಂದಾಪುರದಿಂದ ಸಿದ್ದಾಪುರಕ್ಕೆ ಸಂಚರಿಸುತ್ತಿದ್ದ ಕೆ‌ಎಸ್‌ಆರ್‌ಟಿಸಿ ಬಸ್ಸಿಗೆ ಶೆಟ್ರಕಟ್ಟೆ ತಿರುವಿನ ಬಳಿ ಎದುರಿನಿಂದ ಬಂದ ಟಿಪ್ಪರ್ ಬಸ್ಸಿನ ಚಾಲಕನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಶಾಲಾ ಕಾಲೇಜು ಬಿಡುವ ಸಮಯವಾದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದು ಅಪಘಾತದ ರಭಸಕ್ಕೆ ಹಲವಾರು ಪ್ರಯಾಣಿಕರು ಗಂಭೀರ ಗಾಯಗೊಂಡರು.

ಕೂಡಲೇ ಸ್ಥಳೀಯರು ಅಂಬುಲೆನ್ಸ್ ಬರುವುದರೊಳಗೆ ರಿಕ್ಷಾ ಮತ್ತಿತ್ತರ ವಾಹನಗಳ ಮೂಲಕ ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಿದರು. ಕುಂದಾಪುರದ ಖಾಸಗಿ ಆಸ್ಪತ್ರೆ, ಸರಕಾರಿ ಆಸ್ಪತ್ರೆಗೆಗಳಿಗೆ ಕೂಡಲೇ ದಾಖಲಿಸಲಾಯಿತು. ಗಂಭೀರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.

ಕೆ‌ಎಂಸಿ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವಿದ್ಯಾರ್ಥಿನಿಯರಾದ ಅರ್ಚನಾ, ಚೈತ್ರಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಾದ ಹರೀಶ, ಸ್ಪಂದನಾ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿತ್ರಿ, ಶ್ರೀಮತಿ, ಸಾವಿತ್ರಿ, ಸ್ವಾತಿ, ಉದಯ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಾದ ಸನ್ನಿತ ಆಜ್ರಿ, ಮಮತಾ ಆಜ್ರಿ, ಧವ್ನಿತ್ ಪೂಜಾರಿ, ಆಶಿಶ್ ಪೂಜಾರಿ ನೇರಳಕಟ್ಟೆ, ಅಭಿಲಾಶ್ ಪೂಜಾರಿ ನೇರಳಕಟ್ಟೆ, ಮಂಜುನಾಥ ಪೂಜಾರಿ ನೇರಳಕಟ್ಟೆ, ಸತ್ಯಾವತಿ ಕೆಳಬಾಂಡ್ಯ, ಸುಜನ್ ಆರ್ಲಗುಡ್ಡೆ , ರಾಘವೇಂದ್ರ ತೀರ್ಥಹಳ್ಳಿ (ಟಿಪ್ಪರ್ ಚಾಲಕ) ಶಾರದಾ (ಗ್ರಾ.ಪಂ, ಸದಸ್ಯೆ) ಆಜ್ರಿ ಚಿಕಿತ್ಸೆ ನೀಡಲಾಗುತ್ತಿದೆ,

ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬಸ್ ಒಂದು ಭಾಗದ ನುಜ್ಜುಗೊಜ್ಜಾಗಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯರು ಕೆಳಗೆ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಗ್ರಾಮೀಣ ಮಾರ್ಗವಾದ್ದರಿಂದ ಹೆಚ್ಚಿನ ಸಂಖ್ಯೆಯ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಹಾಗಾಗಿ ಸಿಕ್ಕ ರಿಕ್ಷಾ ಕಾರುಗಳನ್ನು ಅಡ್ಡ ಹಾಕಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲಾ ಕಾಲೇಜು ಬಿಡುವ ಸಮಯವಾದ್ದರಿಂದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಜ್ರಿ ಸಿದ್ದಾಪುರ ಮಾರ್ಗಕ್ಕೆ ಹೋಗುವ ಬಸ್ಸು ಕಡಿಮೆ ಸಂಖ್ಯೆಯಲ್ಲಿದ್ದು ಈ ಭಾಗಕ್ಕೆ ಹೋಗುವ ಜನ ಈ ಬಸ್ಸನ್ನೇ ಅವಂಭಿಸಿದ್ದಾರೆ.

ಟಿಪ್ಪರ್ ಚಾಲಕ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಭಾಗದಲ್ಲಿ ಮಣ್ಣು ಸಾಗಾಟ ಮಾಡುವ ಟಿಪ್ಪರ್ ವಾಹನಗಳು ಅತೀ ವೇಗದಿಂದ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಮಣ್ಣು ಮಾಫಿಯಾ ಇತ್ಯಾದಿಗಳಿಂದ ಟಿಪ್ಪರ್ ವಾಹನಗಳು ಅತೀ ವೇಗದಿಂದ ಹೆಚ್ಚು ಟ್ರಿಪ್ ಗಾಗಿ ಸ್ಪರ್ಧೆಗಳಿದಂತೆ ಸಂಚರಿಸುತ್ತಿವೆ. ಈ ಅಪಘಾತ ಕೂಡಾ ಅಜಾಗರೂಕತೆ, ಅತೀ ವೇಗದಿಂದ ಸಂಭವಿಸಿದೆ.

ಟಿಪ್ಪರ್ ಗಳ ವೇಗಕ್ಕೆ ಬೇಕು ಕಡಿವಾಣ:
ಶೆಟ್ರಕಟ್ಟೆಯಲ್ಲಿ ಟಿಪ್ಪರ್ ನಾಗಾಲೋಟದಿಂದ ಬರುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಿರುವಿನಲ್ಲಿ ಅತೀ ವೇಗವಾಗಿ ಬಂದ ಟಿಪ್ಪರ್ ಬಸ್ಸಿನ ಒಂದು ಪಾರ್ಶ್ಚಕ್ಕೆ ಅಪ್ಪಳಿಸಿದೆ. ಇದನ್ನು ಗಮನಿಸಿದರೆ ಟಿಪ್ಪರ್‌ಗಳ ಎಲ್ಲೆ ಮೀರಿದ ವೇಗವನ್ನು ಗಮನಿಸಬಹುದು. ಕಠಿಣ ತಿರುವಿನ ಪ್ರಜ್ಞೆಯಿಲ್ಲದೆ ಚಾಲಕ ನಿರ್ಲಕ್ಷ್ಯ ಮೆರೆದಿದ್ದಾನೆ. ಮಾರ್ಗದ ಬಗ್ಗೆ ಸರಿಯಾದ ಮಾಹಿತಿ ಇರುವ, ಸತತ ಟ್ರಿಪ್ ಮಾಡುತ್ತಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷ್ಯಕ್ಕೆ ಅದೆಷ್ಟೋ ಮನೆಯಲ್ಲಿ ಕಣ್ಣೀರ ಕೋಡಿ ಹರಿಯುತ್ತಿದೆ. ದಿನದಿಂದ ದಿನಕ್ಕೆ ಟಿಪ್ಪರ್ ವಾಹನಗಳ ಅತೀ ವೇಗ, ನಿರ್ಲಕ್ಷಯ ಚಾಲನೆ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇದೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಓಡಿಸುತ್ತಾರೆ. ಗ್ರಾಮಾಂತರ ಮಾರ್ಗದಲ್ಲೂ ಕೂಡಾ ಕಾನೂನು ಪಾಲನೆ ಮಾಡದ ಟಿಪ್ಪರ್ ಚಾಲಕರು ಹಾಗೂ ಟಿಪ್ಪರ್ ವಾಹನಗಳ ಪರವಾನಿಗೆ ರದ್ದು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!