spot_img
Tuesday, March 10, 2026
spot_img

ಬಸ್ರೂರು: ಶ್ರೀ ಅಘೋರೇಶ್ವರ ಮೆಲೋಡೀಸ್ ಸಂಗೀತ ಶಾಲೆ ಉದ್ಘಾಟನೆ 

ಕುಂದಾಪುರ: ಶ್ರೀ ಅಘೋರೇಶ್ವರ ಮೆಲೋಡೀಸ್ ಸಂಗೀತ ಶಾಲೆ ಬಸ್ರೂರು ಮಾರ್ಗೋಳಿಯಲ್ಲಿ ನವೆಂಬರ್16ರಂದು ಉದ್ಘಾಟನೆಗೊಂಡಿತು. ಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿ ನೂತನ ಸಂಗೀತ ಶಾಲೆಯನ್ನು ಉದ್ಘಾಟಿಸಿ, ಬಸ್ರೂರು ಭಾಗದಲ್ಲಿ ಸಂಗೀತಾಸಕ್ತ ಪ್ರತಿಭೆಗಳಿಗೆ ಸಂಗೀತ ಕಲಿಯಲು ಗಾಯಕ ರವಿ ಬನ್ನಾಡಿಯವರು ಸಂಗೀತ ಪಾಠಶಾಲೆಯನ್ನು ಆರಂಭಿಸಿರುವುದು ಸ್ವಾಗತಾರ್ಹವೆಂದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿದ ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್ ನಾಯಕ್ ಕುಂದಾಪುರ, ಮಾತನಾಡಿ ಈಗಾಗಲೇ ಕೋಟದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿ ಆ ಕ್ಷೇತ್ರದಲ್ಲಿ ಮುನ್ನಡೆಯಲು ಕಾರಣರಾದ ರವಿ ಬನ್ನಾಡಿಯವರು ಬಸ್ರೂರಿನಲ್ಲಿಯೂ ಶಾಖೆ ಆರಂಭಿಸಿ, ಇಲ್ಲಿಯೂ ಸಂಗೀತ ಕಲಿಯುವ ಆಸಕ್ತರಿಗೆ ಅವಕಾಶ ಒದಗಿಸಿದ್ದಾರೆ. ಈ ಸಂಸ್ಥೆಯೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬಸ್ರೂರು ಪಂಚಾಯತ್ ಅಧ್ಯಕ್ಷ ದಿನಕರ ಶೆಟ್ಟಿ ಬೇಳೂರು, ಹೊಟೇಲ್ ಉದ್ಯಮಿ ಕಾಮರಾಜ್ ಶೆಟ್ಟಿ ಹಳನಾಡು, ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಬಸ್ರೂರು ಅಧ್ಯಕ್ಷ ಶಂಕರ ಪೂಜಾರಿ ಕೆರೆಕಟ್ಟೆ, ಉದ್ಯಮಿ ಎಂ.ಸಿ ಚಂದ್ರಶೇಖರ್ ಸಾಸ್ತಾನ, ನಟ, ನಿರ್ದೇಶಕ ಚಂದ್ರಶೇಖರ ಬಸ್ರೂರು, ಹಾಗೂ ಕೋಟ ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಅಘೋರೇಶ್ವರ ಸಂಗೀತ ಪಾಠಶಾಲೆಯ ಸಂಸ್ಥಾಪಕ ರವಿ ಬನ್ನಾಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಾಗೇಂದ್ರ ಆಚಾರ್ಯ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!