spot_img
Tuesday, March 17, 2026
spot_img

ಎಳೆವೆಯಲ್ಲಿ ಕಟ್ಟಿದ ಗೆಜ್ಜೆ, ಹಾಕಿದ ಹೆಜ್ಜೆಯು ಬದುಕಿನ ಗತಿ ಮತ್ತು ಲಯದ ಸ್ಥಿರತೆಗೆ ಬುನಾದಿಯಾಗಲಿ: ಡಾ. ಕೆ. ಎಸ್. ಕಾರಂತ್

ಸಾಲಿಗ್ರಾಮ: ಚಿಣ್ಣರ ವೇಷಭೂಷಣ, ಕುಣಿತ, ಸಂಭಾಷಣೆ, ಹಾವ ಭಾವಗಳು ಪ್ರೇಕ್ಷಕರ ಮನಸೂರೆಗೊಂಡದ್ದನ್ನು ಗಮನಿಸಿದ್ದೇನೆ. ಬದುಕೆಂಬ ರಂಗಸ್ಥಳದಲ್ಲಿ ಭವಿಷ್ಯದ ಬೇರೆ ಬೇರೆ ಕಾರ್ಯಭಾರವನ್ನು ವಹಿಸಿಕೊಳ್ಳಲಿರುವ ಇವತ್ತಿನ ಪುಟಾಣಿ ವೇಷಧಾರಿಗಳು ಇಂದು ಕಟ್ಟಿಕೊಂಡಿರುವ ಗೆಜ್ಜೆ, ಹಾಕಿದ ಹೆಜ್ಜೆಗಳು ಲಯಬದ್ಧ ಭವಿಷ್ಯಕ್ಕೆ ಭದ್ರ ಬುನಾದಿಯಾಗುವಂತೆ ಶ್ರೀ ಮದ್ಯೋಗಾನಂದ ಗುರು ನರಸಿಂಹನು ಅನುಗ್ರಹಿಸಲಿ ಎಂದು ಗುರು ನರಸಿಂಹ ದೇವಳದ ಅಧ್ಯಕ್ಷ, ಮನೋವೈದ್ಯಕೀಯ ತಜ್ಞ ಡಾ. ಕೆ. ಎಸ್. ಕಾರಂತರು ಚಿಣ್ಣರನ್ನುದ್ದೇಶಿಸಿ ಶುಭ ಹಾರೈಸಿದರು.

ಸಾಲಿಗ್ರಾಮ ಗುರುನರಸಿಂಹ ಬಯಲು ರಂಗ ಮಂಟಪದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಂಡದವರಿಂದ ದ್ರೌಪದಿ ಪ್ರತಾಪ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವು ವಾರ್ಷಿಕ ದೀಪೋತ್ಸವದ ಸಂದರ್ಭ ನವೆಂಬರ್ 19ರಂದು ದೇವಳದ ಅಧ್ಯಕ್ಷ ಡಾ. ಕೆ. ಎಸ್. ಕಾರಂತ್ ಶುಭ ಹಾರೈಸಿ ಮಾತನ್ನಾಡಿದರು.

ತಂಡದ ಕಾರ್ಯದರ್ಶಿ ವೆಂಕಟೇಶ ವೈದ್ಯ ಇವರನ್ನು ಗೌರವಿಸಲಾಯಿತು. ವೇಷಧಾರಿಯಾದ ಪೂಜಾ ಆಚಾರ್ ತೆಕ್ಕಟ್ಟೆ, ಪರಿಣಿತ ವೈದ್ಯ, ರಚಿತ್ ಶೆಟ್ಟಿ, ಮನೋiಯ್ ಕಾರಂತ್, ಸನ್ನಿಧಿ ಹೊಳ್ಳ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!