spot_img
Thursday, January 29, 2026
spot_img

ನ.22ರಂದು ಹೆಮ್ಮಾಡಿ ಜನತಾ ಪಿಯ ಕಾಲೇಜಿನಲ್ಲಿ ಜನತಾ ಆವಿಷ್ಕಾರ-ವ್ಯವಹಾರ ದಿನ: ಉದ್ಘಾಟನೆಗೆ ಡಾ.ಜಿ.ಶಂಕರ್

ಜನಪ್ರತಿನಿಧಿ ವಾರ್ತೆ] ಹೆಮ್ಮಾಡಿ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜನತಾ ಪಿಯು ಕಾಲೇಜ್ ಹೆಮ್ಮಾಡಿಯಲ್ಲಿ ನವೆಂಬರ್ 22-2025 ಶನಿವಾರ ಕಾಲೇಜಿನಲ್ಲಿ ವ್ಯವಹಾರ ಮೇಳ ಜನತಾ ಆವಿಷ್ಕಾರ್ 2025 ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮ ನಡೆಯಲಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣದ ನಡುವೆಯೇ ಸ್ವ ಉದ್ಯೋಗ, ವ್ಯವಹಾರ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆ ಮಾತ್ರವಲ್ಲದೆ ವ್ಯಾವಹಾರಿಕ ಕೌಶಲ್ಯ, ವ್ಯವಹಾರ ಜ್ಞಾನ ಬೆಳೆಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸನ್ನದ್ದರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಇವೊಂದು ಅವಕಾಶ ಕಲ್ಪಿಸಿದ್ದೇವೆ.ಈ ವ್ಯವಹಾರ ಮೇಳದಲ್ಲಿ ಸುಮಾರು 100 ಹೆಚ್ಚು ಮಳಿಗೆಗಳನ್ನು ವಿದ್ಯಾರ್ಥಿಗಳೆ ನಡೆಸಲಿದ್ದಾರೆ. ಎಂದು ಜನತಾ ಪಿಯು ಕಾಲೇಜ್ ಹೆಮ್ಮಾಡಿ ಇಲ್ಲಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ತಿಳಿಸಿದ್ದಾರೆ.

ಇದರ ಜೊತೆಗೆ ಸ್ಥಳೀಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ವೈಯಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ಈ ವ್ಯವಹಾರ ಮೇಳದಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸಭಾ ಕಾರ್ಯಕ್ರಮ:
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಶ್ರೀ ವಿ.ವಿ.ವಿ ಮಂಡಳಿ ರಿ., ಹೆಮ್ಮಾಡಿ ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ವಿದ್ಯಾರ್ಥಿ ವ್ಯವಹಾರ ಮಳಿಗೆಯನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಯಡಮೊಗೆ ಆದಿಪರಾಶಕ್ತಿ ಗುರುಪೀಠದ ರಾಜಾರಾಮ್ ಗುರೂಜಿ, ಶಾಂತಾಲ ಪೌಲ್ಟ್ರಿ ಫಾರ್ಮ್ ಫೀಡ್ಸ್ ಕರ್ಕಿ ಇದರ ವ್ಯವಸ್ಥಾಪಕ ಕಿರಣ್ ದೇವಾಡಿಗ, ಬೆಂಗಳೂರು ಉದ್ಯಮಿ ಚಂದ್ರ ಕುಂದರ್, ಸಮುದ್ಯತಾ ಗ್ರೂಫ್ ಕುಂದಾಪುರ ಇದರ ವ್ಯವಸ್ಥಾಪಕ ಯೋಗೇಂದ್ರ ತಿಂಗಳಾಯ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಭಾಗವಹಿಸಲಿದ್ದಾರೆ.

ಜಿಲ್ಲೆಯ ಬಹುದೊಡ್ಡ ಶೈಕ್ಷಣಿಕ ಕಾರ್ಯಕ್ರಮ
ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮ ಉಡುಪಿ ಜಿಲ್ಲೆಯ ಬಹುದೊಡ್ಡ ಶೈಕ್ಷಣಿಕ ಕಾರ್ಯಕ್ರಮ ಇದಾಗಿದ್ದು ಬೃಹತ್ ವೇದಿಕೆಯಲ್ಲಿ 10 ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ.
ಜನತಾ-ವ್ಯವಹಾರ ಮೇಳ, ಜನತಾ-ಕಲಾರಂಗ ಸಾಮೂಹಿಕ ನೃತ್ಯ ಸ್ಪರ್ಧೆ, ಜನತಾ-ಚಿತ್ರಕಲಾ ಸ್ಪರ್ಧೆ, ಜನತಾ-ಜ್ಞಾನ ಸಿಂಚನ (ಲಿಖಿತ ರಸಪ್ರಶ್ನೆ ಸ್ಪರ್ಧೆ), ಜನತಾ-ವಿಜ್ಞಾನ ಮೇಳ, ಜನತಾ ಸ್ಪೂರಣ-ಕನ್ನಡ ಭಾಷಣ ಸ್ಪರ್ಧೆ, ಜನತಾ-ಸಂವಾದ, ಜನತಾ-ಚಿತ್ರಸಿರಿ, ಜನತಾ -ಕಲಾಂಜಲಿ ನಡೆಯಲಿದೆ.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!