spot_img
Wednesday, March 11, 2026
spot_img

ಅ.18: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಪುರಂದರದಾಸರ ಅನಸೂಯಾ ಚರಿತ್ರೆ ಯಕ್ಷಗಾನ ಕೃತಿ ಲೋಕಾರ್ಪಣೆ -ಗಾನ ಪ್ರಸ್ತುತಿ- ಕಲಾ ಗೌರವ -ಯಕ್ಷಗಾನ ಬಯಲಾಟ 

ಕಾಸರಗೋಡು: ಅಕ್ಟೋಬರ್ 18 ಶನಿವಾರದಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಶ್ರೀ ಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗ ವಿಶೇಷ ಕೃತಿ, ಸಿರಿಬಾಗಿಲು ಪ್ರತಿಷ್ಠಾನದ ಪ್ರಕಾಶನದಲ್ಲಿ ಪ್ರಕಟಗೊಳ್ಳುವ  “ಅನಸೂಯಾ ಚರಿತ್ರೆ” ಯಕ್ಷಗಾನ ಪ್ರಸಂಗವನ್ನು ಲೋಕಾರ್ಪಣೆಗೊಳಿಸಲಾಗುವುದು.
ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ರವರ ಸಂಪಾದಕತ್ವದ ಈ ಅಪೂರ್ವ ಕೃತಿಯನ್ನು ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಸಂಪುಟ ನರಸಿಂಹ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮಠ ಇವರ ದಿವ್ಯ ಹಸ್ತದಲ್ಲಿ ಲೋಕಾರ್ಪಣೆಯಾಗಲಿದೆ ಸಂಪಾದಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಇವರು ಕೃತಿ ಪರಿಚಯವನ್ನು ಮಾಡಲಿದ್ದಾರೆ. ಡಾ. ಪಿ ದಯಾನಂದ ಪೈ ಮತ್ತು ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿರುವಂತಹ ಡಾ. ಧನಂಜಯ ಕುಂಬಳೆ, ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನದ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆ ಮಾಡಲಿದ್ದಾರೆ.  ಕೃಷ್ಣಶರ್ಮ ವಿಶ್ರಾಂತ ಮುಖ್ಯೋಪಾಧ್ಯಾಯರು ಕುಕ್ಕೆ ಸುಬ್ರಹ್ಮಣ್ಯ ಇವರು ಉಪಸ್ಥಿತರಿರುತ್ತಾರೆ. ಲೋಕಾರ್ಪಣೆ ಕಾರ್ಯಕ್ರಮದ ನಂತರ ಹಿರಿಯ -ಕಿರಿಯ ಕಲಾವಿದರಿಂದ ಈ ಪ್ರಸಂಗದ ಯಕ್ಷ-ಗಾನ ಪ್ರಸ್ತುತಿ ನಡೆಯಲಿದೆ.
ಶೌಚಾಲಯ- ಸೋಲಾರ್ ವ್ಯವಸ್ಥೆ ಉದ್ಘಾಟನೆ:
ಮಧ್ಯಾಹ್ನ 2:30ಕ್ಕೆ  ಎಮ್. ಕೃಷ್ಣ ಹೆಗಡೆ ಮಿಯಾರು, ಜಿ.ಜಿ.ಎಂ., ಎಚ್.ಆರ್.ವಿಭಾಗ, ಎಂ. ಆರ್. ಪಿ. ಎಲ್. ಮಂಗಳೂರು ಇವರಿಂದ ಎಂ. ಆರ್. ಪಿ. ಎಲ್. ನ  ಸಿ.ಎಸ್.ಆರ್. ಫಂಡ್ ಅನುದಾನದಿಂದ ಸಾಂಸ್ಕೃತಿಕ ಭವನಕ್ಕೆ ನೀಡಿದ ನೂತನ ಶೌಚಾಲಯ ಮತ್ತು ಸಾಂಸ್ಕೃತಿಕ ಭವನದ ಸೋಲಾರ್ ವ್ಯವಸ್ಥೆಯ ಅಳವಡಿಕೆಯ ಉದ್ಘಾಟನೆಯನ್ನು ನಡೆಸಲಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ವಹಿಸಲಿದ್ದಾರೆ. ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಹಣಾ ಅಧಿಕಾರಿ ಮೋಹನ ಭಾಸ್ಕರ್ ಹೆಗಡೆ ಹಾಗೂ ಮಹಾಪ್ರಬಂದಕರಾದ  ಗುರುಪ್ರಸಾದ ಶೆಟ್ಟಿ, ದಿವ್ಯ ರೂಪ ಕನ್ಸ್ಟ್ರಕ್ಷನ್ ಪೆರ್ಮುದೆ ಬಜಪೆ,ಕಲಾ ಪೋಷಕರಾದ  ಯಾದವ ಕೋಟ್ಯಾನ್,  ಸಿರಿಬಾಗಿಲಿನ ಸಾಮಾಜಿಕ ಕಾರ್ಯಕರ್ತರಾದ  ರವೀಂದ್ರ  ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಗಾನ ಬಯಲಾಟ- ಕಲಾ ಗೌರವ:
ಸಂಜೆ 4 ಗಂಟೆಗೆ ಪ್ರಶಾಂತ್ ಕುಂಜಾಲು ,ಮೈಸೂರು ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ “ಯಕ್ಷಗಾನ ಪೂರ್ವ ರಂಗ- ಬಯಲಾಟ- ಸನ್ಮಾನ”” ನಡೆಯಲಿದೆ .ನಾಲ್ಕು ಗಂಟೆಗೆ ಸಿರಿಬಾಗಿಲು ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಪೂರ್ವರಂಗ, 5 ಗಂಟೆಗೆ   ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ,ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ,ಶ್ರೀಮದ್ ಎಡನೀರು ಮಠ ಇವರ ಆಶೀರ್ವಚನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ಕಾಸರಗೋಡಿನ ಹಿರಿಯರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಕಾಸರಗೋಡು ಚಿನ್ನ ,ಎನ್. ಎಂ. ಪಿ. ಎ. ಪಣಂಬೂರು ಇದರ ಸಹಾಯಕ ಮೆಟೀರಿಯಲ್ ಮ್ಯಾನೇಜರ್ ಆಗಿರುವ ವಿನಯರಾಜ ಶೆಟ್ಟಿ ಚಿಪ್ಪಾರುಗುತ್ತು, ಕುದ್ರಪ್ಪಾಡಿ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ಸೇವಾ ಸಮಿತಿಯ ಅಧ್ಯಕ್ಷರಾದ  ಕೆ. ರಾಮಚಂದ್ರ ಪೆಜತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧರ್ಮಸ್ಥಳ ಮೇಳದಲ್ಲಿ ಸತತ 50 ವರ್ಷಗಳ ನಿರಂತರ ಯಕ್ಷಗಾನ ಸೇವೆ ಮಾಡುತ್ತಿರುವ ಹಿರಿಯ ಕಲಾವಿದರಾದ ವಸಂತಗೌಡ ಕಾಯರ್ತಡ್ಕ ಇವರಿಗೆ ಸನ್ಮಾನ ಹಾಗೂ  ಮಾಧವ ಪಾಟಾಳಿ ನೀರ್ಚಾಲು ಇವರಿಗೆ ಕಲಾ ಗೌರವ ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರ ಕೂಡುವಿಕೆಯಿಂದ ಸಂಜೆ 6:00  ಗಂಟೆಯಿಂದ ಕವಿ ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ “ಶನೀಶ್ವರ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ. ಇಡೀ ದಿನ ನಡೆಯುವ ಈ ಕಾರ್ಯಕ್ರಮಕ್ಕೆ ಕಲಾ ಬಂಧುಗಳು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆ ಮೂಲಕ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!