spot_img
Wednesday, March 11, 2026
spot_img

ಹೇರಂಬಾಪುರ ಶ್ರೀ ವಿನಾಯಕ ದೇವಸ್ಥಾನ ಕಾಡಿನಕೊಂಡ: ಜೀರ್ಣೋದ್ಧಾರ ಸಮಿತಿ ಉದ್ಘಾಟನೆ

ಕುಂದಾಪುರ: ಹೇರಂಬಾಪುರ ಶ್ರೀ ವಿನಾಯಕ ದೇವಸ್ಥಾನ ಕಾಡಿನಕೊಂಡ ಇದರ ಜೀರ್ಣೋದ್ಧಾರ ಸಮಿತಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮ ಕಿಶನ್ ಹೆಗ್ಡೆ ಜೀರ್ಣೋದ್ದಾರ ಸಮಿತಿ ಉದ್ಘಾಟಿಸಿದರು.
ಉಳ್ಳೂರು ಕಾರ್ತಿಕೇಯ ಸುಬ್ರಮಣ್ಯ ದೇವಸ್ಥಾನದ ಆಡಳಿತ ಆಡಳಿತ ಧರ್ಮದರ್ಶಿಸುಬ್ರಾಯ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಡಾ.ಆದರ್ಶ ಹೆಬ್ಬಾರ್, ಕಾರ್ಯಾಧ್ಯಕ್ಷರಾದ ರಾಘವೇಂದ್ರ ಚರಣ ನಾವಡ, ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಊರಿನವರ ಸಂಪೂರ್ಣ ಸಹಕಾರ ಕೋರಿದರು. ಸಮಿತಿಯ ಗೌರವ ಸಲಹೆಗಾರರಾದ ಕನರಾಡಿ ವಾದಿರಾಜ ಭಟ್ಟರು ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸರ್ವರು ಸಹಕರಿಸುವಂತೆ ಕೋರಿದರು. ಸಮಿತಿಯ ಗೌರವ ಮಾರ್ಗದರ್ಶಕರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಅನುಪಮಾ ಎಸ್ ಶೆಟ್ಟಿ, ದಿನಕರ ಶೆಟ್ಟಿ ಸಟ್ವಾಡಿ, ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಮಿತ್ಯಂತ, ರಾಘವೇಂದ್ರ ಶೇರೆಗಾರ ಅಂಬಾಜಿ, ಧಾರ್ಮಿಕ ವಿಧಿ ವಿಧಾನ ಮಾರ್ಗದರ್ಶಕರಾದ ವಿದ್ವಾನ್ ಮಾಧವ ಅಡಿಗ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷರಾದ ಸುಬ್ರಾಯ ಅಡಿಗ ಕಾಡಿನಕೊಂಡ ಜೀರ್ಣೋದ್ಧಾರ ಕಾರ್ಯದಲ್ಲಿ ಸರ್ವರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಂಡರು. ಊರವರ ಪರವಾಗಿ ಬಿ.ಜಗದೀಶ್ ಯಡಿಯಾಳ್, ಮುಕುಂದ ಎಂ, ಅನಿಸಿಕೆ ಹಂಚಿಕೊಂಡರು. ಸಭೆಯಲ್ಲಿ ಊರ-ಪರ‌ಊರ ಸದ್ಭಕ್ತರು ಹಾಜರಿದ್ದರು. ಕಾಡಿನಕೊಂಡ ಸುಬ್ರಾಯ ಪುರಾಣಿಕ ಸ್ವಾಗತಿಸಿ, ಮಹಾಬಲೇಶ್ವರ ಕಾರ್ಯಕ್ರಮ ನಿರ್ವಹಿಸಿ, ನಟರಾಜ್ ಪುರಾಣಿಕ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!