spot_img
Wednesday, March 11, 2026
spot_img

ಅ.12: ಉಡುಪಿಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನೆ, ಪ್ರಶಸ್ತಿ ಪ್ರದಾನ

ಕುಂದಾಪುರ: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ರಿ., ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಶ್ರೀ ಕೃಷ್ಣ ಮಠ ಉಡುಪಿ, ಗೀತಾ ಹೆಚ್.ಎಸ್.ಎನ್ ಫೌಂಡೇಶನ್ ರಿ., ಕೋಟೇಶ್ವರ ಸಹಯೋಗದಲ್ಲಿ, ಮಗು ಮತ್ತು ಕಾನೂನು ಕೇಂದ್ರ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿ ಬೆಂಗಳೂರು ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ 2025-26ನೇ ಸಾಲಿನ ಗುರುವಂದನಾ ಕಾರ್ಯಕ್ರಮ, ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ ಮತ್ತು ಶಾಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಮಕ್ಕಳ ಹಕ್ಕುಗಳ ಕಾರ್ಯಾಗಾರ ಅ.12 ರವಿವಾರ ಬೆಳಿಗ್ಗೆ ೯.೩೦ಕ್ಕೆ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.

ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ರಿ., ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಅಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್.ಗಂಗಣ್ಣವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ ಡಯಟ್ ಪ್ರಾಂಶುಪಾಲರಾದ ಡಾ.ಅಶೋಕ್ ಕಾಮತ್ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಡಯೇಟ್ ಪ್ರಾಧ್ಯಾಪಕರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು:
ಬೈಂದೂರು ವಲಯದ ಪಿ.ಎಂ.ಶ್ರೀ ಸರಕಾರಿ ಹಿ.ಪ್ರಾ.ಶಾಲೆ ಚಿತ್ತೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಉಡುಪಿ ವಲಯದ ಸ.ಪ್ರೌ.ಶಾಲೆಯ ಸಹಶಿಕ್ಷಕ ಮೋಹನ ಕಡಬ, ಬ್ರಹ್ಮಾವರ ವಲಯದ ಸ.ಹಿ.ಪ್ರಾ.ಶಾಲೆ ಅಲಡ್ಕ ಇಲ್ಲಿನ ಪ್ರಭಾರ ಮುಖ್ಯೋಪಾಧ್ಯಾಯರಾದ ರವಿ.ಎನ್.ಪೂಜಾರಿ, ಕುಂದಾಪುರ ವಲಯದ ಸ.ಹಿ.ಪ್ರಾ.ಶಾಲೆ ಕೋಣಿ ಇಲ್ಲಿನ ಸಹಶಿಕ್ಷಕರಾದ ತಾರಾದೇವಿ, ಸ.ಹಿ.ಪ್ರಾ.ಶಾಲೆ ಕಾಳಾವರ ಇಲ್ಲಿನ ಮುಖ್ಯೋಪಾಧ್ಯಾಯರಾದ ವೆಂಕಟ, ಸ.ಪ್ರೌಢಶಾಲೆ ಹಾಲಾಡಿ ಇಲ್ಲಿನ ಹಿರಿಯ ಶಿಕ್ಷಕರಾದ ರೋಶನ್ ಬೀಬಿ, ಬ್ರಹ್ಮಾವರ ವಲಯದ ಸ.ಪ್ರೌ.ಶಾಲೆ ಕಾವಡಿ ಇಲ್ಲಿನ ಮುಖ್ಯೋಪಾಧ್ಯಾಯರಾದ ಜಯಶ್ರೀ, ಕಾಪು ವಲಯದ ಸ.ಹಿ.ಪ್ರಾ.ಶಾಲೆ ಕೈಪುಂಜಾಲು ಇಲ್ಲಿನ ಮುಖ್ಯೋಪಾಧ್ಯಾಯರಾದ ಆಶಾಲತಾ, ಬೈಂದೂರು ವಲಯದ ಸ.ಪ್ರೌ.ಶಾಲೆ ಗುಜ್ಜಾಡಿ ಇಲ್ಲಿನ ಸಹಶಿಕ್ಷಕರಾದ ವಸಂತಿ ದಾಸ್, ಕಾರ್ಕಳ ವಲಯದ ಸ.ಹಿ.ಪ್ರಾ.ಶಾಲೆ ಮುಡಾರು ಇಲ್ಲಿನ ಮುಖ್ಯೋಪಾಧ್ಯಾಯರಾದ ಜಯ ಮೊಯಿಲಿ, ಸ.ಹಿ.ಪ್ರಾ.ಶಾಲೆ ಕೆರ್ವಾಸೆ ಮೈನ್ ಇಲ್ಲಿನ ಮುಖ್ಯೋಪಾಧ್ಯಾಯರಾದ ಕೃಷ್ಣ ನಾಯ್ಕ, ಸೈಂಟ್ ಲಾರೆನ್ಸ್ ಪ್ರೌಢಶಾಲೆ ಅತ್ತೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಉಪಾಧ್ಯ ಬಿ ಇವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹೆಸ್ಕುತ್ತೂರು ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣ ಕೆದಿಲಾಯ ಅವರಿಗೆ ಅತ್ಯುತ್ತಮ ಎಸ್.ಡಿ.ಎಂ.ಸಿ ಅದ್ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾಂತಾರ ಅಧ್ಯಾಯ೧ರಲ್ಲಿ ನಟಿಸಿರುವ ಬಾಲಕಲಾವಿದೆ ಸ.ಹಿ.ಪ್ರಾ.ಶಾಲೆ ಗುಜ್ಜಾಡಿ ಇಲ್ಲಿನ ವಿದ್ಯಾರ್ಥಿನಿ ಸಮೀಕ್ಷಾ ಸುರೇಶ ಹಕ್ಲಾಡಿ ಅವರನ್ನು ಸನ್ಮಾನಿಸಲಾಗುವುದು.

ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ ಮತ್ತು ಸರಕಾರಿ ಶಾಲೆ ಪ್ರಶಸ್ತಿ:
ಉಡುಪಿ ವಲಯದ ಸ.ಹಿ.ಪ್ರಾ.ಶಾಲೆ ಕಾಜಾರಗುತ್ತು, ಕುಂದಾಪುರ ವಲಯದ ಸ.ಹಿ.ಪ್ರಾ.ಶಾಲೆ ಅಮಾಸೆಬೈಲು, ಬ್ರಹ್ಮಾವರ ವಲಯದ ಸ.ಹಿ.ಪ್ರಾ.ಶಾಲೆ ಮಣೂರು-ಪಡುಕೆರೆ, ಕಾಪು ವಲಯದ ಸ.ಹಿ.ಪ್ರಾ.ಶಾಲೆ ಅಚ್ಚಡ, ಬೈಂದೂರು ವಲಯದ ಸ.ಹಿ.ಪ್ರಾ.ಶಾಲೆ ಮಾವಿನಕಟ್ಟೆ, ಕಾರ್ಕಳ ವಲಯದ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಈ ಶಾಲೆಗಳಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ ಮತ್ತು ಸರಕಾರಿ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!