spot_img
Thursday, March 12, 2026
spot_img

ರೈತರಿಗೆ ತೋಟಗಾರಿಕೆಯ ಮಿಶ್ರ ಬೆಳೆಗಳತ್ತ ಹೆಚ್ಚಿನ ಅಸಕ್ತಿ-ಕಿರಣ್ ಕೊಡ್ಗಿ

ಬೆಳ್ವೆ: ರೈತರು ವಿವಿಧ ಕಾರಣಗಳಿಂದ ಕೃಷಿ ಬೆಳೆಗಳಿಂದ ಹಿಂದೆ ಸರಿದು ತೋಟಗಾರಿಕೆಯ ಮಿಶ್ರ ಬೆಳೆಗಳತ್ತ ಅಸಕ್ತಿ ಹೊಂದುತ್ತಿದ್ದಾರೆ. ರೈತರಿಗೆ ತೆಂಗು ಬೆಳೆಯೂ ಸಹ ಕುಂಠಿತಗೊಳ್ಳುತ್ತಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಅಡಕೆ ಬೆಳೆ ಲಾಭಧಾಯಕವಾದರೂ ಹವಮಾನ ವೈಪರೀತ್ಯ ಹಾಗೂ ಹಳದಿ ರೋಗ ಹಾಗೂ ಎಲೆಚುಕ್ಕೆ ರೋಗಳು ಭಾಧಿಸುತ್ತಿರುವ ಹಿನ್ನಲೆಯಲ್ಲಿ ರೈತರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ಅಡಕೆ ಮತ್ತು ತೆಂಗು ಬೆಳೆ ಕೀಟ ಮತ್ತು ರೋಗ ನಿರ್ವಹಣೆ ತರಬೇತಿ ಸಂವಾದ ಕಾರ್ಯಕ್ರಮ ಮತ್ತು ಮಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಅಧ್ಯಕ್ಷತೆ ವಹಿಸಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ಸುರ್‍ಗೋಳಿ, ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ,ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ಧೇಶ ಸಹಕಾರಿ ಸಂಘದ ಪ್ರಭಾರ ಅಧ್ಯಕ್ಷ ಕೃಷ್ಣ ನಾಯ್ಕ ಬೆಳ್ವೆ.ಬೆಳ್ವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಚಂದ್ರಶೇಖರ್ ಶೆಟ್ಟಿ ಸುರ್‍ಗೋಳಿ,ಬೆಳ್ವೆ ವಲಯ ಜನಜಾಗ್ರತಿ ವೇದಿಕೆ ಸದಸ್ಯ ಎಚ್ ವಸಂತಕುಮಾರ್ ಶೆಟ್ಟಿ ಬೆಳ್ವೆ ಹಾಗೂ ಇನ್ನೀತರರು ಭಾಗವಹಿಸಿದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಿ.ಧನಂಜಯ್,ಕೀಟಶಾಸ್ತ್ರ ತಜ್ಞ ಡಾ.ರೇವಣ್ಣ, ಡಾ.ಚೈತನ್ಯ ಎಚ್.ಎಸ್ ಮಾಹಿತಿ ನೀಡಿದರು. ಕೃಷಿಕರು ಹಾಗೂ ಕೃಷಿ ತಜ್ಞರೊಂದಿಗೆ ಸಂವಾದ ನಡೆಯಿತು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ,ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿ ಅಟಾರಿ-೧೧,ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಉಡುಪಿ,ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ,ಗ್ರಾಮ ಪಂಚಾಯಿತಿ ಬೆಳ್ವೆ,ಉಡುಪಿ ಕಲ್ಪರಸ ಕೊಕನೆಟ್ ಆಂಡ್ ಆಲ್ ಸ್ಪೇಸ್ ಪ್ರೊಡ್ಯೂಸರ್ಸ್ ಕಂಪೆನಿ ಕುಂದಾಪುರ,ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಬೆಳ್ವೆ,ಶ್ರೀ ದುರ್ಗಾ ವಿವಿಧೋದ್ದೇಶ ಸಹಕಾರಿ ಸಂಘ(ನಿ.) ಗೋಳಿಯಂಗಡಿ,ತೆಂಗು ಬೆಳೆಗಾರರ ಸಂಘ ಬೆಳ್ವೆ-ಮಡಾಮಕ್ಕಿ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ಪ್ರಶಾಂತ್ ಗುಮ್ಮೋಲ ಸ್ವಾಗತಿಸಿದರು. ಪಲ್ಲವಿ ಬೆಳ್ವೆ ರೈತಗೀತೆ ಹಾಡಿದರು.ಪ್ರವೀಣ್ ಲೋಬೊ ಗುಮ್ಮೋಲ ಕಾರ್ಯಕ್ರಮ ನಿರೂಪಿಸಿದರು.ಪ್ರಥ್ವೀಜ್‌ಕುಮಾರ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!