spot_img
Thursday, March 12, 2026
spot_img

ತ್ರಾಸಿ: ಎನ್.ಎಸ್ ಎಸ್ ಯೋಜನಾಧಿಕಾರಿ ಸುಗುಣ ಆರ್ ಕೆ ಅವರಿಗೆ ಸನ್ಮಾನ

ಗಂಗೊಳ್ಳಿ : ಒಬ್ಬರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಗೌರವಿಸಿದಾಗ ಅದು ಹೆಚ್ಚಿನ ಆತ್ಮ ಸಂತೋಷವನ್ನು ಇಬ್ಬರಿಗೂ ತಂದು ಕೊಡುತ್ತದೆ. ಇಂತಹ ಮೌಲ್ಯಗಳನ್ನು ನಾವು  ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು  ಎಂದು ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
 ಅವರು ತ್ರಾಸಿಯ ಮಿಲೆನಿಯಂ ಹಾಲ್ ನಲ್ಲಿ ನಡೆದ  ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಲ್ಲಿನ ಯೋಜನಾಧಿಕಾರಿಯದ ಸುಗುಣ ಆರ್ ಕೆ ಅವರಿಗೆ ಎನ್.ಎಸ್.ಎಸ್ ಶಿಬಿರದ ಪ್ರಾಕ್ತನ  ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ  ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು.
 ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಹಲವು ವರ್ಷಗಳ ಕಾಲ ವಾರ್ಷಿಕ ವಿಶೇಷ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅರ್ಥಶಾಸ್ತ್ರ ಉಪನ್ಯಾಸಕಿಯಾದ ಸುಗುಣ ಆರ್ ಕೆ ಅವರನ್ನು ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು    ಸುಜನ್ ಖಾರ್ವಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅಕ್ಷಯ ಖಾರ್ವಿ ಶುಭ ಹಾರೈಸಿದರು  ವಿಕಾಸ್, ದೇವಿ ಪ್ರಸಾದ್,ಸೃಜನ್, ಪ್ರೀತಂ, ಜಯಶ್ರೀ, ಪ್ರಜ್ಞಾ,  ಸುಕ್ಷಿತ,  ವಿಜೇತ,  ಶಿವಾನಿ, ವೆಲಿಟಾ,  ದೀಪ್ತಿ,  ಸನ್ನಿಧಿ ಮತ್ತು ಶ್ರೇಯ ಉಪಸ್ಥಿತರಿದ್ದರು.
 ಭಾರತಿ ನಿರೂಪಿಸಿದರು. ಪ್ರಜ್ವಲ್ ಧನ್ಯವಾದ ಸಮರ್ಪಿಸಿದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!