spot_img
Thursday, March 12, 2026
spot_img

ಚಂದ್ರಶೇಖರ ನಾವಡರ ಗ್ರಾಹಕಸ್ನೇಹಿ ನಡವಳಿಕೆ ಅನುಕರಣೀಯ-ರವೀಂದ್ರ ಕಿಣಿ

ಬೈಂದೂರು: ನಿವೃತ್ತ ಯೋಧರೂ, ಬರಹಗಾರರೂ ಆಗಿ ಬೈಂದೂರು ಪರಿಸರದಲ್ಲಿ ಖ್ಯಾತರಾಗಿರುವ ಬೈಂದೂರು ಚಂದ್ರಶೇಖರ ನಾವಡರ ಶಿಸ್ತು, ಸ್ನೇಹಪರ ವ್ಯಕ್ತಿತ್ವ, ವೃತ್ತಿಪರತೆ ಸಮಾಜಕ್ಕೆ ಹಾಗೂ ಯುವ ಉದ್ಯೋಗಿಗಳಿಗೆ ಆದರ್ಶವಾಗಬೇಕು. ಶಾಖೆಗೆ ಬರುವ ಗ್ರಾಹಕರನ್ನು ಪ್ರೀತಿಯಿಂದ ಆದರಿಸಿ ಮಾತನಾಡುವ ಅವರ ಗ್ರಾಹಕಸ್ನೇಹಿ ನಡವಳಿಕೆ ಅನುಕರಣೀಯ ಎಂದು ಉದ್ಯಮಿ ರವೀಂದ್ರ ಕಿಣಿ ಶ್ಲಾಘಿಸಿದರು.

ಯೂನಿಯನ್ ಬ್ಯಾಂಕ್ ಬೈಂದೂರು ಶಾಖೆಯಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಉದ್ಯೋಗಿ ಚಂದ್ರಶೇಖರ ನಾವಡರ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತಿ ಪುಂಡಲೀಕ ನಾಯಕರು ಮಾತನಾಡಿ ನಾವಡರು ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೈಂದೂರು ಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದರು.

ಗ್ರಾಹಕ ಸುರೇಶ ಗಾಣಿಗ ಅವರು ಮಾತನಾಡಿ ನಾವಡರು ವೃತ್ತಿಯ ಜತೆಯಲ್ಲಿ ಪ್ರವೃತ್ತಿಗೂ ಸಮಯ ಹೊಂದಿಸಿಕೊಂಡು ತೊಡಗಿಸಿಕೊಂಡಿರುವುದು ಖುಷಿ ಕೊಡುವ ವಿಚಾರ ಎಂದರು.

ಶಾಖೆಯ ಉಪ ಪ್ರಬಂಧಕ ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ನಾವಡರು ತಮ್ಮ ದಕ್ಷತೆ ಮತ್ತು ಬದ್ಧತೆಯಿಂದ ಎಲ್ಲರಿಗೂ ಪ್ರಿಯರಾಗಿದ್ದರು ಎಂದರು.

ಪ್ರಬಂಧಕ ಆತ್ರೇಯ ಪ್ರಭು ಚಂದ್ರಶೇಖರ ನಾವಡರಿಗೆ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!