spot_img
Thursday, March 12, 2026
spot_img

ಸಮಾಜದ ಚಿಂತನೆಗೆ ಧ್ವನಿಯಾಗುವ ಕಾಯಕ ಶ್ಲಾಘನೀಯ- ದಿನೇಶ್ ಹೆಗ್ಡೆ ಮೊಳಹಳ್ಳಿ

ಕುಂದಾಪುರ: ಒಂದು ಊರಿನಲ್ಲಿ ಯುವಕರ ತಂಡವೊಂದು ತಮ್ಮ ಸಮಾಜದ ಆಗು ಹೋಗುಗಳ ಬಗ್ಗೆ ಚಿಂತಿಸಿ ತಮ್ಮಿಂದ ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ ಸಂಕಲ್ಪದೊಂದಿಗೆ ಕಾರ್ಯವೆಸಗುವುದರ ಮೂಲಕ ಯುವಕ ಮಂಡಲದ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾಹೇಬರಕಟ್ಟೆ ಶ್ರೀ ವಿನಾಯಕ ಯುವಕ ಮಂಡಲದ ಸಮಾಜಮುಖಿ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಸಾಂಸ್ಕೃತಿಕ ಚಿಂತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಹೇಳಿದರು.

ಅವರು ಶ್ರೀ ವಿನಾಯಕ ಯುವಕ ಮಂಡಲ ಸಾಹೇಬರಕಟ್ಟೆ- ಯಡ್ತಾಡಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ೧೪ ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-೨೦೨೫(ಭಕ್ತಿ ಬಣ್ಣದ ಸಂಭ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

೨೦೨೫ನೇ ಸಾಲಿನ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರವನ್ನು ಮಹಾತ್ಮ ಗಾಂಧಿ ಫ್ರೌಡಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ ವೀರಣ್ಣ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪುರಸ್ಕೃತರು ಜನ್ಮ ಭೂಮಿಯಷ್ಟೇ ಕರ್ಮಭೂಮಿಯು ಶ್ರೇಷ್ಠವಾದುದು, ತಮ್ಮ ಸೇವ ಅವಧಿಯಲ್ಲಿ ಊರಿನ ಸಹಕಾರದ ಮೂಲಕ ಶಿಕ್ಷಕರಾಗಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಯಿತು. ನಿವೃತ್ತಿಯಾದ ನಂತರವೂ ನನ್ನನ್ನು ಗುರಿಸಿದ ಯುವಕ ಮಂಡಲಕ್ಕೆ ಚಿರ ಋಣಿ ಎಂದರು.

ಸಮಾರಂಭದಲ್ಲಿ ಗೀತಾ ಎ. ಶೆಟ್ಟಿ, ಶಿಕ್ಷಕರು (ಕ್ರೀಡಾ ಕ್ಷೇತ್ರದ ಸಾಧಕರು) ರಂಜಿತ್ ಶಿರಿಯಾರ, ಮಾಧ್ಯಮ ಕ್ಷೇತ್ರ, ವಿಶೇಷ ಪುರಸ್ಕಾರವನ್ನು ಶಾಖಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಮೆಸ್ಕಾಂ ಶಿರಿಯಾರ ವಲಯ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಅಕ್ಷಯ ಶೆಟ್ಟಿ ವಹಿಸಿದ್ದರು.

ಶಿರಿಯಾರದ ಉದ್ಯಮಿ ಗಣೇಶ ಪ್ರಸಾದ ಕಾಂಚನ್, ಜೈ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸಾಹೇಬರ ಕಟ್ಟೆ ಇದರ ಅಧ್ಯಕ್ಷರಾದ ಅಶೋಕ ಪ್ರಭು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ ಬಲ್ಲಾಳ್, ಶ್ರೀ ವಿಶ್ವೇಶ್ವರ ಕ್ಯಾನ್ಯೂ ಇಂಡಸ್ಟ್ರೀಸ್, ಕಾಜ್ರಳ್ಳಿ ಇದರ ಉದ್ಯಮಿ ಯು. ಪ್ರಸಾದ ಭಟ್, ಉದ್ಯಮಿ ಶರತ್ ಕುಮಾರ್ ಶೆಟ್ಟಿ, ಪ್ರಗತಿಪರ ಕೃಷಿಕರಾದ ಸತೀಶ ಕುಮಾರ್ ಶೆಟ್ಟಿ ಯಡ್ತಾಡಿ, ಉದ್ಯಮಿ ಸಂದೀಪ ಶೆಟ್ಟಿ, ಕೊಳ್ಳೆಬೈಲು ಶಿರಿಯಾರ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ವಕೀಲರಾದ ಗೋಪಾಲಕೃಷ್ಣ ಶೆಟ್ಟಿ, ಶಿರಿಯಾರ, ಯುವಕ ಮಂಡಲದ ಕಾರ್ಯದರ್ಶಿ ಕಾರ್ತಿಕ್ ಉಪಸ್ಥಿತರಿದ್ದರು.

ಯುವಕ ಮಂಡಲದ ಸದಸ್ಯ ಅಜಿತ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಘವೇಂದ್ರ ಹೆಸ್ಕುತ್ತೂರು ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!