spot_img
Tuesday, March 17, 2026
spot_img

ಓಕ್‌ವುಡ್ ಕಾನೂನು ಕಾಲೇಜು: ಓರಿಯಂಟೇಶನ್ ಕಾರ್ಯಕ್ರಮ |ರಾಜ್ಯದಲ್ಲೇ ಉತ್ತಮ ಕಾನೂನು ಕಾಲೇಜಾಗಲಿ-ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ, ಸೆ.೨೫: ಕುಂದಾಪುರದಲ್ಲಿ ಒಂದು ಕಾನೂನು ಕಾಲೇಜು ಆಗಬೇಕಾಗಿತ್ತು ಅಂದುಕೊಂಡಿದ್ದೆ. ಸರಕಾರ ಅಥವಾ ಖಾಸಗಿಯಾದರೂ ಒಳ್ಳೆಯದಿತ್ತು ಅಂದುಕೊಂಡಾಗಲೇ ಕುಂದಾಪುರದಲ್ಲಿ ಕಾನೂನು ಕಾಲೇಜು ಆರಂಭಗೊಂಡಿದೆ ಎಂಬ ವಿಷಯ ತಿಳಿದು ಸಂತೋಷವಾಯಿತು. ಗುಣಮಟ್ಟ ಇದ್ದಲ್ಲಿ ವಿದ್ಯಾರ್ಥಿಗಳು ಕಾಲೇಜನ್ನು ಹುಡುಕಿಕೊಂಡು ಬರುತ್ತಾರೆ. ಅಂತಹ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುವುದರಲ್ಲಿ ಸಂದೇಹವಿಲ್ಲ. ಇದು ರಾಜ್ಯದಲ್ಲೇ ಉತ್ತಮ ಕಾನೂನು ಕಾಲೇಜು ಆಗಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಗುರುವಾರ (ಸೆ.25)ದಂದು ಕುಂದಾಪುರ ಪೋರ್‍ಟ್ ಗೇಟ್ ಎಜ್ಯುಕೇಶನ್ ಟ್ರಸ್ಟ್ ಅಧೀನದ ಓಕ್‌ವುಡ್ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಯವಾದಿಗಳು ನ್ಯಾಯವಾದಿಗಳಾಗಿರಬೇಕು, ಆಗ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಈ ಕಾನೂನು ಕಾಲೇಜು ಯಶಸ್ವಿಯಾಗಿ ಮುನ್ನೆಡೆಯಲಿ. ಇದರ ಆಡಳಿತ ಮಂಡಳಿ ಕಾನೂನು ಕ್ಷೇತ್ರದಲ್ಲಿ ಅನುಭವ ಹೊಂದಿದೆ. ಜನ ಬೆಂಬಲ ಸಿಗಲಿ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಸಂಸ್ಥೆಯ ಆಡಳಿತ ಟ್ರಸ್ಟಿಗಳಾದ ಎ.ಅಭಿನಂದನ ಶೆಟ್ಟಿ, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಓಕ್ ವುಡ್ ಕಾನೂನು ವಿದ್ಯಾಲಯವನ್ನು ಆರಂಭಿಸಲಾಗಿದೆ. ಗುಣಮಟ್ಟದ ಶಿಕ್ಷಣದ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಬಿ.ಅರುಣ್ ಕುಮಾರ್ ಶೆಟ್ಟಿ, ಸಂಸ್ಥೆಯ ಟ್ರಸ್ಟಿ ಮತ್ತು ಕಾರ್ಯದರ್ಶಿ ನೀತಾ ಎ ಶೆಟ್ಟಿ, ಪ್ರಾಂಶುಪಾಲರಾದ ಶೃತಿ ಹೆಗ್ಡೆ, ಆಡಳಿತಾಧಿಕಾರಿ ಸಹನಾ ಶೆಟ್ಟಿ, ಉಪ ಪ್ರಾಂಶುಪಾಲರಾದ ದಿನಕರ ತೋನ್ಸೆ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!