spot_img
Thursday, March 12, 2026
spot_img

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ: ರೂ3.56 ಕೋಟಿ ಲಾಭ, ಶೇಕಡಾ 25 ಡಿವಿಡೆಂಡ್ ಘೋಷಣೆ

ಕುಂದಾಪುರ: ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ), ಇದರ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಬಿ. ಪ್ರದೀಪ ಯಡಿಯಾಳರ ಅಧ್ಯಕ್ಷತೆಯಲ್ಲಿ ಸೆ.17 ರಂದು ಸಂಘದ ಕೇಂದ್ರ ಕಛೇರಿಯಲ್ಲಿ ಜರುಗಿತು.

ಸಂಘವು 2024-25ನೇ ಸಾಲಿನಲ್ಲಿ ರೂ.1177 ಕೋಟಿ ವ್ಯವಹಾರ ನಡೆಸಿದ್ದು, ರೂ. 3.56 ಕೋಟಿ ಲಾಭ ಗಳಿಸಿದ್ದು, ವರ್ಷಾಂತ್ಯಕ್ಕೆ ರೂ.2.62 ಕೋಟಿ ಪಾಲು ಬಂಡವಾಳ, ರೂ.197.16 ಕೋಟಿ ಠೇವಣಾತಿ, ರೂ. 205.97 ಕೋಟಿ ಸದಸ್ಯರ ಸಾಲ ಹೊರಬಾಕಿ ಇದ್ದು, ದುಡಿಯುವ ಬಂಡವಾಳ 282.36 ಕೋಟಿ ಇರುತ್ತದೆ. ಶೇಕಡಾ 97.00 ರಷ್ಟು ಸಾಲ ಮರುಪಾವತಿಯಾಗಿರುತ್ತದೆ. 2023-24ನೇ ಸಾಲಿಗೆ ಸದಸ್ಯರ ಪಾಲು ಬಂಡವಾಳದ ಮೇಲೆ ಶೆ. 25 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘವು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸದಸ್ಯರಿಗೆ ಶೆ. 25 ಡಿವಿಡೆಂಡ್ ನೀಡುತ್ತಾ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಜನರಲ್ ಮ್ಯಾನೇಜರ್ ಬಿ. ಮಂಜುನಾಥ ನಾಯ್ಕ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ಜನರಲ್ ಮ್ಯಾನೇಜರ್ ಸೂಕ್ತ ಸಮಜಾಯಿಸಿಕೆ ಹಾಗೂ ಮಾಹಿತಿ ನೀಡಿದರು.

2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರಿಕ್ಷೆಯಲ್ಲಿ ಶೇ. 85 ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಸಂಘದ ಸದಸ್ಯರ 93 ಮಕ್ಕಳಿಗೆ ಪೆÇ್ರೀತ್ಸಾಹಧನ ನೀಡಿ ಗೌರವಿಸಲಾಯಿತು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 4ಜನ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.

ಸಂಘವು ಯಶಸ್ವಿ 75ವರ್ಷಗಳನ್ನು ಪೂರೈಸಿ ಅಮೃತಮಹೋತ್ಸವ ಆಚರಣೆಯ ಸಂಭ್ರಮದ ಈ ಸುಸಂದರ್ಭದಲ್ಲಿ ಸಂಘದ “ಎ” ತರಗತಿ ಸದಸ್ಯರಿಗೆ ಮಾತ್ರ ಕೇವಲ 75 ತಿಂಗಳ ಅವಧಿಯಲ್ಲಿ ದ್ವಿಗುಣಗೊಳ್ಳುವ “ಪ್ಲಾಟಿನಂ ಜ್ಯೂಬಿಲಿ ನಗದು ಪತ್ರ ಠೇವಣಿ ಯೋಜನೆ ಮತ್ತು 18ರಿಂದ 55 ವರ್ಷದವರೆಗಿನ ಸದಸ್ಯರಿಗೆ “ಅಮೃತ ನಿವೃತ್ತಿ ಆದಾಯ ಠೇವಣಿ ಯೋಜನೆ” ಎಂಬ ನೂತನ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.

ಸಂಘವು ಲಾಭ ಗಳಿಸಿ ಪ್ರಗತಿ ಸಾಧಿಸಿರುವುದಕ್ಕೆ ಕಾರಣೀಕರ್ತರಾದ ಸದಸ್ಯ ಬಾಂಧವರಿಗೆ, ಗ್ರಾಹಕರಿಗೆ, ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾ ಬ್ಯಾಂಕಿನ ಆಡಳಿತಾಧಿಕಾರಿಗಳಿಗೆ, ಸಹಕಾರ ಇಲಾಖೆಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷರಾದ ಸುದೀಪ ಶೆಟ್ಟಿ, ನಿರ್ದೇಶಕರಾದ ಎ. ಮಾಧವ ಶೆಣೈ, ಎಸ್. ಶಂಕರನಾರಾಯಣ ಯಡಿಯಾಳ, ಎಂ. ದೇವದಾಸ ಶೆಟ್ಟಿ, ಬಿ. ಮಂಜುನಾಥ ರಾವ್, ಎಂ.ಎಸ್ ವಿಷ್ಣುಮೂರ್ತಿ, ಶ್ರೀಮತಿ ರೋಹಿಣಿ, ಶ್ರೀಮತಿ ಅನಿತಾ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ ಬೆಳಾರಿ, ಗುರುರಾಜ ನಾಯ್ಕ, ಮಂಜುನಾಥ ಕುಲಾಲ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀಮತಿ ಗುಲಾಬಿ ಮತ್ತು ಶ್ರೀಮತಿ ಶ್ವೇತಾರವರು ಪ್ರಾರ್ಥಿಸಿದರು. ವರದಿ ವರ್ಷದಲ್ಲಿ ಮೃತರಾದ ಸದಸ್ಯರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಚೆನ್ನ ಪೂಜಾರಿ ಸ್ವಾಗತಿಸಿ, ಕೆ. ಸತೀಶ ಭಟ್ಟ, ಎಸ್ ಸತ್ಯನಾರಾಯಣ ಕನ್ನಂತ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಕೆ. ಗಿರೀಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಹಾಗೂ ರಕ್ತನಿಧಿ ಕೇಂದ್ರ, ಕುಂದಾಪುರ ಇವರ ಸಹಕಾರದೊಂದಿಗೆ ಸಂಘದ ಸದಸ್ಯರಿಗೆ ‘ರಕ್ತದಾನ ಪೆÇ್ರೀತ್ಸಾಹಕ ಯೋಜನೆ’ಯಡಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಸುಮಾರು 130ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡಿದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!