spot_img
Friday, March 13, 2026
spot_img

ಡ್ಯುಯಲ್ ಸ್ಟಾರ್ ಶಾಲೆಯ ಶಿಕ್ಷಕಿ ನಳಿನಿ ಎಂ ರಾವ್ ಅವರಿಗೆ ವಿದ್ಯಾ ಸ್ಪೂರ್ತಿ ಪ್ರಶಸ್ತಿ ಪ್ರದಾನ

ಅಮಾಸೆಬೈಲು: ನಾಳಿನ ಭಾರತವನ್ನು ನಿರ್ಮಾಣ ಮಾಡಲು ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಬೇಕು, ರಾಷ್ಟ್ರ ಕಲ್ಪನೆಯನ್ನು ಮೂಡಿಸಬೇಕು ಎಂದು ಡ್ಯುಯಲ್ ಸ್ಟಾರ್ ರೂರಲ್ ಎಜುಕೇಷನ್ ಟ್ರಸ್ಟ್ ನ ಸದಸ್ಯರಾದ ರಘುಪತಿ ಭಟ್ ಗೆಣಸಿನಕುಣಿ ರವರು ಅಭಿಪ್ರಾಯ ಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ವಿದ್ಯಾ ಸ್ಪೂರ್ತಿ ಪ್ರಶಸ್ತಿ ಯನ್ನು ಆಂಗ್ಲ ಭಾಷಾ ಶಿಕ್ಷಕಿ ನಳಿನಿ ಎಂ ರಾವ್ ರವರಿಗೆ ಪ್ರದಾನ ಮಾಡಿ, ಜಗತ್ತಿನ ಅತ್ಯಂತ ಶ್ರೇಷ್ಠ ಉದ್ಯೋಗವಾದ ಶಿಕ್ಷಕ ವೃತ್ತಿಯನ್ನು ಮನದಾಳದಿಂದ ಪ್ರೀತಿಸಬೇಕು. ಕೈಂಕರ್ಯ ಮಾಡಬೇಕು. ಆಗ ತನ್ನಿಂದ ತಾನಾಗಿಯೇ ಗೌರವ ಸಿಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ರಾಜಾರಾಮ ಗುರೂಜಿ ಯಡಮೊಗೆಯವರು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ನಂತರ ವೇದಾಂತ ಕುಂಜತ್ತಾಯ ಎನ್ನುವ ವಿದ್ಯಾರ್ಥಿಗೆ ಅಕ್ಷರಾಭ್ಯಾಸ ಮಾಡಿ ದಿನಾಚರಣೆಯನ್ನು ಉದ್ಘಾಟಿಸಿ ಶಿಕ್ಷಕರು ನಿಷ್ಕಲ್ಮಶ ಮನಸ್ಸಿನಿಂದ ತಮ್ಮ ಮಕ್ಕಳಂತೆ ತಿಳಿದು ಪರಿಪೂರ್ಣ ಶಿಕ್ಷಣದ ಕಲ್ಪನೆಯೊಂದಿಗೆ ಬೋಧನೆಯನ್ನು ಮಾಡುತ್ತಾರೆ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ ಪಡು ಹೆಮ್ಮಣ್ಣುರವರು ಎಲ್ಲಾ ಶಿಕ್ಷಕರನ್ನು ಅಭಿನಂದಿಸಿ ಶಿಕ್ಷಕರು ಸ್ವಾಸ್ಥ್ಯ ಸಮಾಜದ ನಿರ್ಮಾತೃ . ಅವರನ್ನು ಗೌರವ ಭಾವನೆಯಿಂದ ನಡೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ ರವರು ಮಾತನಾಡುತ್ತಾ , ಶಿಕ್ಷಕ ಮತ್ತು ಶಿಕ್ಷಣ ವಿದ್ಯಾರ್ಥಿಗಳ ಬೆನ್ನೆಲುಬು ಅದು ಸರಿಯಾಗಿ ಇದ್ದಲ್ಲಿ ರಾಷ್ಟ್ರ ನಿರ್ಮಾಣ ಉತ್ತಮವಾಗಿ ಆಗುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗರವರು ವಹಿಸಿದ್ದರು, ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮಾ ಹೆಮ್ಮಣ್ಣ, ಉಪಾಧ್ಯಕ್ಷರಾದ ಸುಪರ್ಣ, ಮಾಜಿ ಅಧ್ಯಕ್ಷರಾದ ಸುಯೋಗ್ ಹೆಗ್ಡೆ, ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್, ಹಾಗೂ ವಿದ್ಯಾರ್ಥಿ ನಾಯಕಿ ವೈಷ್ಣವಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಶ್ರೀಗಂಧ ಪ್ರಶಸ್ತಿಯನ್ನು ಪಡೆದ ಶಾಲಾ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್ ಆಚಾರ್ಯ ಮತ್ತು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್ ರವರನ್ನು ಶಿಕ್ಷಕ ರಕ್ಷಕ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಹಾಗೆಯೇ ಶಿಕ್ಷಕರಿಗಾಗಿ ವಿದ್ಯಾರ್ಥಿಗಳಿಂದ ಮನೋರಂಜನಾ ಕ್ರೀಡೆ ನಡೆಯಿತು. ಶಿಕ್ಷಕರೆಲ್ಲರೂ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಉತ್ಸಾಹದಿಂದ ಭಾಗವಹಿಸಿದರು.

ಶಾಲಾ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ವಡ್ಡರ್ಸೆ ಸ್ವಾಗತಿಸಿ, ವಿದ್ಯಾರ್ಥಿ ಗಗನ್ ಜಿ ಎಸ್ ಪ್ರಾರ್ಥಿಸಿದರು, ಪ್ರಶಸ್ತಿ ಪತ್ರವನ್ನು ರಾಧಿಕಾ ರಾವ್ ವಾಚಿಸಿದರು, ಶಿಕ್ಷಕರಾದ ಪೂರ್ಣಿಮಾ ಪೂಜಾರಿ, ಅರ್ಚನ ಯು ಜಿ ಮತ್ತು ಅಮೃತ ಕುಮಾರಿ ಶಾಲೆಯ ಬಗ್ಗೆ ತಮ್ಮ ಅನಿಸಿಕ್ನೆ ವ್ಯಕ್ತಪಡಿಸಿದರು, ಸಂಚಾಲಕ ಶಶಿಧರ ಎನ್ ದೇವಾಡಿಗ ವಂದಿಸಿದರು. ವಿಘ್ನೇಶ್ ಜಿ ಎಲ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!