spot_img
Friday, March 13, 2026
spot_img

ಅಸಮರ್ಪಕ ಜಿ.ಎಸ್.ಟಿ ಹೇರಿದ್ದಕ್ಕೆ ಕೇಂದ್ರ ಸರ್ಕಾರ ಜನತೆಯ ಕ್ಷಮೆ ಕೇಳಲಿ-ವಿಕಾಸ್ ಹೆಗ್ಡೆ

ಕುಂದಾಪುರ: ಜನರ ಮೇಲೆ ಜಿ.ಎಸ್.ಟಿ ಹೊರೆ ಹೋರಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಯಾದರೆ ಜನಸಾಮಾನ್ಯರಿಗೆ ಹೊರೆಯಾಗಿದ್ದ ಜಿ ಎಸ್ ಟಿ ವಿರುದ್ಧ ನಿರಂತರವಾಗಿ ಧ್ವನಿ ಏತ್ತಿ, ಹೋರಾಟ ಮಾಡಿ ಇವತ್ತು ಜಿ.ಎಸ್.ಟಿ ಹೊರೆ ಕಡಿಯಾಗಲು ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿ ಎಸ್ ಟಿ ಯನ್ನು ೨೦೧೬ ರಲ್ಲಿ ಜಾರಿಗೆ ತಂದಾಗ ಅಂದೇ ರಾಹುಲ್ ಗಾಂಧಿ ಇದನ್ನು ವಿರೋಧಿಸಿದ್ದರು ಹಾಗೂ ನಾಲ್ಕು ಶ್ರೇಣಿಯಲ್ಲಿರುವ ಜಿ.ಎಸ್.ಟಿಯನ್ನು ಎರಡು ಶ್ರೇಣಿಗೆ ಮಿತಿಗೊಳಿಸಲು ಆಗೃಹ ಮಾಡಿದ್ದರು ಹಾಗೂ ಜಿ.ಎಸ್.ಟಿ ಗರಿಷ್ಠ ಮಿತಿಯನ್ನು ೧೮% ಗೆ ನಿಗದಿಗೊಳಿಸುವಂತೆ ಸಲಹೆ ನೀಡಿದ್ದರು, ಆದರೆ ಕೇಂದ್ರ ಸರ್ಕಾರ ಇಷ್ಟು ವರ್ಷಗಳ ಕಾಲ ಸುಮಾರು ೨೮% ತನಕ ನಾಲ್ಕು ಶ್ರೇಣಿಯಲ್ಲಿ ಜಿ.ಎಸ್.ಟಿಯನ್ನು ಜನಸಾಮಾನ್ಯರ ಮೇಲೆ ಹೇರಿ, ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಅನಗತ್ಯ ಹೊರೆ ಹೋರಿಸಿ ಅದೆಷ್ಟೋ ಉದ್ಯಮ ಹಾಗೂ ಉದ್ಯೋಗಿಗಳನ್ನು ಬೀದಿಗೆ ತಂದು ಈಗ ಜಿ.ಎಸ್.ಟಿ ಶ್ರೇಣಿಯನ್ನು ಎರಡು ಹಂತಕ್ಕೆ ಮಿತಿಗೊಳಿಸಿ ೧೮% ಜಿ.ಎಸ್.ಟಿಗೆ ಸೀಮಿತಗೊಳಿಸಿರುವುದು ದೊಡ್ಡ ಸಾಧನೆ ಎನ್ನುವ ರೀತಿ ಪ್ರಚಾರ ಮಾಡುತ್ತಿರುವುದು ಅವರ ರಾಜಕೀಯ ದಿವಾಳಿತನದ ಪರಮಾವಧಿಯಾಗಿದೆ. ಇವತ್ತು ಕೇಂದ್ರ ಸರ್ಕಾರ ಅಸಮರ್ಪಕ ಜಿ.ಎಸ್.ಟಿಯ ಶ್ರೇಣಿ ಹಾಗೂ ಮಿತಿಯನ್ನು ಕಡಿಮೆ ಮಾಡಲು ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಿರಂತರ ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿ.ಎಸ್.ಟಿ ವಿರುದ್ಧದ ಹೋರಾಟ. ಜಿ.ಎಸ್.ಟಿ ಎನ್ನುವ ಭೂತವನ್ನು ಮುಂದಿಟ್ಟು ಜನರಿಂದ ಸುಲಿಗೆ ಮಾಡಿದ ಕೇಂದ್ರ ಸರ್ಕಾರ ಜಿ.ಎಸ್.ಟಿ ಇಳಿಕೆ ತನ್ನ ಸಾಧನೆ ಎನ್ನುವ ಬದಲು ಇಷ್ಟು ವರ್ಷಗಳ ಕಾಲ ಜನರಿಗೆ ಜಿ.ಎಸ್.ಟಿ ಹೆಸರಿನಲ್ಲಿ ಅನಗತ್ಯ ಕಿರುಕುಳ ಹಾಗೂ ಆರ್ಥಿಕ ಹೊರೆ ನೀಡಿದ್ದಕ್ಕೆ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!