spot_img
Saturday, February 14, 2026
spot_img

ಸಂತ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ವಿಶೇಷ ಶಾಲೆಗೆ ಅಗತ್ಯ ವಸ್ತುಗಳ ಕೊಡುಗೆ

ಕುಂದಾಪುರ: ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 43 ಮಕ್ಕಳಿಗೆ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ವಿಶೇಷ ಶಾಲೆಗೆ ಅಗತ್ಯ ವಸ್ತುಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿದರು.

ಸೊಸೈಟಿಯ ಕುಂದಾಪುರ-ಭಟ್ಕಳ ವಿಭಾಗದ ಅಭಿವೃದ್ದಿ ಅಧಿಕಾರಿ ರೋಹಿತ್ ಮೋಗೆರ್, ನಮ್ಮ ಸೊಸೈಟಿ ಕೇವಲ ಲಾಭವನ್ನು ನೋಡದೆ, ಸಾಮಜದ ಒಳಿತಿಗಾಗಿ ಇಂತಹ ಸಹಾಯವನ್ನು ವರ್ಷಪ್ರತಿ ಮಾಡಿಕೊಂಡು ಬರುತ್ತದೆ ಎಂದು ತಿಳಿಸುತ್ತಾ, 1493 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ, ಸರಿ ಸುಮಾರು 1400 ಕೋಟಿಗಳಷ್ಟು ಠೇವಣಿ ಸಂಗ್ರಹಣೆ ಹೊಂದಿದೆ ರೂ 1048 ಕೋಟಿ ಸಾಲ ನೀಡಿದೆ ಪ್ರಸ್ತುತ ವರ್ಷ 2025 ರಲ್ಲಿ 9 ಜಿಲ್ಲೆಯ 54 ಸಂಸ್ಥಗಳಿಂದ ಒಟ್ಟೂ 3797 ಫಲಾನುಭವಿಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಎಂದು ತಿಳಿಸಿದರು.

ಕುಂದಾಪುರ ಶಾಖೆಯ ಜೋನ್ಸನ್ ಮಿನೇಜಸ್ ಅತಿಥಿಗಳಿಗೆ ಗೌರವದ ಕಾಣಿಕೆ ನೀಡಿದರು. ಅತಿಥಿಗಳಾದ ಶಶಿಧರ್ ಎಚ್. ಭಟ್ಕಳ ವಿಭಾಗದ ತನೋಜ್ ನಾಯ್ಕ, ದೇವಂದ್ರ ನಾಯ್ಕ್, ಬೈಂದೂರು ಶಾಖೆಯ ವೀಣಾ ರೊಡ್ರಿಗಸ್, ಉಪಸ್ಥಿತರಿದ್ದರು. ಚೈತನ್ಯ ವಿಶೇಷ ಮಕ್ಕಳು ಸ್ವಾಗತ ಗೀತೆ ಹಾಡಿದರು ಮತ್ತು ದೇಶ ಭಕ್ತಿ ಗೀತೆಯ ನ್ರತ್ಯ ಪ್ರದರ್ಶನ ಮಾಡಿದರು.

ಶಾಲೆಯ ಪ್ರಾಂಶುಪಾಲರಾದ ಲೀಲಾವತಿ ಕರ್ಕಡ ವಂದಿಸಿದರು. ಮಿಲಾಗ್ರಿಸ್ ಸೊಸೈಟಿಯ ಸಿಬಂದಿಗಳಾದ ಪ್ರಿಯಾಂಕ ಡಿ. ಕೆ. ಸ್ವಾಗತಿಸಿದರು, ವೀಣಾ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!