spot_img
Saturday, February 14, 2026
spot_img

ಹೇರಂಬಾಪುರ ಶ್ರೀ ವಿನಾಯಕ ದೇವಸ್ಥಾನ ಕಾಡಿನಕೊಂಡ ಜೀರ್ಣೋದ್ಧಾರದ ಪೂರ್ವಭಾವಿ ಸಭೆ

ಕುಂದಾಪುರ: ಹೇರಂಬಾಪುರ ಶ್ರೀ ವಿನಾಯಕ ದೇವಸ್ಥಾನ ಕಾಡಿನಕೊಂಡ ಇದರ ಜೀರ್ಣೋದ್ಧಾರದ ಕುರಿತು ಭಕ್ತರ ಸಭೆಯು ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಅನಂತ ಪದ್ಮನಾಭ ಅಡಿಗ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಹೈದರಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಸಭೆಗೆ ಆಗಮಿಸಿ ಶ್ರೀದೇವರ ಗರ್ಭಗುಡಿಯನ್ನು ಸಂಪೂರ್ಣವಾಗಿ ನಿರ್ಮಿಸಿ ಕೊಡುವ ಬಗ್ಗೆ ಘೋಷಿಸಿದರು. ಹಾಗೆಯೇ ಊರಿನ ಪ್ರತಿ ಮನೆಯವರು, ಭಕ್ತರು ತನು ಮನ, ಧನ ಸಹಾಯ ನೀಡಿ ಜೀರ್ಣೋದ್ಧಾರಕ್ಕೆ ಸಹಕರಿಸುವಂತೆ ಕೋರಿದರು.

ಮಾರ್ಗದರ್ಶಕರಾಗಿ ಆಗಮಿಸಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು, ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಪ್ರತಿ ಮನೆಯ ಭಕ್ತರು ಸೇರಿಕೊಂಡು ಮಾಡಿದ್ದಲ್ಲಿ ಅದರ ಪುಣ್ಯಫಲವನ್ನು ಲಭಿಸುತ್ತದೆ ಎಂದರು.

ಸಭೆಯಲ್ಲಿ ಉದ್ಯಮಿಗಳಾದ ಕೃಷ್ಣಾನಂದ ಚಾತ್ರ, ಸಟ್ವಾಡಿ ದಿನಕರ ಶೆಟ್ಟಿ, ದೇವಸ್ಥಾನದ ಪುರೋಹಿತರಾದ ಶ್ರೀನಿವಾಸ್ ಅಡಿಗ ಗುಡ್ಡಟ್ಟು, ಸೌಕೂರು ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿಯಾಗಿರುವ ಅನಂತ ಅಡಿಗ ಸೌಕೂರು, ಕೇಶವ ಅಡಿಗ ಮಕ್ಕೀಮನೆ ಬಳ್ಕೂರು, ಯೋಗೀಶ ಪುರಾಣಿಕ ಕಾಡಿನಕೊಂಡ, ವಿಶ್ವನಾಥ ಪುರಾಣಿಕ ಕಾಡಿನಕೊಂಡ, ಕುಂದಾಪುರದ ವಕೀಲರಾದ ರಾಘವೇಂದ್ರ ಚರಣ ನಾವಡ, ಸೇರಿದಂತೆ ಗ್ರಾಮದ ಹಲವಾರು ಭಕ್ತರು, ಗ್ರಾಮಸ್ಥರು, ಪರವೂರ ಭಕ್ತಾದಿಗಳು ಹಾಜರಿದ್ದರು.

ಸ್ಥಳವಂದಿಗರಾದ ಕಾಡಿನಕೊಂಡ ಸುಬ್ರಾಯ ಪುರಾಣಿಕರು ಮಾತನಾಡಿ ಈ ದೇವಸ್ಥಾನವು ಸುಮಾರು ಐದು ಶತಮಾನಗಳ ಇತಿಹಾಸ ಹೊಂದಿರುವ ಬಗ್ಗೆ ತಿಳಿಸಿದರು. ಗ್ರಾಮಸ್ಥರ ಪರವಾಗಿ ಅಜಿತ್ ಶೆಟ್ಟಿ ಕಾಳಾವರ, ರವೀಂದ್ರ ದೇವಾಡಿಗ ಹೇರಿಕೆರೆ ಅನಿಸಿಕೆ ಹಂಚಿಕೊಂಡರು. ವಿದ್ವಾನ್ ಮಾದವ ಅಡಿಗ ಸ್ವಾಗತಿಸಿ, ಶ್ರೀಮತಿ ಶಾಲಿನಿ ಮತ್ತು ಶ್ರೀಮತಿ ಶೋಭಾ ಪುರಾಣಿಕ ಶ್ರೀದೇವರನ್ನು ಪ್ರಾರ್ಥಿಸಿ ನಟರಾಜ ಪುರಾಣಿಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!