spot_img
Wednesday, April 1, 2026
spot_img

ಹವ್ಯಾಸಿ ಕಲಾರಂಗದಲ್ಲಿ ಆಶುಪಟುತ್ವ ಬೆಳೆಯಬೇಕು-ಮೊಗೆಬೆಟ್ಟು

ಕೋಟ: ಹವ್ಯಾಸಿ ಯಕ್ಷಗಾನ ಕಲಾರಂಗ ಇವತ್ತು ವೃತ್ತಿ ರಂಗಭೂಮಿಗೆ ಸರಿಮಿಗಿಲೆಂಬಂತೆ ಸರ್ವಾಂಗೀಣ ಪ್ರಗತಿ ಕಾಣುತ್ತಿದೆ. ಯಕ್ಷಗಾನದಲ್ಲಿ ವಾಚಿಕತೆಗೂ ವಿಶೇಷ ಮಹತ್ವವಿದೆ. ಸಿದ್ಧ ಅರ್ಥಗಳಿಗಷ್ಟೆ ಬದ್ಧರಾಗದೆ ಹವ್ಯಾಸಿ ಕಲಾವಿದರು ಆಶುಪಟುತ್ವ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆಯೊಂದಿಗೆ ಪೌರಾಣಿಕ ಪ್ರಸಂಗಗಳ ಅಧ್ಯಯನ ಸುಲಭಸಾಧ್ಯ , ಈ ನೆಲೆಯಲ್ಲಿ ಯಕ್ಷ ಸೌರಭ ಸಂಸ್ಥೆ ಪ್ರಯತ್ನಶೀಲವಾಗಿದೆ ಎಂದು ಕವಿ, ಸಾಹಿತಿ ಮತ್ತು ಯಕ್ಷ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹೇಳಿದರು.

ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ದಶಮಾನೋತ್ತರ ವರ್ಷದ ವಿಶಿಷ್ಟ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸೌರಭದ ವಾಚಿಕ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಸಭೆಯಲ್ಲಿ ಕಲಾರಂಗದ ಅಧ್ಯಕ್ಷರಾದ ಗಿರೀಶ್ ಗಾಣಿಗ ಬೆಟ್ಲಕ್ಕಿ, ಉಪಾಧ್ಯಕ್ಷರಾದ ಶ್ರೀನಾಥ್ ಉರಾಳ, ಮಾಜಿ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಮತ್ತು ಪ್ರಶಾಂತ್ ಪಡುಕರೆ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ದೇವಾಡಿಗ, ಸಂಘದ ಸದಸ್ಯರಾದ ರಾಜೇಶ್ ಕರ್ಕೇರ ಕೋಡಿ ಮತ್ತು ಯಶಸ್ ಕೋಟ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭೀಷ್ಮ ವಿಜಯ ಎನ್ನುವ ಪೌರಾಣಿಕ ಪ್ರಸಂಗದ ತಾಳಮದ್ದಳೆಯ ತರಬೇತಿಯನ್ನು ಮಾಡಲಾಯಿತು.

ರಾಜೇಶ್ ಕರ್ಕೇರ ಸ್ವಾಗತಿಸಿದರು, ಮಂಜುನಾಥ್ ಭಂಡಾರಿ ವಂದಿಸಿದರು, ಯಶಸ್ ಕೋಟ ಕಾರ್ಯಕ್ರಮವನ್ನು ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!