spot_img
Wednesday, April 1, 2026
spot_img

ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಗೆ ಶಿಲಾಮಹೂರ್ತ

ಹಾಲಾಡಿ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಗೆ ಶಿಲಾಮಹೂರ್ತ ಕಾರ್ಯಕ್ರಮ ಆ.೧೭ರಂದು ಆದಿತ್ಯವಾರ ಬೆಳಿಗ್ಗೆ ಶ್ರೀ ಕ್ಷೇತ್ರದ ಅರ್ಚಕರು ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವೇದಮೂರ್ತಿ ಸೂರ್ಯನಾರಾಯಣ ಬಾಯರಿಯವರ ಧಾರ್ಮಿಕ ಮಾರ್ಗದರ್ಶನದಲ್ಲಿ ನೆರವೇರಿತು.

ಶಿಲಾ ಮಹೂರ್ತದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೈದರಾಬಾದ್ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ದೇವಸ್ಥಾನದ ಜೀರ್ಣೋದ್ದಾರ ಕಾರ್ಯವನ್ನು ನಾವು ಮಾಡಿದ್ದೇವೆ ಎನ್ನುವುದಕ್ಕಿಂತ ಅದರ ಒಂದು ಭಾಗವಾಗಿದ್ದೇವೆ ಎನ್ನುವುದು ಉತ್ತಮ. ಅಂತಹ ಅವಕಾಶಗಳು ದೊರೆತಾಗ ಪ್ರತಿಯೊಬ್ಬರು ತೊಡಗಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸಬೇಕು. ಎಲ್ಲರಿಗೂ ಹೆಚ್ಚಿನ ಧನಸಹಾಯ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.. ಅವರು ತಮ್ಮಲ್ಲಿ ಏನಿದೆಯೋ ಅದನ್ನು ದೇವತಾ ಕಾರ್ಯಕ್ಕೆ ಸಮರ್ಪಿಸುವ ಮೂಲಕ ಕೃತಾರ್ಥರಾಗಬೇಕು ಎಂದರು.

ದಾಂಡೇಲಿಯ ಉದ್ಯಮಿ ಎಸ್. ಪ್ರಕಾಶ ಶೆಟ್ಟಿ.ಗೈನಾಡಿಯವರು ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಬ್ರಹ್ಮ ದೇವಸ್ಥಾನವು ಅತಿ ಪುರಾತನ ದೇವಸ್ಥಾನವಾಗಿದ್ದು, ಮೊದಲಿನಿಂದಲೂ ಈ ಮಾರ್ಗದಲ್ಲಿ ಸಂಚರಿಸುವಾಗ ದೇವರಿಗೆ ಕೈಮುಗಿದು ಪ್ರಾರ್ಥಿಸಿದಾಗ ನಮ್ಮ ಕೋರಿಕೆ ದೇವರು ಈಡೇರಿಸುತ್ತಿದ್ದು, ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣ ಸಹಕರಿಸುವುದಾಗಿ ನುಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕುತ್ಯಾರು ನಾರಾಯಣ ಶೆಟ್ಟಿ. ಆಡಳಿತ ಸಮಿತಿಯ ಅಧ್ಯಕ್ಷರಾದ ದಿನಕರ್ ತೋಳಾರ್. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಬಂಟಕೋಡು ಗಣಪಯ್ಯ ಶೆಟ್ಟಿ. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಆರ್.ನವೀನಚಂದ್ರ ಶೆಟ್ಟಿ,ರಟ್ಟಾಡಿ. ಹಾಲಾಡಿ ಶ್ರೀ ಮರಳುಚಿಕ್ಕು ದೇವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ, ಹಾಲಾಡಿ. ವಿಶಾಲಾಕ್ಷಿ. ಎನ್.ಶೆಟ್ಟಿ, ಗಾವಳಿ. ರಾಜೀವ ಶೆಟ್ಟಿ, ಶಾನ್ಕಟ್ಟು ಮತ್ತು ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಸೂರ್ಯಪ್ರಕಾಶ ದಾಮ್ಲೆ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಹಾಲಾಡಿ ಸಂತೋಷ ಶೆಟ್ಟಿ ನೂತನ ಜೀರ್ಣೋದ್ದಾರ ಸಮಿತಿಯ ವಿವರವನ್ನು ಮಂಡಿಸಿದರು. ದಿನಕರ ತೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!