spot_img
Monday, March 16, 2026
spot_img

ಜ್ಞಾನದ ತುಡಿತದಿಂದ ಯಶಸ್ಸಿನ ಶಿಖರವನ್ನು ಏರಲು ಸಾಧ್ಯ- ಗಣಪತಿ ಕೆ

ಕುಂದಾಪುರ: ಸತತ ಪರಿಶ್ರಮ, ದೃಢ ಸಂಕಲ್ಪ, ಶಿಸ್ತು ಬದ್ಧ ಕಲಿಕೆಯಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ ಎಂದು ನಿವೃತ್ತ ವಿದ್ಯಾಂಗ ಉಪ ನಿರ್ದೇಶಕ ಗಣಪತಿ. ಕೆ ಅಭಿಪ್ರಾಯಪಟ್ಟರು.

ಅವರು ಅಮಾಸೆಬೈಲು  ಡ್ಯುಯಲ್ ಸ್ಟಾರ್ ಶಾಲೆ ಇಲ್ಲಿನ ಮೂರನೇ ಬ್ಯಾಚ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಈ ಶಾಲೆಯು ಸತತವಾಗಿ ಮೂರು ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪ್ರತಿಶತ ನೂರರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಇದಕ್ಕೆ ಶಿಕ್ಷಕರ ವಿದ್ಯಾರ್ಥಿಗಳ ಹಾಗೂ ಪೋಷಕರ ಮತ್ತು ಸಂಸ್ಥೆಯ ಪರಿಶ್ರಮದ ಫಲದಿಂದ ಸಾಧ್ಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸದಾ ಕಲಿಕೆಯತ್ತವೇ ಚಿತ್ತವನ್ನು ನೆಡಬೇಕು. ಗ್ರಾಮೀಣ ಮಕ್ಕಳಲ್ಲಿ ಒಳ್ಳೆಯ ಪ್ರತಿಭೆ ಇದೆ ಅದನ್ನು ಎತ್ತಿ ಹಿಡಿಯುವಲ್ಲಿ ಪೋಷಕರ, ಶಿಕ್ಷಕರ ಹಾಗೂ ಶಾಲೆಯ ಪಾತ್ರ ಅತಿ ಮಹತ್ವದ್ದು ಅದನ್ನು ಡ್ಯುಯಲ್ ಸ್ಟಾರ್ ಶಾಲೆ, ಸತತವಾಗಿ ಮಾಡುತ್ತಾ ಬಂದಿದೆ ಎಂದು ಅಭಿಪ್ರಾಯ ಪಟ್ಟರು.

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಪಾಂಡುರಂಗ ಪೈ ಸಿದ್ದಾಪುರ ಮಾತನಾಡಿ ಡ್ಯೂಯಲ್ ಸ್ಟಾರ್ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ , ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಆದ್ದರಿಂದ ವಿದ್ಯಾಭಿಮಾನಿಗಳ ಹೃದಯದಲ್ಲಿ ಶಾಲೆಯ ಹೆಸರು ಹಚ್ಚಹಸಿರಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದಂತಹ ರಘುಪತಿ ಭಟ್ ಗೆಣಸಿನ ಕುಣಿ, ಮಾತನಾಡಿ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡಬೇಕು. ಕಿರಿಯರು ಹಿರಿಯರ ಪರಂಪರೆಯನ್ನು ಅನುಸರಿಸಿಕೊಂಡು ನಡೆಯಬೇಕು ಆಗ ಮಾತ್ರ ಸಂಸ್ಕಾರದೊಂದಿಗೆ ಶಿಕ್ಷಣವು ಕರಗತವಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ಕಾರ್ಯದರ್ಶಿ ವಡ್ದರ್ಸೆ ಪ್ರಕಾಶ್ ಆಚಾರ್ಯ ವಹಿಸಿ ನಮ್ಮ ಶಾಲೆಯಲ್ಲಿ ಸುಸಂಘಟಿತ ಶಿಕ್ಷಕರ ಬಳಗ, ಆಡಳಿತ ಮಂಡಳಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಾದ ಪರಿಶ್ರಮದಿಂದ ನಮ್ಮ ಶಾಲೆಯು ಹ್ಯಾಟ್ರಿಕ್ ಸಾಧನೆಯನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು .

ವೇದಿಕೆಯಲ್ಲಿ ಶಾಲಾ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕ ಶಶಿಧರ ದೇವಾಡಿಗ, ಶಾಲಾ ಮುಖ್ಯೋಪಾಧ್ಯಾಯನಿ ರಾಧಿಕಾ ರಾವ್, ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿ ಮಹೇಶ ಹೈಕಾಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಾಯತ್ರಿ ಅಡಿಗ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಸುನೀತಾ ಕಾಮತ್, ಶಿವಾನಂದ ಗೌಡ ಸಾಗರ, ವಿದ್ಯಾರ್ಥಿ ಉಪ ನಾಯಕಿ ಕುಮಾರಿ ವೈಷ್ಣವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾಭಾರತೀ ಕರ್ನಾಟಕ ಉಡುಪಿ ಜಿಲ್ಲೆ ವತಿಯಿಂದ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಲಹರಿ ಶೆಟ್ಟಿ ಅವರನ್ನು ಉತ್ತೇಜನ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಲಾಯಿತು ಹಾಗೂ ಶಾಲಾ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಹಾಗೂ ವಿಷಯ ಶಿಕ್ಷಕರುಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ನಿವೃತ್ತ ವಿದ್ಯಾಂಗ ಉಪ ನಿರ್ದೇಶಕ ಗಣಪತಿ. ಕೆ. ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಾಲಾ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಸ್ತಾಪಿಸಿದರು, ಶಿಕ್ಷಕ ವಿಘ್ನೇಶ್ ದೇವಾಡಿಗ ವಿದ್ಯಾರ್ಥಿಗಳ ಪಟ್ಟಿ ಹಾಗೂ ಸನ್ಮಾನ ಪತ್ರವನ್ನು ಓದಿದರು. ಶಿಕ್ಷಕಿ ರಾಧಿಕಾ ರಾವ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು, ಸಂಸ್ಥೆಯ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗ ವಂದಿಸಿದರು, ಶಿಕ್ಷಕಿ ನಳಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು.

 

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!