spot_img
Thursday, March 5, 2026
spot_img

ಬ್ರಹ್ಮಾವರ : ಹಲಸು, ಹಣ್ಣು ಮೇಳಕ್ಕೆ ಚಾಲನೆ | ಗ್ರಾಹಕರ ಗಮನ ಸೆಳದ ಹಲಸಿನ ತಳಿಗಳು

ಜನಪ್ರತಿನಿಧಿ (ಬ್ರಹ್ಮಾವರ ) : ಎಸ್‌ ಎಂಎಸ್‌ ಸಮುದಾಯ ಭವನದಲ್ಲಿ ಬ್ರಹ್ಮಾವರ ರOಟರಿ ಕ್ಲಬ್‌, ಬಾರ್ಕೂರು ರೋಟರಿ ಕ್ಲಬ್‌, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬ್ರಹ್ಮವಾರ ಐಸಿಏಆರ್‌ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ನಡೆಯುವ ಹಲಸು ಮತ್ತು ಹಣ್ಣು ಮೇಳಕ್ಕೆ ನಿನ್ನೆ(ಶುಕ್ರವಾರ) ಚಾಲನೆ ನೀಡಲಾಯಿತು.

ಮೇಳದಲ್ಲಿ ವಿವಿಧ ರೀತಿಯ ಹಣ್ಣುಗಳು, ಬಯಲು ಸೀಮೆಯ ಅತ್ಯಂತ ಸಿಹಿ ಮಾವು, ಕೆಂಪು ಹಲಸಿನ ಹಣ್ಣು, ಹಲಸಿನ ಖಾದ್ಯಗಳು, ಹಣ್ಣಿನ ಐಸ್‌ ಕ್ರೀಂಗಳು, ಹಣ್ಣಿನ ಸಸಿಗಳು, ತರಕಾರಿ ಬೀಜಗಳು ಮಳಿಗೆಗಳು ಸೇಇರ ನೂರಾರು ಮಳಿಗೆಗಳು ಗ್ರಾಹಕರ ಗಮನ ಸೆಳೆದವು.

ಹಲಸಿನ ಕಾಯಿ ಬಿಸಿಬಿಸಿ ಕಬಾಬ್, ಗೋಬಿ ಮಂಚೂರಿ,ಹಲಸಿನ ಹಣ್ಣಿನ ಜಿಲೇಬಿ, ಜಾಂ, ಹಪ್ಪಳ, ಬಿಸಿ ಬಿಸಿ ಕಡಬು ಸೇರಿ ಹಲಸಿನ ಹೋಳಿಗೆಯ ಖರೀದಿ ಜೋರಾಗಿತ್ತು. ಖಾದ್ಯಗಳನ್ನು ಸವಿಯಲು ಗ್ರಾಹಕರು ಮುಗಿಬಿದ್ದರು.

ಮೇಳಕ್ಕೆ ಚಾಲನೆ : ರೋಟರಿಯ ದೇವಾನಂದ ಅವರು ಮೇಳಕ್ಕೆ ಚಾಲನೆ ನೀಡಿದರು. ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಆರೂರು ಶ್ರೀಧರ ವಿ. ಶೆಟ್ಟಿ, ಡಾ. ಎ.ಬಿ ಪಾಟೀಲ್‌, ಭುವನೇಶ್ವರಿ ಸೇರಿ ಇತರರು ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!