spot_img
Thursday, March 5, 2026
spot_img

ಬ್ರಹ್ಮಾವರ : ಹಲಸು, ಹಣ್ಣು ಮೇಳ | ಗ್ರಾಹಕರ ಗಮನ ಸೆಳೆದ ʼಡೆಂಗ್‌ ಸೂರ್ಯʼ ಹಲಸು

ಮಾವಿನ ಹಣ್ಣುಗಳು, ಹಲಸಿನ ಹಣ್ಣುಗಳು, ಮಾವು, ಹಲಸು ಸೇರಿ ಇತರೆ ಸಸಿಗಳ ಸಾಲು ಮಳಿಗೆಗಳು, ಗುಂಪು ಸೇರಿ ಖರೀದಿ ಮಾಡುತ್ತಿರುವ ಗ್ರಾಹಕರು, ಹಣ್ಣುಗಳ ಖರೀದಿ ಮಾತ್ರವಲ್ಲದೆ, ಅಪರೂಪದ ದೇಸಿ ಮತ್ತು ವಿದೇಶಿ ತಳಿಗಳೂ  ಕೂಡ ನೋಡುಗರ ಗಮನ ಸೆಳೆದಿದ್ದು, ರೋಟರಿ ಕ್ಲಬ್‌ ಬ್ರಹ್ಮಾವರ, ರೋಟರಿ ಕ್ಲಬ್‌ ಬಾರ್ಕೂರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದೆ ಹಾಗೂ ಡಿಪ್ಲಮೋ ಕೃಷಿ ಮಹಾ ವಿದ್ಯಾಲಯ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಂ.ಎಸ್‌ ಸಭಾಭವನದಲ್ಲಿ ನಡೆದ ಹಲಸು ಮತ್ತು ಹಣ್ಣು ಮೇಳದಲ್ಲಿ.

ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ಮೊದಲ ದಿನ ಗ್ರಾಹಕರ ಸಂಖ್ಯೆ ತುಸು ಕಡಿಮೆಯಿತ್ತು. ಕೊಂಚ ಮಳೆ ವಿರಾಮ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ವಾರಾಂತ್ಯವಾಗಿರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದಾಗ್ಯೂ, ಹಸಿದಾಗ ಹಲಸು, ಉಂಡಾಗ ಮಾವು ಎಂಬುದು ವಾಡಿಕೆ. ಹಣ್ಣುಗಳ ರಾಜ ಮಾವು ಮೇಳದಲ್ಲಿ ರಾರಾಜಿಸುತ್ತಿದ್ದರೆ, ಇತ್ತ ಹಲಸಿನ ರಾಶಿ ಗ್ರಾಹಕರನ್ನು ಕೈಬೀಸಿ ಕರೆಯುತ್ತದ್ದವು. ವಿವಿಧ ತಳಿಗಳ ಮಾವು, ಹಲಸು ಸಸಿಗಳೂ ಕೃಷಿ ಆಸಕ್ತರನ್ನು ಸೆಳೆಯುತ್ತಿದ್ದವು. ರಾಮನಗರ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ಮಳಿಗೆಗಳು ಬಂದಿದ್ದವು.

ನೂರಾರು ಮಳಿಗೆಗಳು ಮೇಳದ ವಿಶೇಷ :
ನೂರಾರು ಮಳಿಗೆಗಳು, ಹಲವಾರು ಹಲಸಿನ ತಿನಿಸುಗಳು, ಹಣ್ಣಿನ ಬಗೆ ಬಗೆ ಐಸ್‌ ಕ್ರೀಂಗಳು, ಹಲಸಿನ ಹೋಳಿಗೆಗಳು, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್‌ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು, ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದವು.

ವಿಧವಿಧದ ಹಲಸು ತಳಿಗಳು :
ಚಂದ್ರ ಹಲಸು, ಸರ್ವಋತು ಹಲಸು, ಜೆ೩೩(ಸ್ವೀಟ್), ಡೆಂಗ್‌ ಸೂರ್ಯ, ಎವಿಯಾರ್ಕ್‌ (ಫಿಲಿಫಿನ್ಸ್‌) ಗಮ್‌ ಲೆಸ್‌, ಸೀಡ್‌ ಲೆಸ್‌, ಸಿಂಧೂರ ಸೇರಿ ವಿವಿಧ ತಳಿಯ ಹಲಸುಗಳು ಗ್ರಾಹಕರ ಕೈಗೆಟುಕುವ ದರದಲ್ಲಿ ಮಾರಾಟಕ್ಕಿದ್ದವು.

ಥಾಯ್‌ ಲ್ಯಾಂಡ್‌ ಮೂಲದ ಕೆಂಪು ಹಲಸಿನ ತಳಿಯಾದ ʼಡೆಂಗ್‌ ಸೂರ್ಯʼ ಕರ್ನಾಟಕ ಮತ್ತು ಕೇರಳದಲ್ಲೂ ಜನಪ್ರಿಯವಾಗಿದೆ. ಆಕರ್ಷಕ ಕೆಂಪು ಸೊಳೆಯ, ಅಂಟು ಕಡಿಮೆ ಇರುವ ನೆಟ್ಟ ನಾಲ್ಕು ವರ್ಷಗಳಲ್ಲೇ ಕಾಯಿ ಬೆಳೆಯುವ ಕೆಂಪು ಹಲಸಿನ ತಳಿ ಇದು. ಹಲಸಿನ ಮೇಳದಲ್ಲಿ ಡೆಂಗ್‌ ಸೂರ್ಯ ಹಲಸಿನ ಗಿಡಗಳ ಖರೀದಿಯಲ್ಲಿ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡು ಬಂತು.

ಹತ್ತಾರು ಮಾವಿನ ತಳಿಗಳು :
ಕೆಸರಿ ಮ್ಯಾಂಗೋ, ಮೆಲ್ಗೋವಾ ಮ್ಯಾಂಗೋ, ಕೊಲೊಂಬೋ ಮ್ಯಾಂಗೋ, ವಾಸ್ತಾರ ಮ್ಯಾಂಗೋ, ನೀಲಂ ಮ್ಯಾಂಗೋ, ಹಿಮ ಪಸಂದ್‌, ಸುವರ್ಣ ರೇಖಾ, ಮಿಯಾಝಾಕಿ, ನಮ್‌ಡಕ್‌ ಮ್ಯಾಂಗೋ, ಬನಾನ ಮ್ಯಾಂಗೋ, ಮಲ್ಲಿಕಾ ಮ್ಯಾಂಗೋ, ತೋತಾಪುರಿ, ಜಹಾಂಗೀರ್‌ ಮ್ಯಾಂಗೋ ತಳಿಗಳು ಮಾತ್ರವಲ್ಲದೇ, ಹಣ್ಣಗಳು ಕೂಡ ಮೇಳದಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದವು.

ಆಕರ್ಷಿಸಿದ ಹಲಸಿನ ಜಿಲೇಬಿ, ಹಲಸಿನ ಹೋಳಿಗೆ :
ಮೇಳದಲ್ಲಿ ಮೇಳದಲ್ಲಿ ಬಹಳ ವಿಶೇಷವಾಗಿ ಗ್ರಾಹಕರನ್ನು ಸೆಳೆದಿದ್ದು ಹಲಸಿನ ಜಿಲೇಬಿ, ಹಲಸಿನ ಹೋಳಿಗೆ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ವಿಧವಿಧದ ಖಾದ್ಯಗಳು. ಹಲಸಿನ ಹಣ್ಣಿನ ಬಿರಿಯಾನಿ ಸೇರಿ ಬೇರೆ ಬೇರೆ ರುಚಿರುಚಿಯಾದ ತಿನಿಸುಗಳನ್ನು ತಿನ್ನುವುದಕ್ಕೆ ಗ್ರಾಹಕರು ಮುಗಿಬಿದ್ದ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು.

ಯಾರು ಏನಂದ್ರು !? :

ಮಳೆಯ ಕಾರಣದಿಂದ ಮೊದಲ ದಿನ ಸ್ವಲ್ಪ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ವಾರಾಂತ್ಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಲಸು ಹಾಗೂ ಮಾವು ಹೊಸ ಹೊಸ ತಳಿಗಳ ಖರೀದಿಗೆ ಜನರು ಹೆಚ್ಚು ಮನಸ್ಸು ಮಾಡುತ್ತಿದ್ದಾರೆ.
-ಫಾಯಿಸ್‌, ಗ್ರೀನ್‌ ವರ್ಲ್ಡ್‌ ಮಾಲೀಕರು.


ಕಳೆದ ಮೂರು ವರ್ಷಗಳಿಂದ ಮಾರಾಟಕ್ಕೆ ಬರುತ್ತಿದ್ದೇವೆ. ಉತ್ತಮ ಆಯೋಜನೆ ಮಾಡುತ್ತಿದ್ದಾರೆ.  ಮಳೆ ಬಿಟ್ಟರೇ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ರು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀಸುತ್ತಿದ್ದಾರೆ.

-ರೋಹಿತ್‌ ಬಂಟ್ವಾಳ
ನೇತ್ರಾವತಿ ನರ್ಸರಿ

ಮೂರು ವರ್ಷಗಳಿಂದ ಬರುತ್ತಿದ್ದೇವೆ. ಹಲಸು, ಮಾವು ಮೇಳಕ್ಕಾಗಿಯೇ ನಾವು ಕಾಯುತ್ತೇವೆ. ನಮಗಂತೂ ಇಂತಹ ಹಲಸು ಮೇಳ ನಮ್ಮೂರಿನ ಸಮೀಪದಲ್ಲೇ ಆಗುತ್ತಿರುವುದು ಖುಷಿ ಇದೆ. ಮಾವು, ಹಲಸು ಖರೀದಿಸಿದ್ದೇವೆ. ಎಲ್ಲವೂ ರೀಸನೇಬಲ್‌ ಬೆಲೆಯಲ್ಲಿ ನಮಗೆ ಸಿಗುತ್ತಿವೆ.
-ಅಂಜಲಿ, ಗ್ರಾಹಕರು

ವರದಿ : ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!