spot_img
Monday, March 16, 2026
spot_img

ರಹಿಮಾನ್‌ ಹತ್ಯೆ : ಕಾಂಗ್ರೆಸ್‌ ವಿರುದ್ಧ ಸಿಟ್ಟಿಗೆದ್ದ ಮುಸ್ಲೀಂ ಮುಖಂಡರಿಂದ ಶುಕ್ರವಾರ ಸಾಮೂಹಿಕ ರಾಜೀನಾಮೆಗೆ ನಿರ್ಧಾರ

ಜನಪ್ರತಿನಿಧಿ (ಮಂಗಳೂರು/ಬೆಳ್ತಂಗಡಿ) : ಕರಾವಳಿ ಮತ್ತೆ ಉದ್ವಿಘ್ನಗೊಂಡಿದೆ. ರೌಡಿ ಶೀಟರ್ ಸುಹಾಸ್​ ಶೆಟ್ಟಿಯ ಬರ್ಬರ ಹತ್ಯೆಯಿಂದ ಬೂದಿ ಮುಚ್ಚಿದ ಕೆಂಡವಾಗಿದ್ದ ಕರಾವಳಿ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕರಾವಳಿಯ ಮುಸ್ಲಿಂ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ.‌

ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಹಿಮಾನ್ ಹತ್ಯೆ ಕೇಸ್ ಬಗ್ಗೆ ತನಿಖೆ ನಡೆಸಲು 5 ತಂಡ ರಚಿಸಿದ್ದಾರೆ ಎಸ್​ಪಿ ಯತೀಶ್. ಗಾಯಗೊಂಡ ಕಲಂದರ್ ಶಾಫಿ ನೀಡಿದ ಮಾಹಿತಿ ಅನ್ವಯದ ಮೇಲೆ ತನಿಖೆ ಮುಂದುವರೆದಿದೆ. ಅಬ್ದುಲ್ ರಹೀಂ ಮೇಲೆ ದಾಳಿ ನಡೆಸಿದ್ದು ಒಟ್ಟು 6 ಜನರ ಗ್ಯಾಂಗ್. ಕೊಳ್ತಮಜಲಿನ ಬಾರಲ್ಲಿ ಮದ್ಯ ಸೇವಿಸಿ ದುಷ್ಕರ್ಮಿಗಳು ಬಂದಿದ್ದರು. ಸದ್ಯ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮುಸ್ಲಿಂ ಮುಖಂಡರು ಕಾಂಗ್ರೆಸ್​ಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅಲ್ಪಸಂಖ್ಯಾತರ ಘಟಕಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೇ ಮುಸ್ಲಿಂ ಮುಖಂಡರು ಬೇರೆ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಶ್ರಫ್, ಕೆಲದಿನಗಳ ಹಿಂದೆ ನಡೆದ ಗುಂಪು ಹಲ್ಲೆ ಹತ್ಯೆ ಮತ್ತು ಅಬ್ದುಲ್ ರಹೀಂ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಶಾಂತಿ ನೆಲೆಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಮುಸ್ಲಿಮರು ಇಲ್ಲಿ ಆತಂಕದಲ್ಲಿದ್ದಾರೆ. ಸದ್ಯದಲ್ಲೇ ಸಾಮೂಹಿಕ ರಾಜೀನಾಮೆ ಸಲ್ಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶೇ. ೮೦ರಷು ಮುಸ್ಲೀಂ ಮತ ಪಡೆದು ರಚನೆಯಾಗಿರುವ ಸರ್ಕಾರದಿಂದ ಮುಸ್ಲೀಂ ಸಮುದಾಯಕ್ಕೆ ಶೇ.೧೦ರಷ್ಟು ಸುರಕ್ಷತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದಾದರೇ ನಾವು ಪಕ್ಷದಲ್ಲಿದ್ದು ಯಾವ ಪ್ರಯೋಜನವೂ ಇಲ್ಲ. ನಾಯಕರು ಎಂದು ಕರೆಸಿಕೊಂಡವರು ನಮ್ಮನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಯಾವ ಮನವಿಗೂ ನಾಯಕರು ಸ್ಪಂದಿಸುತ್ತಿಲ್ಲ. ಗಂಭೀರವಾಗಿ ಪರಿಗಣಿಸದೇ ಇರುವ ಪಕ್ಷ ಮತ್ತು ಸರ್ಕಾರ ನಮಗೆ ಯಾಕೆ ಬೇಕು ? ಎಂದು ಪ್ರಶ್ನಿಸಿದ್ದಲ್ಲದೆ ಸಾಮೂಹಿಕ ರಾಜೀನಾಮೆಗೆ ಮುಸ್ಲೀಂ ಮುಖಂಡರು ಮುಂದಾಗಿದ್ಧಾರೆ.

ನಾಳೆ(ಶುಕಕ್ರವಾರ) ಮಧ್ಯಾಹ್ನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ರಾಜೀನಾಮೆ ನೀಡುವುದಕ್ಕೆ ಮುಸ್ಲೀಂ ಮುಖಂಡರು ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಶೀದ್‌ ಯು.ಕೆ, ಚಾರ್ಮಾಡಿ ಗ್ರಾಮ ಬೂತ್‌ ಸಮಿತಿ ಅಧ್ಯಕ್ಷ ಇಲ್ಯಾಸ್‌ ಕಕ್ಕಿಂಜೆ ಸೇರಿ ಹಲವು ಪ್ರಮುಖರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!