spot_img
Monday, March 16, 2026
spot_img

ಮೇ 25ರಿಂದ ಮೇ 29: ಬೈಂದೂರು ಒತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ವೃಂದಾವನ ಪುನಃ ಪ್ರತಿಷ್ಠೆ, ಶತಕಲಶಸಹಿತ ಬ್ರಹ್ಮಕಲಶೋತ್ಸವ

ಜನಪ್ರತಿನಿಧಿ ವಾರ್ತೆ] ಬೈಂದೂರು: ಬೈಂದೂರು ಸಮೀಪದ ಒತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ)ದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ವೃಂದಾವನ ಪುನಃ ಪ್ರತಿಷ್ಠೆ-ಮಹಾಅನ್ನಸಂತರ್ಪಣೆ ಶ್ರೀ ಆಂಜನೇಯ ಶ್ರೀ ನವಗ್ರಹ ದೇವರ ಸನ್ನಿಧಿಯಲ್ಲಿ ಕಲಶಾಭಿಷೇಕ-ಅನ್ನಸಂತರ್ಪಣೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ವೃಂದಾವನಕ್ಕೆ ಶತಕಲಶಸಹಿತ ಬ್ರಹ್ಮಕಲಶೋತ್ಸವ-ಮಹಾಅನ್ನಸಂತರ್ಪಣೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಮೇ 25ನೇ ರವಿವಾರದಿಂದ ಮೊದಲ್ಗೊಂಡು ಮೇ 29ನೇ ಗುರುವಾರದ ಪರ್ಯಂತ ನಡೆಯಲಿದೆ.

ಮೇ 25ನೇ ರವಿವಾರ ಸಾಯಂಕಾಲ ಘಂಟೆ 5 ರಿಂದ ಋತ್ವಿಜರ ಸ್ವಾಗತ, ಶಿಲ್ಪ ಪೂಜೆ. ಆಲಯ ಪ್ರತಿಗ್ರಹ, ಮಹಾಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಗೋಪ್ರವೇಶ ಪಂಚಗವ್ಯ, ವಾಸ್ತು ಪೂಜೆ, ಭೂಶುದ್ದಿ ಹೋಮ, ವಾಸ್ತುಯಾಗ, ರಾಕ್ಷೋಘ್ನ ಹೋಮ, ದಿಕ್ಷಾಲ ಬಲಿ, ಶ್ರೀ ನಾಗದೇವರ ಕ್ಷೇತ್ರದಲ್ಲಿ ವಾಸ್ತು ವಿಧಿ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಮೇ 26ನೇ ಸೋಮವಾರ ಪುಣ್ಯಾಹ, ದೇವನಾಂದಿ, ಕಂಕಣಬಂಧ, ಶ್ರೀ ಮಹಾಗಣಪಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂಕಾಲ ಘಂಟೆ 5ರಿಂದ ಮಹಾಸುದರ್ಶನ ಯಾಗ, ಭೂವರಾಹ ಹೋಮ, ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.

ಮೇ 27ನೇ ಮಂಗಳವಾರ ಬೆಳಿಗ್ಗೆ ಗಂಟೆ 8ರಿಂದ ನವಗ್ರಹಯಾಗ, ಪುರುಷ ಸೂಕ್ತ ಯಾಗ, ವಾಯುಸ್ತುತಿ ಹೋಮ, ಶ್ರೀ ಆಂಜನೇಯ, ಶ್ರೀ ನವಗ್ರಹ ದೇವರಿಗೆ 48 ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಶ್ರೀ ನಾಗದೇವರು ಮತ್ತು ಕ್ಷೇತ್ರಪಾಲ ದೇವರ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ. ಸಾಯಂಕಾಲ ಘಂಟೆ 5ರಿಂದ ವಿಷ್ಣುಚಕ್ರಾಭ್ಣಪೂಜೆ, ಆಶ್ಲೇಷಾ ಬಲಿ ನಡೆಯಲಿದೆ.

ಮೇ 28ನೇ ಬುಧವಾರ ಬೆಳಿಗ್ಗೆ ವಾಯುಸ್ತುತಿ ಹೋಮ, ಕಲಶ ಪ್ರತಿಷ್ಠೆ, ಆಧಿವಾಸ ಹೋಮ, ವಿಷ್ಣು ಸೂಕ್ತ ಹೋಮ, ಅಷ್ಟಾಕ್ಷರ ಮಂತ್ರ ಹೋಮ, ಶ್ರೀ ರಾಮ ನಾಮ ಯಜ್ಞ, ಘಂಟೆ 8-05ಕ್ಕೆ ಸರಿಯಾಗಿ ಶ್ರೀ ಪೇಜಾವರ ಮಠಾಧೀಶರಿಂದ ವೃಂದಾವನ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ಮಠದ ಪಟ್ಟ ದೇವರ ಪೂಜೆ, ಶ್ರೀಗಳಿಂದ ಆಶೀರ್ವಚನ, ಫಲ ಮಂತ್ರಾಕ್ಷತೆ, ಘಂಟೆ 12-00ಕ್ಕೆ ಮಹಾಪೂಜೆ, ಮಹಾಅನ್ನಸಂತರ್ಪಣೆ, ಸಾಯಂಕಾಲ ಘಂಟೆ 05 ರಿಂದ ಶ್ರೀ ರಾಮ ಭದ್ರಕ ಮಂಡಲ ಪೂಜೆ ನಡೆಯಲಿದೆ.

ಮೇ 29ನೇ ಗುರುವಾರ ಶತಕಲಶ ಸಹಿತ ಬ್ರಹ್ಮ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಘಂಟೆ 10-15ಕ್ಕೆ ಸರಿಯಾಗಿ ಶ್ರೀ ಚಿತ್ರಾಪುರ ಮಠಾಧೀಶರಿಂದ ವೃಂದಾವನಕ್ಕೆ ಶತಕಲಶ ಸಹಿತ ಬ್ರಹ್ಮಕಲಶೋತ್ಸವ, ಮಹಾಪೂಜೆ, ಶ್ರೀಪಾದರ ಪಟ್ಟದೇವರ ಪೂಜೆ, ಆಶೀರ್ವಚನ, ಫಲಮಂತ್ರಾಕ್ಷತೆ, ಘಂಟೆ 11-00ಕ್ಕೆ ಪಲ್ಲ ಪೂಜೆ, 12-00ಕ್ಕೆ ಮಹಾಪೂಜೆ, 12-30ರಿಂದ ಮಹಾಅನ್ನಸಂತರ್ಪಣೆ ನಡೆಯಲಿದೆ. ಮೇ 30 ಶುಕ್ರವಾರ ಸಂಪ್ರೋಕ್ಷಣೆ ನಡೆಯಲಿದೆ.

ಮೇ 28 ಬುಧವಾರ ಮಧ್ಯಾಹ್ನ 12.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮೀನುಗಾರಿಕೆ ಸಚಿವರಾದ ಮಾಂಕಾಳ ವ್ಯದ್ಯ ಪ್ರಧಾನ ಉಪಸ್ಥಿತರಿರುವರು. ಮೇ 29ರಂದು ಮಧ್ಯಾಹ್ನ 12-30ರಿಂದ ಮಂಗಳೂರು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಶ್ರೀ ಗುರುರಾಘವೇಂದ್ರ ಸ್ವಾಮಿ ಬೃಂದಾವರ ಟ್ರಸ್ಟ್ ಬೈಂದೂರು ಇದರ ಅಧ್ಯಕ್ಷರಾದ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಪ್ರಧಾನ ಉಪಸ್ಥಿತರಿರಲಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮೇ 26ರಂದು ಸಂಜೆ 5 ಗಂಟೆಗೆ ಮಹಿಳಾ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಮೇ 27 ಮಂಗಳವಾರ ಸಂಜೆ 6ರಿಂದ ಆಹ್ವಾನಿತ ಮಹಿಳಾ ಮತ್ತು ಪುರುಷ ತಂಡಗಳಿಂದ ಕುಣಿತ ಭಜನೆ, ಮೇ 28 ಬುಧವಾರ ಸಂಜೆ 7.30 ಸುರಭಿ ಬೈಂದೂರು ಮತ್ತು ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇವರಿಂದ ಯಕ್ಷ-ನಾಟ್ಯ-ವೈವಿಧ್ಯ, ಮೇ 29 ಗುರುವಾರ ಸಂಜೆ 6 ಗಂಟೆಯಿಂದ ಶ್ರೀದೇವಿ ಲಲಿತ ಕಲಾ ವೃಂದ ಕಾರ್ಕಳ ಇವರಿಂದ ಯಕ್ಷಗಾನ ದಕ್ಷಯಜ್ಞ ನಡೆಯಲಿದೆ ಎಂದು ಶ್ರೀ ಗುರುರಾಘವೇಂದ್ರ ಸ್ವಾಮಿ ಬೃಂದಾವರ ಟ್ರಸ್ಟ್ ಬೈಂದೂರು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!