spot_img
Tuesday, March 17, 2026
spot_img

ರವೀಂದ್ರ ಐತಾಳರ ಸಮಾಜಮುಖಿ ಕಾರ್ಯ ಶ್ಲಾಘನೀಯ- ಪಟ್ಲ ಸತೀಶ್ ಶೆಟ್ಟಿ

ಕೋಟ: ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್ ಸಮಾಜಸೇವೆಯ ಕಾರ್ಯವೈಖರಿ ವಿಶಿಷ್ಠವಾದದ್ದು ತೆರೆಯ ಮರೆಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುವುದಲ್ಲದೆ ಕಲಾವಿದರಿಗೆ ನೆರವು ಕಾರ್ಯ ಮಾಡುತ್ತಿದ್ದಾರೆ ಇದು ಅಭಿನಂದನಾರ್ಹ ಕಾರ್ಯವಾಗಿದೆ ಎಂದು ಪಟ್ಲ ಫೌಂಡೇಶನ್ ಪ್ರವರ್ತಕ ಸತೀಶ್ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು.

ಪಾರಂಪಳ್ಳಿ ಪಡುಕರೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರ ವತಿಯಿಂದ ಇಲ್ಲಿನ ಪಾರಂಪಳ್ಳಿ ಪಡುಕರೆಯ ಪ್ರಗತಿಪರ ಕೃಷಿಕ ರವೀಂದ್ರ ಐತಾಳರ ಮನೆಯ ವಠಾರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಕ್ಕಾಗಿ ಜೀವಿಸುವ ವ್ಯಕ್ತಿಗಳು ಸದಾ ಸಮಾಜದ ಒಳಿತಿನ ಬಗ್ಗೆ ಚಿಂತಿಸುತ್ತಾರೆ ತನ್ನ ಪುತ್ರನ ಹುಟ್ಟುಹಬ್ಬದ ಸಹಾಯಾರ್ಥ ನೆರವು ಕಾರ್ಯ ಭಗವಂತನು ಮೆಚ್ಚುವ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರವೀಂದ್ರ ಐತಾಳ್ ರವರು ಜೀರ್ಣೋದ್ಧಾರಗೊಳ್ಳುತ್ತಿರುವ ಪಾರಂಪಳ್ಳಿ ಶನೀಶ್ವರ ದೇಗುಲಕ್ಕೆ ಒಂದು ಲಕ್ಷ ರೂ ಹಾಗೂ ಮಾಣಿ ಚೆನ್ನಕೇಶವ ದೇಗುಲ,ಹಂದೆ ಮಹಾವಿಷ್ಣುಮಹಾಗಣಪತಿ ದೇಗುಲ,ಶಾಂಭವೀ ಶಾಲೆ ಗಿಳಿಯಾರು, ಖಾಸಗಿ ಪ್ರಾಥಮಿಕ ಶಾಲೆ ಪಾರಂಪಳ್ಳಿ,ಕವಳೆ ಕಟ್ಟೆ ಬಂಟ್ವಾಳ ಶಾಲೆ ಬಸ್ಸ್ ,ಕೃಷಿಕರಾದ ಜಯರಾಮ ಕದ್ರಿಕಟ್ಟು, ವಿದ್ಯಾರ್ಥಿಗಳಾದ ಪ್ರಜ್ವಲ್ ತಿಂಗಳಾಯ,ಸಿಂಚನ ವಿದ್ಯಾರ್ಥಿವೇತನ ಸಹಾಯಹಸ್ತ ನೀಡಲಾಯಿತು.

ಕೃಷಿ ಕಾರ್ಮಿಕರಾದ ಪದ್ದು ಮರಕಾಲ್ತಿ, ಖ್ಯಾತ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ, ಪಾವಂಜೆ ಮೇಳದ ಕಲಾವಿದ ಮೋಹನ್ ಬೆಳ್ಪಾಡಿ,ಪಟ್ಲ ಸತೀಶ್ ಶೆಟ್ಟಿ ಗುರುತಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ನಿವೃತ್ತ. ಶಿಕ್ಷಣಾಧಿಕಾರಿ ಶಿವಾನಂದ ಮಯ್ಯ ವಹಿಸಿದ್ದರು.  ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ಕಾರ್ಕಡ ಉಪಸ್ಥಿತರಿದ್ದರು.ಸಮಾಜಸೇವಕ ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್ ಪಾರಂಪಳ್ಳಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಕೆ.ರಾಜಾರಾಮ ಐತಾಳ್ ನಿರೂಪಿಸಿ ವಂದಿಸಿದರು.
ಪಾವಂಜೆ ಮೇಳದ ವತಿಯಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!